ರಾಷ್ಟ್ರಪತಿ ಆಡಳಿತ ವಿರೋಧಿಸಿ ಸುಪ್ರೀಂ ಮೊರೆಹೋದ ಶಿವಸೇನಾ

ವಿಧಾನಸಭೆ ಚುನಾವಣಾ ಫಲಿತಾಂಶ ಮುಗಿದ ಸುಮಾರು 20 ದಿನಗಳ ನಂತರ ಯಾವುದೇ ಸರ್ಕಾರ ರಚನೆಯಾಗದಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತಕ್ಕೆ ಶಿಫಾರಸು ಮಾಡಿದೆ ಎಂಬ ವರದಿಗಳ ನಂತರ ಶಿವಸೇನೆ ಇಂದು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದೆ.

Last Updated : Nov 12, 2019, 04:09 PM IST
 ರಾಷ್ಟ್ರಪತಿ ಆಡಳಿತ ವಿರೋಧಿಸಿ ಸುಪ್ರೀಂ ಮೊರೆಹೋದ ಶಿವಸೇನಾ  title=

ನವದೆಹಲಿ: ವಿಧಾನಸಭೆ ಚುನಾವಣಾ ಫಲಿತಾಂಶ ಮುಗಿದ ಸುಮಾರು 20 ದಿನಗಳ ನಂತರ ಯಾವುದೇ ಸರ್ಕಾರ ರಚನೆಯಾಗದಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತಕ್ಕೆ ಶಿಫಾರಸು ಮಾಡಿದೆ ಎಂಬ ವರದಿಗಳ ನಂತರ ಶಿವಸೇನೆ ಇಂದು ಸುಪ್ರೀಂಕೋರ್ಟ್ ಗೆ ಮೊರೆ ಹೋಗಿದೆ.

ಸರ್ಕಾರ ರಚನೆಗಾಗಿ 48 ಗಂಟೆಗಳ ವಿಸ್ತರಣೆಗೆ ಶಿವಸೇನಾ ಕೋರಿಕೆಯನ್ನು ಸ್ವೀಕರಿಸಲು ನಿರಾಕರಿಸಿದ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರು ಸರ್ಕಾರ ರಚನೆಗೆ ಹಕ್ಕು ಪಡೆಯಲು ಶರದ್ ಪವಾರ್ ಅವರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ನಿನ್ನೆ ಆಹ್ವಾನಿಸಿದ್ದರು. ಇಂದು ಎನ್‌ಸಿಪಿಗೆ ನೀಡಿದ ಗಡುವು ರಾತ್ರಿ 8.30 ಕ್ಕೆ ಕೊನೆಗೊಳ್ಳುತ್ತದೆ. ಅದಕ್ಕೂ ಮೊದಲೇ ಈಗ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದೆ.

 

ಇನ್ನೊಂದೆಡೆಗೆ ಮಹಾರಾಷ್ಟ್ರದ ರಾಜ್ಯಪಾಲರು ಬಿಜೆಪಿಯ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ. ಸರ್ಕಾರ ರಚನೆಗೆ ಸಮಯಾವಕಾಶ ಕೋರಿದ್ದ ಶಿವಸೇನೆ ಬೇಡಿಕೆಯನ್ನು ರಾಜ್ಯಪಾಲರು ನಿರಾಕರಿಸಿದ್ದಾರೆ. ಇದಾದ ನಂತರ ಎನ್ಸಿಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಎನ್ಸಿಪಿ ಇಂದು ರಾತ್ರಿ 8.30ಕ್ಕೆ ಉತ್ತರ ನೀಡಬೇಕಾಗಿತ್ತು. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಈಗ ಕಾಂಗ್ರೆಸ್ ಮತ್ತು ಎನ್ಸಿಪಿ ಸರ್ಕಾರ ರಚನೆಗೆ ಶಿವಸೇನಾ  ಬೆಂಬಲ ಕೂಡ ಅಗತ್ಯವಾಗಿದೆ.
 

 

Trending News