ಗ್ರಾಹಕರಿಗೆ SBI ಅಲರ್ಟ್; ಇಂತಹ ಮಾಹಿತಿಯನ್ನು ಬ್ಯಾಂಕ್ ಎಂದಿಗೂ ಕೇಳುವುದಿಲ್ಲ!

ನೀವು ಯಾವುದೇ ಬ್ಯಾಂಕಿಂಗ್ ವಿವರಗಳನ್ನು ಕೇಳಿದ ಎಸ್‌ಎಂಎಸ್ ಪಡೆದರೆ, ನೀವು ಎಚ್ಚರವಾಗಿರಬೇಕು. ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 

Yashaswini V Yashaswini V | Updated: Dec 12, 2019 , 01:37 PM IST
ಗ್ರಾಹಕರಿಗೆ SBI ಅಲರ್ಟ್; ಇಂತಹ ಮಾಹಿತಿಯನ್ನು ಬ್ಯಾಂಕ್ ಎಂದಿಗೂ ಕೇಳುವುದಿಲ್ಲ!

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.  ಯಾವುದೇ ಬ್ಯಾಂಕಿಂಗ್ ವಿವರಗಳನ್ನು ಕೇಳಿದ ಎಸ್‌ಎಂಎಸ್ ನಿಮಗೆ ಬಂದರೆ, ನೀವು ಎಚ್ಚರದಿಂದಿರಬೇಕು ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಸಿದೆ. ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಲಾಗುತ್ತಿದ್ದು, ಅಂತಹ ಸಂದೇಶಗಳಿಗೆ ನೀವು ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚಿಸಿದೆ.

ಇಂತಹ ಮಾಹಿತಿಯನ್ನು ಬ್ಯಾಂಕ್ ಎಂದಿಗೂ ಕೇಳುವುದಿಲ್ಲ;
ನೀವು ಅಪರಿಚಿತ ಸಂಖ್ಯೆಯಿಂದ ಎಸ್‌ಎಂಎಸ್ ಸ್ವೀಕರಿಸಿದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಅವರಿಗೆ ನೀಡಬೇಡಿ ಎಂದು ಎಸ್‌ಬಿಐ ಎಚ್ಚರಿಕೆ ನೀಡಿದೆ. ಅದೇ ಸಮಯದಲ್ಲಿ, CVV ಅಥವಾ  OTP ಯಂತಹ ನಿಮ್ಮ ಗೌಪ್ಯ ಮಾಹಿತಿಯನ್ನು ಬ್ಯಾಂಕ್ ವತಿಯಿಂದ ಎಂದಿಗೂ ಕೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಸಂದೇಶ ಕಳುಹಿಸುವ ಮೂಲಕ ಅಂತಹ ಮಾಹಿತಿಯನ್ನು ಕೇಳಿದರೆ, ಗ್ರಾಹಕರು ಜಾಗರೂಕರಾಗಿರಬೇಕು. ಜೊತೆಗೆ ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಬ್ಯಾಂಕ್ ತಿಳಿಸಿದೆ.
 
ಶೀಘ್ರದಲ್ಲೇ ಈ ಕೆಲಸ ಮಾಡಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರು, ನಿಮ್ಮ ಹಳೆಯ ಡೆಬಿಟ್ ಕಾರ್ಡ್ ಅನ್ನು ಡಿಸೆಂಬರ್ 31 ರೊಳಗೆ ನಿಮ್ಮ ಹೋಂ ಬ್ರಾಂಚ್ ಗೆ ಒಪ್ಪಿಸಿ, ನೂತನ ಡೆಬಿಟ್ ಕಾರ್ಡ್ ಪಡೆಯಿರಿ. ಇಲ್ಲದಿದ್ದರೆ ನಿಮ್ಮ ಡೆಬಿಟ್ ಕಾರ್ಡ್ ನಿಷ್ಪ್ರಯೋಜಕವಾಗುತ್ತದೆ. ಅಲ್ಲದೆ, ನೀವು ಯಾವುದೇ ಡೆಬಿಟ್ ಕಾರ್ಡ್ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ, ಎಸ್‌ಬಿಐನ ಮ್ಯಾಗ್ನೆಟಿಕ್ ಸ್ಟ್ರೈಪ್ ಹೊಂದಿರುವ ಎಟಿಎಂ-ಕಮ್-ಡೆಬಿಟ್ ಕಾರ್ಡ್‌ಗಳು ವರ್ಷದ ಅಂತ್ಯದ ವೇಳೆಗೆ ಬ್ಯಾಂಕ್ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಆರ್‌ಬಿಐ ಸೂಚನೆಯಂತೆ, ಎಸ್‌ಬಿಐ ತನ್ನ ಗ್ರಾಹಕರ ಎಲ್ಲಾ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್‌ಗಳನ್ನು ಇಎಂವಿ ಚಿಪ್ ಮತ್ತು ಪಿನ್ ಆಧಾರಿತ ಕಾರ್ಡ್‌ಗಳೊಂದಿಗೆ ಬದಲಾಯಿಸುವಂತೆ ಮನವಿ ಮಾಡಿದೆ. ನಿಮ್ಮ ಮ್ಯಾಗ್ನೆಟಿಕ್ ಸ್ಟ್ರಿಪ್ಡ್ ಕಾರ್ಡ್ ಅನ್ನು ಹೆಚ್ಚು ಸುರಕ್ಷಿತ ಇಎಂವಿ ಚಿಪ್ ಮತ್ತು ಪಿನ್ ಆಧಾರಿತ ಡೆಬಿಟ್ ಕಾರ್ಡ್‌ಗೆ ಪರಿವರ್ತಿಸಲು ಈಗಲೇ ಅರ್ಜಿ ಸಲ್ಲಿಸಿ ಎಂದು ಬ್ಯಾಂಕ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. 31 ಡಿಸೆಂಬರ್ 2019 ರವರೆಗೆ ನಿಮ್ಮ ಹೋಂ ಶಾಖೆಯಲ್ಲಿ ನೀವು ಅರ್ಜಿ ಸಲ್ಲಿಸಬಹುದು.

