ಕೊಲೆ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವ ಮಾನವ ರಾಮಪಾಲ್ ದೋಷಿ

ಹರ್ಯಾನದಲ್ಲಿನ ಹಿಸಾರ್ ಸತ್ಲೋಕ್ ಆಶ್ರಮದ ಸಂಸ್ಥಾಪಕ 67 ವಯಸ್ಸಿನ ರಾಂಪಾಲ್ ಎರಡು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಹಿಸಾರ್ ಕೋರ್ಟ್ ಹೇಳಿದೆ. 

Updated: Oct 11, 2018 , 04:11 PM IST
ಕೊಲೆ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವ ಮಾನವ ರಾಮಪಾಲ್ ದೋಷಿ

ನವದೆಹಲಿ: ಹರ್ಯಾನದಲ್ಲಿನ ಹಿಸಾರ್ ಸತ್ಲೋಕ್ ಆಶ್ರಮದ ಸಂಸ್ಥಾಪಕ 67 ವಯಸ್ಸಿನ ರಾಂಪಾಲ್ ಎರಡು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಹಿಸಾರ್ ಕೋರ್ಟ್ ಹೇಳಿದೆ. 

ಆಶ್ರಮದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ರಾಮಪಾಲ್ ವಿರುದ್ದ ಮೊದಲ ಪ್ರಕರಣವು ನವೆಂಬರ್ 19, 2014 ರಂದು ದಾಖಲಾಗಿತ್ತು ಇನ್ನು ಎರಡನೆಯ ಪ್ರಕರಣವು ಮಗುವನ್ನು ಒಳಗೊಂಡಂತೆ ಐದು ಇತರ ಮಹಿಳೆಯರ ಕೊಲೆಗೆ ಸಂಬಂಧಪಟ್ಟದ್ದಾಗಿದೆ.ಇದೆ ವೇಳೆ 2014 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಹಿನ್ನಲೆಯಲ್ಲಿ 2014 ರಿಂದ ರಾಂಪಾಲ್ ಅವರು ಹಿಸ್ಸಾರ್ ಜಿಲ್ಲಾ ಜೈಲಿನಲ್ಲಿದ್ದಾರೆ.

ಈ ತೀರ್ಪಿನ ಹಿನ್ನಲೆಯಲ್ಲಿ ಹಿಸಾರ್ ಜಿಲ್ಲೆಯಲ್ಲಿ  144 ನೇ ಸೆಕ್ಷನ್ ಜಾರಿಗೊಳಿಸಲಾಗಿದೆ ಮತ್ತು ಸುಮಾರು 2000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಜಿಲ್ಲಾಧಿಕಾರಿ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ.