Ahmedabad Plane Crash : ಜೂನ್ 12 ರಂದು, ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ವಿಮಾನ ಅಪಘಾತಕ್ಕೆ ದೇಶ ಮತ್ತು ಪ್ರಪಂಚದ ಅನೇಕ ಪ್ರಸಿದ್ಧ ವ್ಯಕ್ತಿಗಳು ಸಂತಾಪ ಸೂಚಿಸಿ, ಮೃತರಿಗೆ ಗೌರವ ಸಲ್ಲಿಸಿದರು. ಈ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್.
ಈ ಅಪಘಾತದಲ್ಲಿ ಅವರ ಬದುಕುಳಿಯುವಿಕೆಯನ್ನು ಪವಾಡವೆಂದು ಪರಿಗಣಿಸಲಾಗುತ್ತಿದೆ, ಈ ಕುರಿತು ಎಲ್ಲೆಡೆ ಚರ್ಚಿಸಲಾಗುತ್ತಿದೆ. ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ವಿಶ್ವಾಸ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದರು. ಆದರೆ ಇದೀಗ ಪ್ರಸಿದ್ಧ ನಟಿ ಮತ್ತು ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ವಿಶ್ವಾಸ್ ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಇನ್ನೊಂದು ತಿಂಗಳಲ್ಲಿ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ !68 ಸಾವಿರಕ್ಕೆ ಕುಸಿಯುವ ಚಿನ್ನ !
ವಿಶ್ವಾಸ್ ಕುರಿತು ಟ್ವೀಟ್ ಮಾಡಿರುವ ಸುಚಿತ್ರಾ ಅವರನ್ನು ಸುಳ್ಳುಗಾರ ಎಂದು ಕರೆದಿದ್ದಾರೆ. ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ತಾನು ಇದ್ದೆ ಎಂದು ವಿಶ್ವಾಸ್ ಸುಳ್ಳು ಹೇಳಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಇದೀಗ ನಟಿಯ ಟ್ವೀಟ್ ವೈರಲ್ ಆಗಿದೆ. ಪ್ರಸ್ತುತ ನಟಿ ಕ್ಷಮೆಯಾಚಿಸಿ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಇನ್ನು ಸುಚಿತ್ರಾ ಅವರ ಟ್ಟೀಟ್ ವೈರಲ್ ಆದ ತಕ್ಷಣ, ನೆಟ್ಟಿಗರು ಅವರ ವಿರುದ್ಧ ಹರಿಹಾಯ್ದರು. ಈ ಪೈಕಿ "ವಿಶ್ವಾಸ್ ಏರ್ ಇಂಡಿಯಾ ವಿಮಾನದಲ್ಲಿ ಇದ್ದರು ಎಂದು ಅಹಮದಾಬಾದ್ ಆಸ್ಪತ್ರೆ ದೃಢಪಡಿಸಿದೆ" ಎಂದು ಕೆಲವು ನೆಟ್ಟಿಗರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಮಾತನಾಡಿ ಅಂತ ಸಲಹೆ ನೀಡಿದ್ದರು. ಈ ಗಲಾಟೆಯ ನಂತರ, ಸುಚಿತ್ರಾ ಈಗ ತನ್ನಪೋಸ್ಟ್ ಅನ್ನು ಅಳಿಸಿಹಾಕಿಸಿ, ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ:ರಾಜಧಾನಿಯಲ್ಲಿ ನಿಗೂಢ ಅಸ್ತಿಪಂಜರ ಪತ್ತೆ... ಕೊಲೆಯೋ.. ಆತ್ಮಹತ್ಯೆಯೋ...! ಅಸ್ಥಿ ಪಂಜರ ಯಾರದ್ದು..?
ಕ್ಷಮೆಯಾಚಿಸಿದ ಸುಚಿತ್ರಾ : ಇದಾದ ನಂತರ, ಸುಚಿತ್ರಾ ಕೃಷ್ಣಮೂರ್ತಿ ಮತ್ತೊಂದು ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು "ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದವರ ಬಗ್ಗೆ ನನ್ನ ಕೊನೆಯ ಟ್ವೀಟ್ ಅನ್ನು ಅಳಿಸಲಾಗಿದೆ. ನಾನು ಕ್ಷಮೆಯಾಚಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









