ನವದೆಹಲಿ: ರಾಮ್ ಕಿ ಜನ್ಮಭೂಮಿ ಚಿತ್ರದ ಬಿಡುಗಡೆಯನ್ನು ತಡೆ ಹಿಡಿಯಲು ಸುಪ್ರೀಂ ಕೋರ್ಟ್ ಗುರುವಾರದಂದು ನಿರಾಕರಿಸಿತು.ಈಗ ಇದೇ ಮಾರ್ಚ್ 29ರಂದು ದೇಶದಾದ್ಯಂತದ ಬಿಡುಗಡೆಯಾಗಲು ಸನ್ನಿತವಾಗಿದ್ಧ ಸಂದರ್ಭದಲ್ಲಿ ಈ ಸುಪ್ರೀಂಕೋರ್ಟ್ ನ ತೀರ್ಪು ಬಂದಿದೆ.


COMMERCIAL BREAK
SCROLL TO CONTINUE READING

ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ನಡೆಯುತ್ತಿರುವ ಮಧ್ಯಸ್ಥಿಕೆ ಮುಂದುವರಿಯುವುದಕ್ಕೆ ಈ ಚಲನಚಿತ್ರದ ಬಿಡುಗಡೆ ಅಡ್ಡಿಯಾಗಲಿದೆ ಎಂದು ಅರ್ಜಿದಾರರು ಹೇಳಿದ್ದಾರೆ.ಆದರೆ ಜಸ್ಟೀಸ್ ಎಸ್.ಎ.ಬಾಬ್ದೆ ಪೀಠವು ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೂ ಹಾಗೂ ಅಯೋಧ್ಯೆ ಭೂ ವಿವಾದ ವಿಚಾರವಾಗಿನ ಸಂಧಾನಕ್ಕೂ ಯಾವುದೇ ಸಂಭಂದವಿಲ್ಲ ಎಂದರು. 


ಸನೋಜ್ ಮಿಶ್ರಾ ನಿರ್ದೇಶನದ 'ರಾಮ್ ಕಿ ಜನ್ಮಭೂಮಿ' ಚಿತ್ರವು ರಾಮ ಮಂದಿರದ ವಿವಾದ ಸುತ್ತ ನಿರ್ಮಿಸಿರುವ ಚಲನಚಿತ್ರವಾಗಿದೆ.ಇದಕ್ಕೆ ಮುಂಚಿತವಾಗಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಜನರಿಗೆ ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕೆಂದರೆ ಅವರಲ್ಲಿ ಸಹಿಷ್ಣುತೆ ಇರಬೇಕು ಎಂದು ಕೋರ್ಟ್ ಹೇಳಿತ್ತು.


ಮೊಘಲ್ ಚಕ್ರವರ್ತಿ ಬಹದ್ದೂರ್ ಷಾ ಜಾಫರ್ ಅವರ ವಂಶಸ್ಥರೆಂದು ಹೇಳಿಕೊಂಡಿರುವ ಪ್ರಿನ್ಸ್ ಯಾಕುಬ್ ಹಬೀಬುದ್ದೀನ್ ಟುಸಿ ಎನ್ನುವವರು ಈ ಚಿತ್ರದ ಬಿಡುಗಡೆಯನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು.