ಜಮ್ಮು-ಕಾಶ್ಮೀರ: ಐವರು ಪೊಲೀಸ್ ಕುಟುಂಬಸ್ಥರನ್ನು ಅಪಹರಿಸಿದ ಉಗ್ರರು

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Updated: Aug 31, 2018 , 08:56 AM IST
ಜಮ್ಮು-ಕಾಶ್ಮೀರ: ಐವರು ಪೊಲೀಸ್ ಕುಟುಂಬಸ್ಥರನ್ನು ಅಪಹರಿಸಿದ ಉಗ್ರರು
File Photo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ದಕ್ಷಿಣ ಕಾಶ್ಮೀರದ ವಿವಿಧ ಪ್ರದೇಶಗಳಿಂದ ಐವರು ಪೊಲೀಸ್ ಕುಟುಂಬಸ್ಥರನ್ನು ಅಪಹರಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸಯ್ಯದ್ ಸಲಾಲುದ್ದಿನ್ ನ ಮಗ ಶಕೀಲ್ ನನ್ನು ಬಂಧಿಸಿದ ನಂತರ ಈ ಘಟನೆ ನಡೆದಿದೆ.

ಅಪಹರಣದ ಬಗ್ಗೆ ಇನ್ನೂ ಖಚಿತಪಡಿಸಿಕೊಳ್ಳುತ್ತಿರುವುದಾಗಿ ಹೇಳಿರುವ ಪೊಲೀಸರು ಈ ವಿಷಯದಲ್ಲಿ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲ. ಅದೇ ಸಮಯದಲ್ಲಿ, ಘಟನೆಯ ಬಗ್ಗೆ ಅಧಿಕಾರಿಗಳು, ಉಗ್ರಗಾಮಿಗಳು ಕನಿಷ್ಠ ಐದು ಜನರನ್ನು ಷೋಪಿಯನ್, ಕುಲ್ಗಮ್, ಅನಂತ್ನಾಗ್ ಮತ್ತು ಅವಂತಿಪೋರಾದಿಂದ ಪೊಲೀಸ್ ಕುಟುಂಬಸ್ಥರನ್ನೇ ಆಯ್ದು ಅಪಹರಿಸಲಾಗಿದೆ ಎಂದು ಹೇಳಿದ್ದಾರೆ. 

ಪೊಲೀಸರಾದ ರಫಿಕ್ ಅಹ್ಮದ್ ಅವರ ಮಗ, ಎ.ಎಸ್.ಐ ಬಶೀರ್ ಅಹ್ಮದ್ ಅವರ ಮಗ ಯಾಸಿರ್ ಅಹ್ಮದ್, ಅಬ್ದುಲ್ ಸಲಾಮ್ ಮೊಹಮ್ಮದ್ ಮಕ್ಬೂಲ್ ಭಟ್ ಪುತ್ರ ಜುಬೆರ್ ಅಹ್ಮದ್, ಅಬ್ದುಲ್ ಸಲಾಮ್ ಪುತ್ರ ಸಮಾರ್ ಅಹ್ಮದ್ ರಾಥರ್ ಅವರನ್ನು ಒಳಗೊಂಡಿದೆ.