Ahmedabad Plane Crash Sad Story : ಲಂಡನ್‌ನಲ್ಲಿ ವಾಸಿಸುವ 38 ವರ್ಷದ ಅರ್ಜುನ್ ಪಟೋಲಿಯಾ ಕೆಲವು ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದರು. ತಮ್ಮ ಪತ್ನಿಯ ಅಂತ್ಯಕ್ರಿಯೆ ನೆರವೇರಿಸಿ ಹುಟ್ಟೂರಿನ ನದಿಯಲ್ಲಿ ಪತ್ನಿಯ ಚಿತಾಭಸ್ಮ ವಿಸರ್ಜಿಸುವ ಸಲುವಾಗಿ ಅವರು ಗುಜರಾತ್ ಗೆ ಆಗಮಿಸಿದ್ದರು. ಲಂಡನ್‌ಗೆ ಹಿಂತಿರುಗಲು ಏರ್ ಇಂಡಿಯಾ ವಿಮಾನ AI-171 ಹತ್ತಿದ ಅರ್ಜುನ್ ಇದು ತಮ್ಮ ಜೀವನದ ಅಂತಿಮ ಯಾತ್ರೆ ಎನ್ನುವುದನ್ನು ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ.
ವರದಿಯ ಪ್ರಕಾರ, ಅರ್ಜುನ್ ಅವರ ಪತ್ನಿ ಭಾರತಿಬೆನ್ ಒಂದು ವಾರದ ಹಿಂದೆ ನಿಧನರಾದರು.ಚಿತಾಭಸ್ಮವನ್ನು ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿರುವ ಅವರ ಪೂರ್ವಜರ ಗ್ರಾಮದಲ್ಲಿ ವಿಸರ್ಜಿಸಬೇಕು ಎನ್ನುವುದು ಭಾರತಿಬೆನ್ ಕೊನೆ ಆಸೆಯಾಗಿತ್ತು. ತಮ್ಮ ಪತ್ನಿಯ ಕೊನೆ ಆಸೆಯನ್ನು ಈಡೇರಿಸುವ ಸಲುವಾಗಿ ಅರ್ಜುನ್ ಪತ್ನಿಯ ಚಿತಾ ಭಸ್ಮವನ್ನು ಪೂರ್ಣ ಗೌರವ ಮತ್ತು ಭಕ್ತಿಯಿಂದ ತಾಯ್ನಾಡಿಗೆ ತೆಗೆದುಕೊಂಡು ಬಂದಿದ್ದರು. ಪತ್ನಿಯ ಆಸೆಯಂತೆ ಅವರ ಚಿತಾ ಭಸ್ಮ ಹುಟ್ಟೂರಿನ ನದಿಯಲ್ಲಿ ವಿಸರ್ಜನೆಯೂ ಆಯಿತು.
ಇದನ್ನೂ ಓದಿ : ಆ ಅದೃಷ್ಟ ಸಂಖ್ಯೆಯೇ ಗುಜರಾತ್ ಮಾಜಿ ಸಿಎಂ ವಿಜಯ್ ರುಪಾಣಿ ಸಾವಿಗೆ ಕಾರಣವಾಯ್ತಾ?
ಅಪ್ಪನ ಬರುವಿಕೆಗಾಗಿ ಎದುರು ನೋಡುತ್ತಿರುವ ಪುಟ್ಟ ಕಂಗಳು :
ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ನಂತರ, ಅರ್ಜುನ್ ಲಂಡನ್‌ಗೆ ಹಿಂತಿರುಗಲು ನಿರ್ಧರಿಸಿದರು. ಅಲ್ಲಿ ಅವರಿಗಾಗಿ ತಮ್ಮ 4 ಮತ್ತು 8 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಕಾದು ಕುಳಿತಿದ್ದರು. ತಾಯಿಯನ್ನು ಕಳೆದುಕೊಂಡಿರುವ ತಮ್ಮ ಮಕ್ಕಳನ್ನು ಹೆಚ್ಚು ದಿನ ಬಿಟ್ಟು ಇರುವುದು ಸಾಧ್ಯವಿಲ್ಲ, ಆದಷ್ಟು ಶೀಘ್ರ ತಮ್ಮ ಮಕ್ಕಳನ್ನು ಸೇರಬೇಕು ಎನ್ನುವ ತವಕದಲ್ಲಿದ್ದರು ಅರ್ಜುನ್. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಜೂನ್ 12 ರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಅರ್ಜುನ್ ಅವರನ್ನು ಕೂಡಾ ಬುದಿಯಾಗಿಸಿದೆ.
ಮೇಘಾನಿ ನಗರ ಪ್ರದೇಶದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ 242 ಪ್ರಯಾಣಿಕರಲ್ಲಿ ಈ ಅರ್ಜುನ್ ಕೂಡಾ ಒಬ್ಬರಾಗಿದ್ದರು. ಒಟ್ಟಿನಲ್ಲಿ ತಾಯಿ ಕಳೆದುಕೊಂಡಿದ್ದ ಆ ಇಬ್ಬರು ಮಕ್ಕಳ ಬಾಳಲ್ಲಿ ಈಗ ತಂದೆಯ ಆಸರೆಯೂ ದೂರವಾಗಿದೆ.
ಇದನ್ನೂ ಓದಿ : ಒಂದು ಗ್ರಾಂ ಅಲ್ಲ, ಎರಡಲ್ಲ...ಭಾರತದ ಈ ಸ್ಥಳದಲ್ಲಿ ಬರೋಬ್ಬರಿ 3300 ಟನ್ ಬಂಗಾರಕ್ಕೆ ಕಾವಲಾಗಿವೆ ವಿಶ್ವದ ವಿಷಪೂರಿತ ಹಾವುಗಳು..!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









