ಹಿರಿಯ ನಾಗರಿಕರಿಗೂ ಉಚಿತ ಬಸ್ ಸೌಲಭ್ಯ ವಿಸ್ತರಣೆ- ಸಿಎಂ ಕೇಜ್ರಿವಾಲ್

ದೆಹಲಿ ಸಾರ್ವಜನಿಕ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಉಚಿತ ಸವಾರಿ ಯೋಜನೆಯನ್ನು ಹಿರಿಯ ನಾಗರಿಕರಿಗೆ ವಿಸ್ತರಿಸಬಹುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Updated: Oct 29, 2019 , 05:27 PM IST
ಹಿರಿಯ ನಾಗರಿಕರಿಗೂ ಉಚಿತ ಬಸ್ ಸೌಲಭ್ಯ ವಿಸ್ತರಣೆ- ಸಿಎಂ ಕೇಜ್ರಿವಾಲ್
file photo

ನವದೆಹಲಿ: ದೆಹಲಿ ಸಾರ್ವಜನಿಕ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಉಚಿತ ಸವಾರಿ ಯೋಜನೆಯನ್ನು ಹಿರಿಯ ನಾಗರಿಕರಿಗೆ ವಿಸ್ತರಿಸಬಹುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಯೋಜನೆ ಲಿಂಗ ಅಸಮಾನತೆ ಅಂತರವನ್ನು ನಿವಾರಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಾಯ ಮಾಡಲಿದೆ ಎಂದು ಕೇಜ್ರಿವಾಲ್ ತಮ್ಮ ಮೊಬೈಲ್ ಆಪ್ ನಲ್ಲಿ ಹೇಳಿದ್ದಾರೆ.

'ಈಗ ