ಬೆಂಗಳೂರು : ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್​​ನಲ್ಲಿ ಭಾರತದ ಈಜುಗಾರರಾದ ಸಜನ್ ಪ್ರಕಾಶ್ ಮತ್ತು ನಟ ಮಾಧವನ್‌ ಪುತ್ರ  ವೇದಾಂತ್​ ಮಾಧವನ್ ಸಾಧನೆ ಮಾಡಿದ್ದಾರೆ. ಡ್ಯಾನಿಶ್ ಓಪನ್ ಈಜುಕೂಟದಲ್ಲಿ ಪುರುಷರ 200 ಮೀಟರ್ ಬಟರ್‌ಫ್ಲೈ ಸುತ್ತಿನಲ್ಲಿ ಸಜನ್ ಚಿನ್ನದ ಪದಕ ಗೆದ್ದಿದ್ದು, 1500 ಮೀಟರ್​ ಫ್ರೀಸ್ಟೈಲ್​ನಲ್ಲಿ ವೇದಾಂತ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: IPL 2022 : ಸೋಲಿನ ಸುಳಿಯಲ್ಲಿರುವ ಚೆನ್ನೈಗೆ ಇಂದು ಗುಜರಾತ್‌ ಸವಾಲು


ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಸಜನ್​ 200 ಮೀಟರ್​ ಬಟರ್​​ಫೈನಲ್​ಲ್ಲಿ 1 ನಿಮಿಷ 59.27 ಸೆಕೆಂಡ್​ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೊಂದೆಡೆ ಬಹುಭಾಷಾ ನಟ ಆರ್​. ಮಾಧವನ್​ ಮಗ ವೇದಾಂತ್ ಅವರು 1500 ಮೀಟರ್​ ಫ್ರೀಸ್ಟೈಲ್​ನಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. 10 ಮಂದಿಯ ಫೈನಲ್​ ಸುತ್ತಿನಲ್ಲಿ ವೇದಾಂತ್​ 15 ನಿಮಿಷ 57.86 ಸೆಕೆಂಡ್​ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. 


ಇನ್ನು ಸಂತಸ ವ್ಯಕ್ತಪಡಿಸಿ ಟ್ವೀಟ್​ ಮಾಡಿರುವ ನಟ ಮಾಧವನ್, "ನಿಮ್ಮೆಲ್ಲರ ಆಶೀರ್ವಾದ, ದೇವರ ಕೃಪೆಯಿಂದ ಸಜನ್ ಪ್ರಕಾಶ್ ಮತ್ತು ವೇದಾಂತ್​ ಮಾಧವನ್​ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್​​ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ತಂದುಕೊಟ್ಟಿದ್ದಾರೆ. ಕೋಚ್​ ಪ್ರದೀಪ್​ ಅವರಿಗೆ, ಸ್ವಿಮ್ಮಿಂಗ್ ಫೆಡರೇಷನ್​ ಆಫ್ ಇಂಡಿಯಾ ಮತ್ತು ಎಎನ್​ಎಸ್​ಎಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. 


IPL 2022: ಅಬ್ಬರಿಸುತ್ತಿರುವ ಆರ್‌ಸಿಬಿಗೆ ಅಂಕಪಟ್ಟಿಯಲ್ಲಿದೆ ಈ ಸ್ಥಾನ...


ಈ ಹಿಂದೆಯೂ ಮಾಧವನ್ ಪುತ್ರ ವೇದಾಂತ್‌ ಈಜು ಸ್ಪರ್ಧೆಯಲ್ಲಿ ಅನೇಕ ಸಾಧನೆ ಮಾಡಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದಿದ್ದ ಲಾತ್ವಿಯಾ ಓಪನ್‌ನಲ್ಲಿ ಕಂಚು ಪದಕ ಗೆದ್ದಿದ್ದ ಅವರು, ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿಯೂ ಸಹ ಏಳು ಪದಕಗಳನ್ನು ತೆಕ್ಕೆಗೆ ಪಡೆದುಕೊಂಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.