ಇಟಾಲಿಯನ್ ನೌಕಾ ಪಡೆ ಸದಸ್ಯರ ವಿರುದ್ಧದ ಪ್ರಕರಣಕ್ಕೆ ಅಂತ್ಯ ಹಾಡಿದ ಸುಪ್ರೀಂ

 2012 ರ ಫೆಬ್ರವರಿಯಲ್ಲಿ ಕೇರಳ ಕರಾವಳಿಯಲ್ಲಿ ಇಬ್ಬರು ಮೀನುಗಾರರನ್ನು ಕೊಂದ ಆರೋಪದ ಮೇಲೆ ಇಬ್ಬರು ಇಟಾಲಿಯನ್ ನೌಕಾಪಡೆಗಳ ಸದಸ್ಯರ ವಿರುದ್ಧ ಭಾರತದಲ್ಲಿ ಕ್ರಿಮಿನಲ್ ಮೊಕದ್ದಮೆ ಮುಚ್ಚುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

Last Updated : Jun 15, 2021, 05:18 PM IST
  • 2012 ರ ಫೆಬ್ರವರಿಯಲ್ಲಿ ಕೇರಳ ಕರಾವಳಿಯಲ್ಲಿ ಇಬ್ಬರು ಮೀನುಗಾರರನ್ನು ಕೊಂದ ಆರೋಪದ ಮೇಲೆ ಇಬ್ಬರು ಇಟಾಲಿಯನ್ ನೌಕಾಪಡೆಗಳ ಸದಸ್ಯರ ವಿರುದ್ಧ ಭಾರತದಲ್ಲಿ ಕ್ರಿಮಿನಲ್ ಮೊಕದ್ದಮೆ ಮುಚ್ಚುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
  • ಭಾರತ ಒಪ್ಪಿಕೊಂಡಿರುವ ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ, ಇಟಲಿ ಗಣರಾಜ್ಯವು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಯನ್ನು ಪುನರಾರಂಭಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.​
ಇಟಾಲಿಯನ್ ನೌಕಾ ಪಡೆ ಸದಸ್ಯರ ವಿರುದ್ಧದ ಪ್ರಕರಣಕ್ಕೆ ಅಂತ್ಯ ಹಾಡಿದ ಸುಪ್ರೀಂ

ನವದೆಹಲಿ: 2012 ರ ಫೆಬ್ರವರಿಯಲ್ಲಿ ಕೇರಳ ಕರಾವಳಿಯಲ್ಲಿ ಇಬ್ಬರು ಮೀನುಗಾರರನ್ನು ಕೊಂದ ಆರೋಪದ ಮೇಲೆ ಇಬ್ಬರು ಇಟಾಲಿಯನ್ ನೌಕಾಪಡೆಗಳ ಸದಸ್ಯರ ವಿರುದ್ಧ ಭಾರತದಲ್ಲಿ ಕ್ರಿಮಿನಲ್ ಮೊಕದ್ದಮೆ ಮುಚ್ಚುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್ ಷಾ ಅವರ ರಜಾ ಪೀಠವು ಎಫ್‌ಐಆರ್ ಮತ್ತು ಇಬ್ಬರು ಇಟಾಲಿಯನ್ ನೌಕಾಪಡೆಗಳ ವಿರುದ್ಧದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿತು.

ಇದನ್ನು ಓದಿ-Pak Economic Crisis: ಸಂಪೂರ್ಣ ದಿವಾಳಿಯತ್ತ ಪಾಕಿಸ್ತಾನ, ಜಿನ್ನಾ ಕೊನೆಯ ಗುರುತಿನ ಹರಾಜಿಗೆ ಮುಂದಾದ ಇಮ್ರಾನ್ ಸರ್ಕಾರ

ಭಾರತ ಒಪ್ಪಿಕೊಂಡಿರುವ ಅಂತರರಾಷ್ಟ್ರೀಯ ನಿಯಮಾವಳಿಗಳ ಪ್ರಕಾರ, ಇಟಲಿ ಗಣರಾಜ್ಯವು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಯನ್ನು ಪುನರಾರಂಭಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.ಇಟಲಿ ಗಣರಾಜ್ಯವು ಈಗಾಗಲೇ ಪಾವತಿಸಿದ 10 ಕೋಟಿ ರೂ.ಗಳ ಪರಿಹಾರವನ್ನು 'ಸಮಂಜಸವಾದ ಮತ್ತು ಸಮರ್ಪಕ' ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ.

10 ಕೋಟಿ ರೂ.ಗಳ ಪರಿಹಾರದಲ್ಲಿ ತಲಾ 4 ಕೋಟಿ ರೂ.ಗಳನ್ನು ಮೃತ ಇಬ್ಬರು ಕೇರಳ ಮೀನುಗಾರರ ಉತ್ತರಾಧಿಕಾರಿಗಳ ಹೆಸರಿನಲ್ಲಿ ಠೇವಣಿ ಇಡಬೇಕು ಮತ್ತು ದೋಣಿ ಮಾಲೀಕರಿಗೆ ಎರಡು ಕೋಟಿ ರೂ ನೀಡಬೇಕು ಎಂದು ತಿಳಿಸಿದೆ.

ಇದನ್ನು ಓದಿ- Pakistan ಪ್ರಧಾನಿ ಖುರ್ಚಿಗೆ ಕಂಟಕ, Imran Khan ಆತಂಕ ಹೆಚ್ಚಿಸಿದ ಜ್ಯೋತಿಷಿ

ಫೆಬ್ರವರಿ 2012 ರಲ್ಲಿ, ಇಟಲಿಯ ನೌಕಾಪಡೆ ಸದಸ್ಯರು ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಭಾರತೀಯ ಮೀನುಗಾರರನ್ನು ಕೊಂದಿದ್ದಾರೆ ಎಂದು ಭಾರತ ಆರೋಪಿಸಿತ್ತು. 

ಇದನ್ನೂ ಓದಿ : CRICURU App : ಕ್ರಿಕೆಟ್ ತರಬೇತಿಗೆ 'ಆ್ಯಪ್' ಆರಂಭಿಸಿದ ವೀರೇಂದ್ರ ಸೆಹ್ವಾಗ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News