close

News WrapGet Handpicked Stories from our editors directly to your mailbox

ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಂಹದಿ ಬಿಜೆಪಿಗೆ ಸೇರ್ಪಡೆ

ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಂಹದಿ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು.

Updated: Apr 26, 2019 , 05:50 PM IST
ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಂಹದಿ ಬಿಜೆಪಿಗೆ ಸೇರ್ಪಡೆ
Pic Courtesy: ANI

ನವದೆಹಲಿ: ಪಂಜಾಬಿ ಖ್ಯಾತ ಗಾಯಕ ದಲೇರ್ ಮೆಂಹದಿ ಅವರು ಇಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹಾಗೂ ಕೇಂದ್ರ ಸಚಿವ ವಿಜಯ್ ಗೋಯಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 

ಈ ಸಂದರ್ಭದಲ್ಲಿ ವಾಯುವ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್, ಕೇಂದ್ರ ಸಚಿವ ಮತ್ತು ಚಾಂದಿನಿ ಚೌಕ್ ಅಭ್ಯರ್ಥಿ ಹರ್ಷ್ ವರ್ಧನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

2013ರ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ದಲೇರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ತಾವೇ ಸ್ವರ ಸಂಯೋಜನೆ ಮಾಡಿ ಹಾಡನ್ನೂ ಸಹ ಹಾಡಿದ್ದರು.