ಎಟಿಎಂನಿಂದ ಹಣ ಹಿಂಪಡೆಯುವಾಗ ಇದನ್ನು ನೆನಪಿನಲ್ಲಿಡಿ:

  • ಎಟಿಎಂ ಅಥವಾ ಡೆಬಿಟ್ ಕಾರ್ಡ್ ಬಳಸಿ ಯಾವುದೇ ರೀತಿಯ ವಹಿವಾಟು ನಡೆಸುವಾಗ ಮೊದಲನೆಯದಾಗಿ, ಸ್ವಾಗತ ಸಂದೇಶವು ಪರದೆಯ ಮೇಲೆ ಬಂದಿದೆಯೆ ಎಂದು ಪರಿಶೀಲಿಸಿ.
  • ಎಟಿಎಂನ ಪಿನ್ ಗೌಪ್ಯವಾಗಿಡುವುದು ಬಹಳ ಮುಖ್ಯ. ಆದ್ದರಿಂದ ನೀವು ಪಿನ್ ನಮೂದಿಸುವಾಗ ಹತ್ತಿರ ಯಾರೂ ಇಲ್ಲವೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ.
  • ಎಟಿಎಂನಿಂದ ವ್ಯವಹಾರವನ್ನು ಪೂರ್ಣಗೊಳಿಸಿದ ನಂತರ, ಸ್ವಾಗತ ಪರದೆಯು ಬರುವವರೆಗೆ ಕಾಯಿರಿ.
  • ನೀವು ಹಣವನ್ನು ಹಿಂತೆಗೆದುಕೊಂಡಿದ್ದರೆ, ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ SMS ಕಳುಹಿಸಲಾಗಿದೆಯೇ ಎಂದು ಪರಿಶೀಲಿಸಿ.
  • ಎಟಿಎಂ ಸುತ್ತಮುತ್ತಲಿನ ಅನುಮಾನಾಸ್ಪದ ಜನರ ಬಗ್ಗೆ ಎಚ್ಚರದಿಂದಿರಿ. ಯಾರಾದರೂ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಲು ಬಯಸಿದರೆ ಜಾಗರೂಕರಾಗಿರಿ. ನೀವು ಹೋದ ನಂತರ ಅದೇ ವ್ಯಕ್ತಿ ನಿಮ್ಮ ಖಾತೆಯಿಂದ ಹಣ ಪಡೆಯಲು ಹೋಗಬಹುದು.
  • ಎಟಿಎಂನಲ್ಲಿ ಕಾರ್ಡ್ ಸೇರಿಸುವ ಸ್ಲಾಟ್ ಸ್ವಲ್ಪ ವಿಭಿನ್ನವಾಗಿ ಕಂಡುಬಂದರೆ, ಜಾಗರೂಕರಾಗಿರಿ. ನಿಮ್ಮ ಕಾರ್ಡ್ ಓದಲು ಸಾಧನವನ್ನು ಪ್ರತ್ಯೇಕವಾಗಿ ಸ್ಥಾಪಿಸಿರಬಹುದು.
  • ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಂಡಿರುವ ಬಗ್ಗೆ ನಿಮಗೆ SMS ಬಂದರೆ ಮತ್ತು ನೀವು ಈ ವ್ಯವಹಾರವನ್ನು ಮಾಡದಿದ್ದರೆ, ತಕ್ಷಣ ನಿಮ್ಮ ಬ್ಯಾಂಕ್‌ಗೆ ತಿಳಿಸಿ.
  • ಪಿನ್ ನಮೂದಿಸಿ ಎಟಿಎಂನಲ್ಲಿ ಎಲ್ಲಾ ಮಾಹಿತಿಯನ್ನು ನೀಡಿದ ನಂತರವೂ, ನಗದು ಹೊರಬರದಿದ್ದರೆ ಅಥವಾ ಪರದೆಯ ಮೇಲೆ 'ನಗದು ಇಲ್ಲ' ಎಂಬ ಸಂದೇಶವಿಲ್ಲದಿದ್ದರೆ, ನಂತರ ಬ್ಯಾಂಕಿಗೆ ತಿಳಿಸಿ.