ತನ್ನ ಗ್ರಾಹಕರಿಗೆ Big Shock ನೀಡಿದ SBI

ಎರಡು ಕೋಟಿ ರೂ.ಗಿಂತ ಕಡಿಮೆ ಇರುವ ಹಾಗೂ 7-45 ದಿನಗಳಿಂದ ಹಿಡಿದು 5-10 ವರ್ಷಗಳವರೆಗಿನ ಚಿಲ್ಲರೆ FD ಹೂಡಿಕೆಯ ಮೇಲಿನ ಬಡ್ಡಿ ದರವನ್ನು ಶೇ.0.45 ರಷ್ಟು ಇಳಿಕೆ ಮಾಡಿ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.

Last Updated : May 27, 2020, 04:14 PM IST
ತನ್ನ ಗ್ರಾಹಕರಿಗೆ Big Shock ನೀಡಿದ SBI title=

ನವದೆಹಲಿ: ಒಂದು ವೇಳೆ ನೀವೂ ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ FD ಖಾತೆ ತೆರೆಯಲು ಯೋಜಿಸುತ್ತಿದ್ದರೆ, ಮೇ 27 ರಿಂದ ಈ ಖಾತೆಗಳ ಮೇಲಿನ ಬಡ್ಡಿ ದರದಲ್ಲಿ ಇಳಿಕೆ ಮಾಡಲಾಗಿದೆ ಎಂಬುದನ್ನು ತಿಳಿಯುವುದು ಅವಶ್ಯಕವಾಗಿದೆ. ಹೌದು, ಭಾರತೀಯ ಸ್ಟೇಟ್ ಬ್ಯಾಂಕ್ ಎರಡು ಕೋಟಿ ರೂ. ಅಥವಾ ಅದಕ್ಕಿಂತ ಕಡಿಮೆ ಇರುವ ಹಾಗೂ 7-45 ದಿನಗಳಿಂದ ಹಿಡಿದು 5-10 ವರ್ಷಗಳ ಅವಧಿಯವರೆಗೆ ಹೂಡಿಕೆ ಮಾಡಲಾಗುವ ಚಿಲ್ಲರೆ FD ಮೇಲಿನ ಬಡ್ಡಿದರವನ್ನು ಶೇ.0.45ಕ್ಕೆ ಇಳಿಕೆ ಮಾಡಿದೆ. ಇದರರ್ಥ ಇದೀಗ SBIನ FD ಖಾತೆಯಿಂದ ಬರುವ ಲಾಭ ಕಡಿಮೆಯಾಗಿದೆ. ಹೊಸ ಬಡ್ಡಿದರಗಳು ಮೇ 27 ರಿಂದ ಜಾರಿಗೆ ಬಂದಿವೆ. ಭಾರತದಲ್ಲಿ ಸಾಂಪ್ರದಾಯಿಕ, ಸುರಕ್ಷಿತ ಮತ್ತು ನಿಶ್ಚಿತ ಬಡ್ಡಿ ಆದಾಯಕ್ಕಾಗಿ ದೊಡ್ಡ ಪ್ರಮಾಣದ ಸ್ಥಿರ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡಲಾಗುತ್ತದೆ.

ಎಸ್‌ಬಿಐ ಮೇ ತಿಂಗಳಲ್ಲಿ ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಎರಡನೇ ಬಾರಿಗೆ ಕಡಿಮೆ ಮಾಡಿದೆ. ಈ ಮೊದಲು, ಚಿಲ್ಲರೆ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು 3 ವರ್ಷಗಳ ಅವಧಿಗೆ ಶೇಕಡಾ 0.20 ರಷ್ಟು ಕಡಿಮೆ ಮಾಡಲಾಗಿದ್ದು, ಇದು ಮೇ 12 ರಿಂದ ಜಾರಿಗೆ ಬಂದಿದೆ.

ಇಳಿಕೆಯ ಬಳಿಕ ಹೊಸ ಬಡ್ಡಿದರಗಳು ಹೀಗಿರಲಿವೆ
ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 7 ರಿಂದ 45 ದಿನಗಳ ಠೇವಣಿ ಮೇಲಿನ ಬಡ್ಡಿದರವನ್ನು ವಾರ್ಷಿಕವಾಗಿ ಶೇಕಡಾ 3.3 ರಿಂದ 2.9 ಕ್ಕೆ ಇಳಿಸಲಾಗಿದೆ. ಇದೇವೇಳೆ , ಹಿರಿಯ ನಾಗರಿಕರಿಗೆ ಬಡ್ಡಿದರಗಳನ್ನು ಇದೇ ಅವಧಿಗೆ ವಾರ್ಷಿಕವಾಗಿ 3.8 ರಿಂದ 3.4 ಕ್ಕೆ ಇಳಿಸಲಾಗಿದೆ.

