ಸಲೂನ್, ಪಾನ್ ಶಾಪ್ ನಡೆಸುವ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ವಿಶೇಷ ಸಾಲ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಫುಟ್ ಪಾತ್ ಗಳ ಮೇಲೆ ವ್ಯಾಪಾರ ನಡೆಸುವ ಸಣ್ಣ ವ್ಯಾಪಾರಿಗಳಿಗಾಗಿ ಸಾಲ ಯೋಜನೆಯನ್ನು ಪ್ರಕಟಿಸಲಾಗಿದೆ. ನಗರಾಭಿವೃದ್ಧಿ ಸಚಿವಾಲಯದ ಸಹಾಯದಿಂದ ಈ ಯೋಜನೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ.

Last Updated : Jun 1, 2020, 07:46 PM IST
ಸಲೂನ್, ಪಾನ್ ಶಾಪ್ ನಡೆಸುವ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ವಿಶೇಷ ಸಾಲ ಯೋಜನೆ title=

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಫುಟ್ ಪಾತ್ ಗಳ ಮೇಲೆ ವ್ಯಾಪಾರ ನಡೆಸುವ ಸಣ್ಣ ವ್ಯಾಪಾರಿಗಳಿಗಾಗಿ ಸಾಲ ಯೋಜನೆಗೆ ಅನುಮೋದನೆ ನೀಡಲಾಗಿದೆ. ನಗರಾಭಿವೃದ್ಧಿ ಸಚಿವಾಲಯದ ಸಹಾಯದಿಂದ ಈ ಯೋಜನೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲ ನೀಡಲಾಗುವುದು. ಈ ಸಾಲವನ್ನು ಅಂಗಡಿಯವರು ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬಹುದು.
 
50 ಲಕ್ಷ ವ್ಯಾಪಾರಿಗಳಿಗೆ ಇದರಿಂದ ಲಾಭವಾಗಲಿದೆ
ಸರ್ಕಾರದ ಈ ಅನುಮೊದನೆಯಿಂದ ಸುಮಾರು 50 ಲಕ್ಷ ಸಣ್ಣ ಹಾಗೂ ಬೀದಿಬದಿಯ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಅಷ್ಟೇ ಅಲ್ಲ ನಿಯಮಿತವಾಗಿ ಸಾಲ ಮರುಪಾವತಿಸುವವರಿಗೆ ಬಡ್ಡಿಯಲ್ಲಿ ಸಬ್ಸಿಡಿ ಕೂಡ ನೀಡಲಾಗುವುದು. ಸರಿಯಾಗಿ ಸಾಲ ಮರುಪಾವತಿ ಮಾಡುವ ವ್ಯಾಪಾರಿಗಳಿಗೆ ಸಬ್ಸಿಡಿ ರೂಪದಲ್ಲಿ ಬಡ್ಡಿಯಲ್ಲಿ ಶೇ.7 ವಿನಾಯ್ತಿ ನೀಡಲಾಗುವುದು. ಈ ಯೋಜನೆಯ ಲಾಭ ಹಣ್ಣು-ತರಕಾರಿ ಮಾರುವವರು, ಪಾನ್ ಶಾಪ್ ನಡೆಸುವವರು ಸಣ್ಣ ಪುಸ್ತಕ ಅಂಗಡಿ ನಡೆಸುವವರು ಹಾಗೂ ಅನ್ಯ ಸಣ್ಣ ವ್ಯಾಪಾರಿಗಲಿದೆ ಲಾಭ ಸಿಗಲಿದೆ.

ಸರ್ಕಾರದಿಂದ ಜಾಗೃತಿ ಅಭಿಯಾನ ನಡೆಸಲಾಗುವುದು 
ಈ ಯೋಜನೆಯ ಲಾಭ ಆದಷ್ಟು ಹೆಚ್ಚು ಬೀದಿ ಬದಿಯ ವ್ಯಾಪಾರಿಗಳಿಗೆ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಅಭಿಯಾನ ನಡೆಸಲಿದೆ.ಈ ಕಾರ್ಯಕ್ರಮದ ಮೂಲಕ ಈ ಸಾಲ ಹೇಗೆ ಸಿಗಲಿದೆ, ಎಲ್ಲಿ ಸಿಗಲಿದೆ ಹಾಗೂ ಯಾವ ಯಾವ ಷರತ್ತುಗಳು ಅನ್ವಯಿಸಲಿವೆ ಎಂಬುದರ ಕುರಿತು ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು.

ಮೊಬೈಲ್ ಆಪ್ ಕೂಡ ಬಿಡುಗಡೆ ಮಾಡಲಾಗುವುದು
ಈ ಯೋಜನೆಯ ಕುರಿತು ಜಾಗೃತಿ ಮೂಡಿಸಲು ಸರ್ಕಾರದ ವತಿನಿಂದ ಮೊಬೈಲ್ ಆಪ್ ಹಾಗೂ ಪೋರ್ಟಲ್ ಕೂಡ ಬಿಡುಗಡೆಗೊಳಿಸಲಾಗುತ್ತಿದೆ. ಈ ಮೂಲಕ ಬೀದಿ ಬದಿಯ ವ್ಯಾಪಾರಿಗಳು ಈ ಯೋಜನೆಯ ಕುರಿತು ತಿಳಿಯಬಹುದಾಗಿದೆ. ಈ ಸ್ಕೀಮ್ ದೀರ್ಘಕಾಲದವರೆಗೆ ನಡೆಸಲಾಗುತ್ತಿದೆ.

Trending News