ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಕಾಶ್ಮೀರ ಕುರಿತು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವ ರಾಜನಾಥ್ ಸಿಂಗ್ "ಕಾಶ್ಮೀರ್ ವಿಚಾರವಾಗಿ ಶಾಹೀದ್ ಆಫ್ರಿದಿ ಹೇಳಿದ್ದು ಸರಿ ಎಂದು ತಿಳಿಸಿದ್ದಾರೆ.



COMMERCIAL BREAK
SCROLL TO CONTINUE READING

ಶಾಹೀದ್ ಆಫ್ರಿದಿಯವರು ಪಾಕಿಸ್ತಾನಕ್ಕೆ ಕಾಶ್ಮೀರದ ಅಗತ್ಯತೆ ಇಲ್ಲ ಏಕೆಂದರೆ ಇರುವ ಪ್ರದೇಶಗಳನ್ನೇ ಅದಕ್ಕೆ ನಿರ್ವಹಿಸಲು ಆಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.ಈ ಹೇಳಿಕೆ  ಪಾಕ್ ಗೆ ಕಿರಿಕಿರೀ ಉಂಟು ಮಾಡಿತ್ತು ಈ ಹಿನ್ನಲೆಯಲ್ಲಿ ಈಗ ಆಫ್ರಿದಿ ಹೇಳಿಕೆ ಪ್ರತಿಕ್ರಿಯಿಸಿರುವ  ರಾಜನಾಥ್ ಸಿಂಗ್ " ಅವರು ಸರಿಯಾಗಿ ಹೇಳಿದ್ದಾರೆ ಪಾಕಿಸ್ತಾನವನ್ನೇ ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಇನ್ನು ಕಾಶ್ಮೀರವನ್ನು ಹೇಗೆ ಅವರು ನಿರ್ವಹಿಸುತ್ತಾರೆ. ಕಾಶ್ಮೀರ  ಭಾರತದ ಭಾಗವಾಗಿತ್ತು, ಭಾಗವಾಗಿದೆ, ಭಾಗವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.



ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಆಫ್ರಿದಿ ಈಗ ಸಮರ್ಥನೆ ನೀಡಿದ್ದಾರೆ "ನನ್ನ  ಹೇಳಿಕೆಗಳನ್ನು  ಭಾರತೀಯ ಮೀಡಿಯಾಗಳು  ತಿರುಚಿವೆ, ನನ್ನ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ,ಅದೆ ರೀತಿಯಾಗಿ ಕಾಶ್ಮೀರಿಗಳ ಮೌಲ್ಯಯುತ ಹೋರಾಟದ ಬಗ್ಗೆಯೂ ಸಹಿತ ಆದ್ದರಿಂದ ಮಾನವೀಯತೆ ನೆಲೆಗೊಂಡು ಅವರು ತಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು" ಎಂದು ಶಾಹೀದ್ ಆಫ್ರಿದಿ ತಿಳಿಸಿದ್ದಾರೆ.