ಸಮಾಜವಾದಿ ಪಕ್ಷ ಅಜಂಗಢವನ್ನು 'ಆತಂಕದ ನೆಲೆ' ಮಾಡಿದೆ: ಯೋಗಿ ಆದಿತ್ಯನಾಥ್

ಸಮಾಜವಾದಿ ಪಕ್ಷ ಅಜಂಗಢವನ್ನು ಕ್ಷೇತ್ರವನ್ನು ಆತಂಕದ ನೆಲೆಯಾಗಿಸಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

Updated: Apr 25, 2019 , 04:18 PM IST
ಸಮಾಜವಾದಿ ಪಕ್ಷ ಅಜಂಗಢವನ್ನು 'ಆತಂಕದ ನೆಲೆ' ಮಾಡಿದೆ: ಯೋಗಿ ಆದಿತ್ಯನಾಥ್

ಅಜಂಗಢ: ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷ ಅಜಂಗಢವನ್ನು ಆತಂಕದ ನೆಲೆಯಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಅಜಂಗಢ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಪರ ಗುರುವಾರ ಚುನಾವಣಾ ಪ್ರಚಾರ ಮಾಡಿದ ಯೋಗಿ ಆದಿತ್ಯನಾಥ್, "ಈ ಹಿಂದೆ ಶಿಕ್ಷಣ ಮತ್ತು ಸಾಹಿತ್ಯಕ್ಕೆ ಅಜಂಗಢ ಹೆಸರಾಗಿತ್ತು. ಆದರೀಗ ಸಮಾಜವಾದಿ ಪಕ್ಷ ಈ ಕ್ಷೇತ್ರವನ್ನು ಆತಂಕದ ನೆಲೆಯಾಗಿಸಿದೆ" ಎಂದಿದ್ದಾರೆ. 

ಎಸ್ಪಿ-ಬಿಎಸ್ಪಿ ಡಿಎನ್ಎ ಯಲ್ಲಿಯೇ ಅಪರಾಧ ಸೇರಿಕೊಂಡಿದೆ. ಹಾಗಾಗಿ ಗೆಸ್ಟ್ ಹೌಸ್ ಹಗರಣವನ್ನು ಸಮರ್ಥಿಸಿಕೊಂಡಿದೆ. ಅಂದು ಹಗರಣದ ಸಂದರ್ಭದಲ್ಲಿ ಈ ಕ್ಷೇತ್ರದ ಜನತೆ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದರು. ಹಾಗಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.

ಅಜಂಗಢದಲ್ಲಿ ಶಿಕ್ಷಣವನ್ನು ಉತ್ತೇಜಿಸಲು ನಾವು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ ಸಿಎಂ ಯೋಗಿ, "ಭಾರತವು ಸುರಕ್ಷಿತವಾಗಿಬೇಕು ಎಂದು ನೀವು ಬಯಸುವಿರಾದರೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡಿ" ಎಂದು ಯೋಗಿ ಜನರಲ್ಲಿ ಮನವಿ ಮಾಡಿದರು.