ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿರುವ ಶಿವಸೇನಾ

ದೇಶದ ಹಳೆಯ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ನಡುವಿನ ಜಗಳ ಈಗ ಸಂಸತ್ತಿನ ರಾಜ್ಯಸಭೆಯಲ್ಲಿಯೂ ಕೂಡ ಪರಿಣಾಮ ಬೀರಲಿದೆ ಎನ್ನಲಾಗಿದೆ.

Last Updated : Nov 17, 2019, 10:56 AM IST
 ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿರುವ ಶಿವಸೇನಾ title=
file photo

ನವದೆಹಲಿ: ದೇಶದ ಹಳೆಯ ಮಿತ್ರ ಪಕ್ಷಗಳಾದ ಶಿವಸೇನೆ ಮತ್ತು ಬಿಜೆಪಿ ನಡುವಿನ ಜಗಳ ಈಗ ಸಂಸತ್ತಿನ ರಾಜ್ಯಸಭೆಯಲ್ಲಿಯೂ ಕೂಡ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಇತ್ತೀಚಿಗಷ್ಟೇ ಎನ್ಡಿಎಯಿಂದ ಹೊರಬಂದಿರುವ ಶಿವಸೇನೆ ಈಗ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸ್ಥಾನದ ಆಸನದಲ್ಲಿ ಕುಳಿತುಕೊಳ್ಳಲಿದೆ ಎಂದು ಪಕ್ಷದ ವಕ್ತಾರ ಸಂಜಯ್ ರೌತ್ ಹೇಳಿದ್ದಾರೆ. ಸಂಸತ್ತಿನಲ್ಲಿ ಇಬ್ಬರು ಶಿವಸೇನೆ ಸಂಸದರ ಆಸನ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಎಂದು ನಮಗೆ ತಿಳಿದಿದೆ ಎಂದು ಅವರು ಹೇಳಿದರು. ಮೇಲ್ಮನೆಯ ಶಿವಸೇನೆಯ ಮೂವರು ಸಂಸದರಲ್ಲಿ ರೌತ್ ಕೂಡ ಒಬ್ಬರಾಗಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸಭೆಯಲ್ಲಿ ಶಿವಸೇನಾ ಭಾಗವಹಿಸುವುದಿಲ್ಲ ಎಂದು ರೌತ್ ಹೇಳಿದ್ದಾರೆ. 'ನವೆಂಬರ್ 17 ರಂದು ಎನ್ಡಿಎ ಸಭೆ ನಡೆಯುತ್ತಿದೆ. ನಮ್ಮ ಸಚಿವರು ಕೇಂದ್ರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ, ಮಹಾರಾಷ್ಟ್ರದ ಬೆಳವಣಿಗೆಗಳನ್ನು ಪರಿಗಣಿಸಿ ಸಭೆಯಲ್ಲಿ ಭಾಗವಹಿಸದಿರಲು ನಾವು ಈಗಾಗಲೇ ನಿರ್ಧರಿಸಿದ್ದೇವೆ...'ಎಂದು ಅವರು ಹೇಳಿದರು. ಶಿವಸೇನೆ ಮುಖಂಡ ಅರವಿಂದ ಸಾವಂತ್ ಸೋಮವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ಘೋಷಿಸಿದ್ದರು.

'ಹಳೆಯ ಎನ್‌ಡಿಎ ಮತ್ತು ಇಂದಿನ ಎನ್‌ಡಿಎ ನಡುವೆ ಸಾಕಷ್ಟು ವ್ಯತ್ಯಾಸವಿದೆ. 'ಇಂದು ಎನ್‌ಡಿಎ ಸಂಚಾಲಕರು ಯಾರು? ಅದರ ಹಳೆಯ ಸ್ಥಾಪಕರಲ್ಲಿ ಒಬ್ಬರಾದ ಅಡ್ವಾಣಿ ಜಿ ಅವರು ತೊರೆದಿದ್ದಾರೆ ಅಥವಾ ನಿಷ್ಕ್ರಿಯರಾಗಿದ್ದಾರೆ' ಎಂದು ರೌತ್ ಹೇಳಿದರು. ಎನ್‌ಡಿಎಯಿಂದ ಸೇನಾ ತ್ಯಜಿಸುವ ಬಗ್ಗೆ ಔಪಚಾರಿಕ ಪ್ರಕಟಣೆ ಮಾತ್ರ ಉಳಿದಿದೆಯೇ ಎಂದು ಕೇಳಿದಾಗ, 'ನೀವು ಅದನ್ನು ಹೇಳಬಹುದು. ಅದನ್ನು ಹೇಳುವಲ್ಲಿ ಯಾವುದೇ ಸಮಸ್ಯೆ ಇಲ್ಲ' ಎಂದು ಹೇಳಿದರು.

Trending News