ಮಡಿಲಲ್ಲಿ 2 ವಾರಗಳ ಮಗು ಹೊತ್ತು ಕರ್ತವ್ಯಕ್ಕೆ ಹಾಜರಾದ ಎಸ್‌ಡಿಎಂ ಸೌಮ್ಯಾ ಪಾಂಡೆ

ಗಾಜಿಯಾಬಾದ್‌ನ ಮೋದಿನಗರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಸೌಮ್ಯಾ ಪಾಂಡೆ (ಎಸ್‌ಡಿಎಂ ಸೌಮ್ಯಾ ಪಾಂಡೆ) ತನ್ನ ಮಡಿಲಲ್ಲಿ  2 ವಾರ ವಯಸ್ಸಿನ ಮಗಳ ಜೊತೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.  

Last Updated : Oct 13, 2020, 01:30 PM IST
  • ಹೆಣ್ಣು ಮಗು ಜನಿಸಿದ 14 ದಿನಗಳ ನಂತರ ಎಸ್‌ಡಿಎಂ ಸೌಮ್ಯಾ ಪಾಂಡೆ ಕೆಲಸಕ್ಕೆ ಮರಳಿದರು.
  • ಸೌಮ್ಯ ಅವರ ಕರ್ತವ್ಯ ನಿಷ್ಠೆಗೆ ಎಲ್ಲರೂ ತಲೆಬಾಗಿದ್ದು ದೇಶಾದ್ಯಂತ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿಯುತ್ತಿದೆ.
  • ಸೌಮ್ಯಾ ಅವರನ್ನು ಘಜಿಯಾಬಾದ್‌ನ ಮೋದಿನಗರದಲ್ಲಿ ಎಸ್‌ಡಿಎಂ ಪೋಸ್ಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಮಡಿಲಲ್ಲಿ 2 ವಾರಗಳ ಮಗು ಹೊತ್ತು ಕರ್ತವ್ಯಕ್ಕೆ ಹಾಜರಾದ ಎಸ್‌ಡಿಎಂ ಸೌಮ್ಯಾ ಪಾಂಡೆ title=
Image courtesy: ANI

ಗಾಜಿಯಾಬಾದ್: ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ತನ್ನ ಮಡಿಲಲ್ಲಿ ನವಜಾತ ಮಗಳನ್ನು ಹೊತ್ತು ನಿರಂತರವಾಗಿ ಕೆಲಸ ಮಾಡುತ್ತಿದ್ದು ಎಲ್ಲರಿಗೂ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.

ಸೌಮ್ಯ ಅವರ ಕರ್ತವ್ಯ ನಿಷ್ಠೆಗೆ ಎಲ್ಲರೂ ತಲೆಬಾಗಿದ್ದು ದೇಶಾದ್ಯಂತ ಅವರಿಗೆ ಹೊಗಳಿಕೆಯ ಮಹಾಪೂರವೇ ಹರಿಯುತ್ತಿದೆ.  ಸೌಮ್ಯ ಅವರನ್ನು ಉತ್ತರ ಪ್ರದೇಶದ (Uttar Pradesh) ಘಜಿಯಾಬಾದ್‌ನ ಮೋದಿನಗರದಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿ ನೇಮಿಸಲಾಗಿದೆ.

Video: ಹಾಥಿ ಮೇರೆ ಸಾಥಿ! ಮನುಷ್ಯನ ಬೆನ್ನಿಗೆ ಮಸಾಜ್ ಮಾಡೋ ಆನೆ ನೋಡಿದ್ದೀರಾ...

ಹೆಣ್ಣು ಮಗು ಜನಿಸಿದ 14 ದಿನಗಳ ನಂತರ ಕೆಲಸಕ್ಕೆ ಮರಳಿದ ಸೌಮ್ಯ ಪಾಂಡೆ:-
ಸೌಮ್ಯ ಪಾಂಡೆ ಮೂಲತಃ ಪ್ರಯಾಗರಾಜ್ ಮೂಲದವರು, 2017ರ ಬ್ಯಾಚ್ ಐಎಎಸ್ ಅಧಿಕಾರಿ ಮತ್ತು ಅವರು ಕರೋನಾವೈರಸ್ (Coronavirus) ಸಾಂಕ್ರಾಮಿಕ ಸಮಯದಲ್ಲಿ ಮಗಳಿಗೆ ಜನ್ಮ ನೀಡಿದರು. ಮಗಳಿಗೆ ಜನ್ಮ ನೀಡಿದ 14 ದಿನಗಳ ನಂತರವೇ ಅವರು ಅಧಿಕಾರ ವಹಿಸಿಕೊಂಡರು. "ನನ್ನ ಗರ್ಭಧಾರಣೆಯ ಅವಧಿಯಲ್ಲಿ ಮತ್ತು ಹೆರಿಗೆಯ ನಂತರ ಜಿಲ್ಲಾಧಿಕಾರಿ ಮತ್ತು ಆಡಳಿತವು ನನಗೆ ಸಾಕಷ್ಟು ಬೆಂಬಲ ನೀಡಿದೆ" ಎಂದು ಅವರು ತಮ್ಮ ಸಹವರ್ತಿಗಳ ಬಗ್ಗೆ ಹೆಮ್ಮೆಯಿಂದ ನುಡಿದಿದ್ದಾರೆ.

'ಆರೋಗ್ಯ ಉತ್ತಮವಾಗಿದೆ, ಕೆಲಸಕ್ಕೆ ಮರಳಲು ಯಾವುದೇ ತೊಂದರೆ ಇಲ್ಲ' :
ಸೌಮ್ಯಾ ಪಾಂಡೆ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದ್ದು, ಇದರಲ್ಲಿ ಆಕೆ ತನ್ನ ಮಡಿಲಲ್ಲಿ ಪುಟ್ಟ ಮಗುವಿನ ಜೊತೆ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಇನ್ನು ಇಷ್ಟು ಚಿಕ್ಕ ಮಗುವಿನ ಜೊತೆಗೆ ಕೆಲಸಕ್ಕೆ ಮರಳಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸೌಮ್ಯಾ ಪಾಂಡೆ ಕೆಲಸವು ಅತ್ಯುನ್ನತವಾದುದು ಎನ್ನುತ್ತಾ ಜಪಾನ್‌ನಂತಹ ದೇಶದ ಉದಾಹರಣೆಯನ್ನು ನೀಡಿದರು. ಅಲ್ಲಿ ಡೆಲಿವರಿಯಾದ ಸ್ವಲ್ಪ ಸಮಯದ ನಂತರವೇ ಮಹಿಳೆಯರು ಕೆಲಸಕ್ಕೆ ಮರಳುತ್ತಾರೆ ಎಂದು ಹೇಳಿದರು. ನೀವು ಉತ್ತಮ ಆರೋಗ್ಯದಲ್ಲಿದ್ದರೆ, ಬೇಗನೆ ಕೆಲಸಕ್ಕೆ ಮರಳಲು ಯಾವುದೇ ತೊಂದರೆ ಇಲ್ಲ ಎಂದವರು ತಿಳಿಸಿದ್ದಾರೆ.

Video: Gir National Parkನ ಗಾರ್ಡ್ ಸಿಂಹದಿಂದ ಸಹಾಯ ಬೇಡಿದಾಗ...

Trending News