ಇದಲ್ಲದೆ, ಒಂದು ವರ್ಷದ ಠೇವಣಿಗಳ ಮೇಲಿನ ಬಡ್ಡಿದರವು ವಾರ್ಷಿಕವಾಗಿ 5.5 ರಿಂದ 5.1 ಕ್ಕೆ ಇಳಿದಿದೆ. ಅಷ್ಟೇ ಅವಧಿಗೆ, ಹಿರಿಯ ನಾಗರಿಕರ ಬಡ್ಡಿದರಗಳನ್ನು ಶೇಕಡಾ 6 ರಿಂದ 5.6 ಕ್ಕೆ ಇಳಿಸಲಾಗಿದೆ. 5 ವರ್ಷದ ತೆರಿಗೆ ಉಳಿತಾಯ ಮಾಡುವ ಎಫ್‌ಡಿ ಮೇಲಿನ ಬಡ್ಡಿದರವು ವಾರ್ಷಿಕವಾಗಿ ಶೇಕಡಾ 5.7 ರಿಂದ 5.4 ಕ್ಕೆ ಇಳಿದಿದೆ. ಇದೇ ವೇಳೆ, ಹಿರಿಯ ನಾಗರಿಕರು ಈಗ ಅಷ್ಟೇ ಅವಧಿಗೆ ಶೇ.6.5ರ  ಬದಲು ಶೇ.6.2 ವಾರ್ಷಿಕ ಬಡ್ಡಿಯನ್ನು ಪಡೆಯಲಿದ್ದಾರೆ. ಇತರೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳು ಹೀಗಿವೆ. 

2 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬೃಹತ್ ಎಫ್‌ಡಿಗಳ ಬಡ್ಡಿದರಗಳನ್ನು ಬ್ಯಾಂಕ್ ಪರಿಷ್ಕರಿಸಿದೆ. ಇದರ ಅಡಿಯಲ್ಲಿ, 7-45 ದಿನಗಳ ಎಫ್‌ಡಿ ಯಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಲ್ಲಾ ಎಫ್‌ಡಿಗಳ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲಾಗಿದೆ. ಇದೇ ವೇಳೆ, ಎಲ್ಲಾ ಎಫ್‌ಡಿಗಳಲ್ಲಿ 2 ವರ್ಷದಿಂದ 10 ವರ್ಷಕ್ಕೆ 0.50 ರಷ್ಟು ಕಡಿತ ಕಂಡುಬಂದಿದೆ.

ಇದಕ್ಕೂ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಕಡಿತಗೊಳಿಸಿತ್ತು
ಕರೋನಾ ವೈರಸ್‌ನಿಂದಾಗಿ ಆರ್ಥಿಕತೆಯ ಮೇಲೆ ಹೆಚ್ಚುತ್ತಿರುವ ಒತ್ತಡ ಮತ್ತು ಮಧ್ಯಮ ವರ್ಗದವರ ಆದಾಯದ ಮೇಲೆ ಇದರಿಂದ ಉತಾಗುತ್ತಿರುವ ಪರಿಣಾಮಗಳ ನಡುವೆ , ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಮಾನ್ಯ ಜನರಿಗೆ ಪರಿಹಾರ ನೀಡಿತ್ತು. ಮೇ 22 ರಂದು ರಿಸರ್ವ್ ಬ್ಯಾಂಕ್ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿತ್ತು. ರೆಪೊ ದರವನ್ನು ಶೇ. 4.4 ರಿಂದ ಶೇ. 4 ಕ್ಕೆ ಇಳಿಸಲಾಗಿದೆ. ಇದಕ್ಕೂ ಮೊದಲು ಮಾರ್ಚ್ 27ರಂದು ರೆಪೋ ದರದಲ್ಲಿ ಐತಿಹಾಸಿಕ 75 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿತ್ತು.

Trending News