ನವದೆಹಲಿ: ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಹೊಸ ಪೀಳಿಗೆಗೆ ಮುನ್ನೆಡೆಸಲು ಅವಕಾಶ ಸಿಗಬೇಕು ಎಂದು ಹೇಳಿರುವ ಬೆನ್ನಲ್ಲೇ ಈಗ ರಾಜಸ್ತಾನದ ನೂತನ ಮುಖ್ಯಮಂತ್ರಿ ಪಟ್ಟಕ್ಕೆ ಸಚಿನ್ ಪೈಲೆಟ್ ಮುಂಚೂಣಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Astro Tips : ನಿಮ್ಮ ಅದೃಷ್ಟ ಬದಲಾಯಿಸುತ್ತದೆ ಈ ಹೂವು, ಹೀಗೆ ಬಳಸಿ; ಬಡತನ ತೊಲಗಿ ಧನ ಪ್ರಾಪ್ತಿಯಾಗುತ್ತದೆ


ತನೋಟ್ ಮಾತಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಜೈಸಲ್ಮೇರ್‌ಗೆ ಬಂದಿರುವ ಗೆಹ್ಲೋಟ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.ಏತನ್ಮಧ್ಯೆ, ಗೆಹ್ಲೋಟ್ ಭಾನುವಾರ ಜೈಸಲ್ಮೇರ್‌ನಲ್ಲಿರುವ ಕಾರಣ, ಅವರ ಪಾಳೆಯದ ಕೆಲವು ಶಾಸಕರು ರಾಜ್ಯ ಸಚಿವ ಶಾಂತಿ ಧರಿವಾಲ್ ಕರೆದ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.ಪೈಲಟ್ ಸಿಎಂ ಆಗುವ ವೇಳೆ ಗೆಹ್ಲೋಟ್ ಶಿಬಿರ ಕೈಗೊಳ್ಳಬೇಕಾದ ಮುಂದಿನ ಕ್ರಮವನ್ನು ನಿರ್ಧರಿಸಲು ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಹನ್ನೊಂದು ತಿಂಗಳ ಮಗು ತೊಟ್ಟಿಯಲ್ಲಿ ಬಿದ್ದು ಸಾವು


ಧರಿವಾಲ್ ಅವರ ನಿವಾಸದಲ್ಲಿ ರಾಜ್ಯ ಸಚಿವರಾದ ಮಹೇಶ್ ಜೋಶಿ, ಶಕುಂತಲಾ ರಾವತ್ ಮತ್ತು ಶಾಸಕರಾದ ಡ್ಯಾನಿಶ್ ಅಬ್ರಾರ್, ಮಹೇಂದ್ರ ಚೌಧರಿ ಮತ್ತು ಅಲೋಕ್ ಬೇನಿವಾಲ್ ಸೇರಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.