close

News WrapGet Handpicked Stories from our editors directly to your mailbox

ಶಾಸಕರ ರಾಜೀನಾಮೆ ವಿಚಾರ: ಜುಲೈ16 ರವರೆಗೆ ವಿಚಾರಣೆ ಮುಂದೂಡಿದ ಸುಪ್ರೀಂ

ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಯಾವುದೇ ಒಮ್ಮತಕ್ಕೆ ಬರದ ಸುಪ್ರೀಂಕೋರ್ಟ್ ಶುಕ್ರವಾರದಂದು ಶಾಸಕರ ಪ್ರಕರಣದ ವಿಚಾರವಾಗಿ ಯಥಾಸ್ಥಿತಿ ಕಾಪಾಡಿಕೊಂಡಿದೆ.  

Updated: Jul 12, 2019 , 02:48 PM IST
ಶಾಸಕರ ರಾಜೀನಾಮೆ ವಿಚಾರ: ಜುಲೈ16 ರವರೆಗೆ ವಿಚಾರಣೆ ಮುಂದೂಡಿದ ಸುಪ್ರೀಂ

ನವದೆಹಲಿ: ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಯಾವುದೇ ಒಮ್ಮತಕ್ಕೆ ಬರದ ಸುಪ್ರೀಂಕೋರ್ಟ್ ಶುಕ್ರವಾರದಂದು ಶಾಸಕರ ಪ್ರಕರಣದ ವಿಚಾರವಾಗಿ ಯಥಾಸ್ಥಿತಿ ಕಾಪಾಡಿಕೊಂಡಿದೆ.  

ಶುಕ್ರವಾರದಂದು ಶಾಸಕರ ರಾಜೀನಾಮೆ ವಿಚಾರವಾಗಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಶಾಸಕರು, ಸ್ಪೀಕರ್ ಹಾಗೂ ಸಿಎಂ ಕುಮಾರಸ್ವಾಮಿ ಪರವಾಗಿ ವಕೀಲರ ವಾದಗಳನ್ನು ಆಲಿಸಿ ತದನಂತರ ವಿಚಾರಣೆಯನ್ನು ಮಂಗಳವಾರದಂದು ನಡೆಸಲಾಗುವುದು ಮತ್ತು ಶಾಸಕರ ವಿಚಾರವು ಅಲ್ಲಿಯವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ತೀರ್ಪು ನೀಡಿದೆ. ಒಂದು ವೇಳೆ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸಿದ್ದೆ ಆದಲ್ಲಿ, ಆಗ 13 ತಿಂಗಳ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ. ಇದರಿಂದ ಬಿಜೆಪಿಗೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಅವಕಾಶ ಲಭಿಸಲಿದೆ ಎನ್ನಲಾಗಿದೆ.

ಅರ್ಜಿ ವಿಚಾರಣೆ ವೇಳೆ ಸ್ಪೀಕರ್ ರಮೇಶ್ ಕುಮಾರ್ ತಾವು ಇನ್ನು ಭಿನ್ನಮತೀಯರ ರಾಜೀನಾಮೆ ಪತ್ರಗಳ ವಿಚಾರವಾಗಿ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಅವರು 18 ಶಾಸಕರ ರಾಜೀನಾಮೆಯನ್ನು ಪತ್ರ ತಪ್ಪು ಸ್ವರೂಪದ ಆಧಾರದ ಮೇಲೆ ತಿರಸ್ಕರಿಸಿದ್ದರು, ಆದ್ದರಿಂದ ಶಾಸಕರು ನಿನ್ನೆ ಅವರ ಮುಂದೆ ಹೊಸ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದರು.

ಇನ್ನೊಂದೆಡೆ ಸ್ಪೀಕರ್ ಅವರು ಶಾಸಕರ ರಾಜೀನಾಮೆ ಪತ್ರಗಳ ವಿಚಾರವಾಗಿ ಪರಿಶೀಲಿಸಲು ಸುಪ್ರೀಂಕೋರ್ಟ್ ಗೆ ವಿನಂತಿಸಿಕೊಂಡಿದ್ದರು. ಶಾಸಕರ ತಮ್ಮ ಅರ್ಜಿಯನ್ನು ಒತ್ತಾಯ ಪೂರ್ವಕವಾಗಿ ಸಲ್ಲಿಸಿದ್ದಾರೆಯೋ ಅಥವಾ ಸ್ವಯಂಪ್ರೇರಿತವಾಗಿ ಸಲ್ಲಿಸಿದ್ದಾರೆಯೋ ಎಂದು ಪರೀಕ್ಷಿಸಲು ಅವರು ತಮಗೆ ಸಮಯಾವಕಾಶಬೇಕು ಎಂದು ಸ್ಪೀಕರ್ ಸುಪ್ರೀಕೋರ್ಟ್ ಗೆ ವಿನಂತಿಸಿಕೊಂಡಿದ್ದರು.   

ಒಂದು ವೇಳೆ ಸ್ಪೀಕರ್ ಈಗ ರಾಜೀನಾಮೆಯನ್ನು ಸ್ವೀಕರಿಸಿದ್ದೇ ಆದಲ್ಲಿ ಒಕ್ಕೂಟದ 118 ಸದಸ್ಯರ ಸಂಖ್ಯೆ 100 ಕ್ಕೆ ಇಳಿಯುತ್ತದೆ. ಆಗ ಬಹುಮತದ ಸಂಖ್ಯೆ 113 ರಿಂದ 105 ಕ್ಕೆ ಇಳಿಯುತ್ತದೆ. ಸದ್ಯ ಬಿಜೆಪಿಯಲ್ಲಿ 105 ಸದಸ್ಯರಿದ್ದಾರೆ ಮತ್ತು ಇಬ್ಬರು ಸ್ವತಂತ್ರ ಶಾಸಕರ ಬೆಂಬಲವಿದೆ, ಆಗ ಅದು 107 ಕ್ಕೆ ತಲುಪುತ್ತದೆ. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಸರ್ಕಾರಕ್ಕೆ ಈಗ ಬಹುಮತದ ಭೀತಿ ಎದುರಾಗಿದೆ.