'ನಮ್ಮ ವಿದ್ಯಾಭಾಸ ಪೂರ್ಣಗೊಂಡಿಲ್ಲ ಮುಂದೇನು? ಎಂದು ಸ್ಮೃತಿ ಇರಾನಿ ಬರೆದುಕೊಂಡಿದ್ದೇಕೆ?

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸೋಮವಾರದಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಕೃಷಿ ಬೆಳೆ ಹಾಗೂ ಅಪೌಷ್ಟಿಕತೆಯ ಕುರಿತಾಗಿ ಸಭೆ ನಡೆಸಿದರು. 

Updated: Nov 19, 2019 , 04:43 PM IST
'ನಮ್ಮ ವಿದ್ಯಾಭಾಸ ಪೂರ್ಣಗೊಂಡಿಲ್ಲ ಮುಂದೇನು? ಎಂದು ಸ್ಮೃತಿ ಇರಾನಿ ಬರೆದುಕೊಂಡಿದ್ದೇಕೆ?
Photo courtesy: Instagram

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸೋಮವಾರದಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಕೃಷಿ ಬೆಳೆ ಹಾಗೂ ಅಪೌಷ್ಟಿಕತೆಯ ಕುರಿತಾಗಿ ಸಭೆ ನಡೆಸಿದರು. 

ಈ ಸಭೆ ಮುಗಿದ ನಂತರ ಈಗ ಸ್ಮೃತಿ ಇರಾನಿ ಅವರು ಬಿಲ್ ಗೇಟ್ಸ್ ಅವರೊಂದಿಗಿರುವ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಅವರು ತಮ್ಮ ಪೋಟೋಗೆ ನೀಡಿರುವ ಶೀರ್ಷಿಕೆ ಮಾತ್ರ ಎಲ್ಲರನ್ನು ಒಂದು ಕ್ಷಣ ಅಚ್ಚರಿಗೊಳಿಸಿದೆ. 'ಸೊಚ್ ರಹೇ ಹೈನ್ ಪಡಾಯಿ ಪುರಿ ಕರಿ ನಹಿ, ಆಗೆ ಕ್ಯಾ ಕರೇನ್ (ನಾವು ನಮ್ಮ ಪದವಿಗಳನ್ನು ಪೂರ್ಣಗೊಳಿಸಿಲ್ಲ, ಮುಂದೆ ಏನು ಮಾಡಬೇಕು) ಎಂದು ಶೀರ್ಷಿಕೆ ನೀಡಿದ್ದಾರೆ.

 
 
 
 

 
 
 
 
 
 
 
 
 

सोच रहे हैं पढ़ाई पूरी करी नहीं , आगे क्या करें 🧐

A post shared by Smriti Irani (@smritiiraniofficial) on

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಮೃತಿ ಇರಾನಿ ಅವರು ಪದವೀಧರರಲ್ಲ ಎಂದು ಚುನಾವಣಾ ಆಯೋಗಕ್ಕೆ ಘೋಷಿಸಿದ್ದರು. ಅವರ ಸಮೀಕ್ಷೆಯ ಅಫಿಡವಿಟ್ನಲ್ಲಿ ಮೂರು ವರ್ಷದ ಪದವಿ ಕೋರ್ಸ್ ಪೂರ್ಣಗೊಂಡಿಲ್ಲ ಎಂದು ಬ್ರಾಕೆಟ್ಗಳಲ್ಲಿ ಉಲ್ಲೇಖಿಸಲಾಗಿತ್ತು

ಇನ್ನೊಂದೆಡೆಗೆ ಬಿಲ್ ಗೇಟ್ಸ್ ಕಾಲೇಜು ವಿದ್ಯಾಭ್ಯಾಸ ತೊರೆದ ವ್ಯಕ್ತಿಗಳಲ್ಲಿನ ಅಗ್ರಗಣ್ಯ ವ್ಯಕ್ತಿಯಾಗಿದ್ದಾರೆ. ಮೈಕ್ರೋಸಾಫ್ಟ್ ಗಾಗಿ ಅವರು ಹಾರ್ವರ್ಡ್ ನಿಂದ ಹೊರಬಂದರು.ಈಗ ಅವರು 110 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಜಗತ್ತಿನ ಅತ್ಯಂತ್ಯ ಶ್ರೀಮಂತ್ ವ್ಯಕ್ತಿಯಾಗಿದ್ದಾರೆ.