ಕೇಂದ್ರ ಸರ್ಕಾರಿ ನೌಕರರಿಗೆ 26,000 ರೂ. ಕನಿಷ್ಠ ವೇತನ?

ಕೇಂದ್ರ ಸರ್ಕಾರಿ ನೌಕರರು ಏಳನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಕಾಯುತ್ತಿದ್ದಾರೆ. 

Updated: Jul 27, 2018 , 03:25 PM IST
ಕೇಂದ್ರ ಸರ್ಕಾರಿ ನೌಕರರಿಗೆ 26,000 ರೂ. ಕನಿಷ್ಠ ವೇತನ?

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಏಳನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರವು 50 ಲಕ್ಷ ಕೇಂದ್ರೀಯ ಉದ್ಯೋಗಿಗಳ ಬೇಡಿಕೆಯನ್ನು ಪರಿಗಣಿಸಿ ಉಡುಗೊರೆ ನೀಡುವ ಭರವಸೆ ನೀಡಿದೆ. ಆದರೆ, ಕೇಂದ್ರ ಉದ್ಯೋಗಿಗಳ ಬೇಡಿಕೆಯನ್ನು ಸರ್ಕಾರ ಪೂರೈಸುವುದೇ? ಏಳನೇ ವೇತನ ಆಯೋಗದ ಶಿಫಾರಸಿನಿಂದ ಸಂಬಳ ಎಷ್ಟು ಹೆಚ್ಚಾಗುತ್ತದೆ? ಮತ್ತು ಫಿಟ್ಮೆಂಟ್ ಫ್ಯಾಕ್ಟರ್ನಲ್ಲಿ ಎಷ್ಟು ಹೆಚ್ಚಾಗುತ್ತದೆ? ಇಂತಹ ಪ್ರಶ್ನೆಗಳ ಬಗ್ಗೆ ಯೋಚಿಸುತ್ತಿರುವ ಕೇಂದ್ರ ಉದ್ಯೋಗಿಗಳಿಗೆ ಉತ್ತಮ ಸುದ್ದಿ ಇದೆ. ಉದ್ಯೋಗಿಗಳ ಬೇಡಿಕೆಯನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರವು 8,000 ರೂ.ವರೆಗೆ ಸಂಬಳ ಹೆಚ್ಚಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ನೌಕರರ ಕನಿಷ್ಠ ವೇತನವನ್ನು 18,000 ದಿಂದ 26,000 ರೂ.ವರೆಗೆ ಹೆಚ್ಚಿಸಬಹುದೆಂದು ಊಹಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಆಗಸ್ಟ್ 15ರಂದು ಏಳನೇ ವೇತನ ಆಯೋಗ ಜಾರಿಗೆ ಬರಬಹುದೆಂದು ನೌಕರರು ನಿರೀಕ್ಷಿಸುತ್ತಿದ್ದಾರೆ. ಝೀ ನ್ಯೂಸ್ ಡಿಜಿಟಲ್ ಗೆ ದೊರೆತಿರುವ ಮಾಹಿತಿ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಿದ್ದು ಉದ್ಯೋಗಿಗಳಿಗೆ 8,000 ರೂ.ವರೆಗೆ ವೇತನ ಹೆಚ್ಚಿಸಲು ಸಹಮತ ದೊರೆತಿದೆ ಎನ್ನಲಾಗಿದೆ. ನೌಕರರ ಬೇಡಿಕೆಯಂತೆ ಕನಿಷ್ಠ ವೇತನವನ್ನು 18,000 ರೂ.ಗೆ ಏರಿಸುವ ಬದಲು 26,000 ರೂಪಾಯಿಗಳಿಗೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಆಗಸ್ಟ್ 15 ರಂದು ಸರ್ಕಾರ ಇದನ್ನು ಘೋಷಿಸಬಹುದು. ವಾಸ್ತವವಾಗಿ ಮುಂದಿನ ವರ್ಷ ಚುನಾವಣೆ ಇರುವುದರಿಂದ ಅದಕ್ಕೆ ಮೊದಲು ಕೇಂದ್ರ ಸರ್ಕಾರಿ ನೌಕರರನ್ನು ಮೆಚ್ಚಿಸಲು ಸರ್ಕಾರ ಬಯಸಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೌಕರರು ತಮ್ಮ ಕನಿಷ್ಠ ವೇತನವನ್ನು 26,000 ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಲ್ಲದೆ, ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳಕ್ಕೂ ಬೇಡಿಕೆ ಇಟ್ಟಿದ್ದಾರೆ.