ಶಿವಸೇನಾ ಪಕ್ಷ ಸೇರಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಡಿಗಾರ್ಡ್..!

ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮೂರು ದಿನಗಳ ಮುನ್ನ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ದೀರ್ಘಕಾಲದ ಸಹಾಯಕ ಗುರ್ಮೀತ್ ಸಿಂಗ್ ಅಥವಾ ಶೇರಾ ಶುಕ್ರವಾರ ಶಿವಸೇನೆಗೆ ಸೇರಿದರು.

Last Updated : Oct 19, 2019, 01:53 PM IST
ಶಿವಸೇನಾ ಪಕ್ಷ ಸೇರಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಡಿಗಾರ್ಡ್..!  title=
Photo courtesy: Twitter

ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮೂರು ದಿನಗಳ ಮುನ್ನ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ದೀರ್ಘಕಾಲದ ಸಹಾಯಕ ಗುರ್ಮೀತ್ ಸಿಂಗ್ ಅಥವಾ ಶೇರಾ ಶುಕ್ರವಾರ ಶಿವಸೇನೆಗೆ ಸೇರಿದರು.

ಈಗ ಈ ಘೋಷಣೆಯನ್ನು ಶಿವಸೇನಾ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದೆ.ಗುರ್ಮೀತ್ ಸಿಂಗ್ ಅವರು ಮುಂಬೈನ ಮಾತೋಶ್ರೀಯಲ್ಲಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಯುವಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಅವರ ಸಮ್ಮುಖದಲ್ಲಿ ಶಿವಸೇನಾ ಸೇರಿದರು. 

ಅಕ್ಟೋಬರ್ 21 ರಂದು ಮಹಾರಾಷ್ಟ್ರ ಮತದಾನ ನಡೆಯಲಿದ್ದು, ಅಕ್ಟೋಬರ್ 24 ರಂದು ಮತ ಎಣಿಕೆ ನಡೆಯಲಿದೆ.

Trending News