ಆಗಸ್ಟ್ 31 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ತಮಿಳುನಾಡು

ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್  ಪ್ರಕರಣಗಳ ಮಧ್ಯೆ, ರಾಜ್ಯ ಸರ್ಕಾರ ಗುರುವಾರ (ಜುಲೈ 30) ರಾಜ್ಯಾದ್ಯಂತ ಚಾಲ್ತಿಯಲ್ಲಿರುವ ಲಾಕ್‌ಡೌನ್ ಅನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ.

Updated: Jul 30, 2020 , 03:58 PM IST
 ಆಗಸ್ಟ್ 31 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ತಮಿಳುನಾಡು

ನವದೆಹಲಿ: ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್  ಪ್ರಕರಣಗಳ ಮಧ್ಯೆ, ರಾಜ್ಯ ಸರ್ಕಾರ ಗುರುವಾರ (ಜುಲೈ 30) ರಾಜ್ಯಾದ್ಯಂತ ಚಾಲ್ತಿಯಲ್ಲಿರುವ ಲಾಕ್‌ಡೌನ್ ಅನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ.

ಇದನ್ನೂ ಓದಿ: WHO ಎಚ್ಚರಿಕೆ...! Coronavirusಗೆ ಸಂಬಂಧಿಸಿದಂತೆ ಈ ತಪ್ಪು ಕಲ್ಪನೆ ಬೇಡ

ಆದಾಗ್ಯೂ, ಆಗಸ್ಟ್‌ನ ಎಲ್ಲಾ ಭಾನುವಾರದಂದು ರಾಜ್ಯವು ಸಂಪೂರ್ಣ ಲಾಕ್‌ಡೌನ್ ಅನ್ನು ಅನುಸರಿಸುತ್ತದೆ ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಭಾನುವಾರದಂದು ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.

ಇದನ್ನು ಓದಿ:ಕೇಂದ್ರ ಸರ್ಕಾರದ Unlock 3 ಮಾರ್ಗಸೂಚಿಗಳ ಪಟ್ಟಿ ಬಿಡುಗಡೆ: ನೀವು ತಿಳಿಯಬೇಕಾದ ಸಂಗತಿಗಳು

ಬುಧವಾರದವರೆಗೆ, ತಮಿಳುನಾಡಿನಲ್ಲಿ ಒಟ್ಟು 2,34,114 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ 1,72,883 ಚೇತರಿಸಿಕೊಂಡಿವೆ, 57,490 ಸಕ್ರಿಯವಾಗಿವೆ ಮತ್ತು 3741 ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿವೆ.

ಕಳೆದ ವಾರದಲ್ಲಿ, ಕೆಲವು ದಿನಗಳಲ್ಲಿ ತಮಿಳುನಾಡು 7000 ದೈನಂದಿನ ಪ್ರಕರಣಗಳನ್ನು ಸಮೀಪಿಸುತ್ತಿದೆ. ಮೇ ಮತ್ತು ಜೂನ್‌ಗೆ ಹೋಲಿಸಿದರೆ ರಾಜಧಾನಿ ಚೆನ್ನೈ ಪ್ರಕರಣಗಳಲ್ಲಿ ಗಮನಾರ್ಹ ಕುಸಿತ ಕಂಡಿದೆ, ರಾಜ್ಯಗಳ ಹಲವಾರು ಜಿಲ್ಲೆಗಳು ಪ್ರಸ್ತುತ ಹೆಚ್ಚಳವನ್ನು ಕಾಣುತ್ತಿವೆ.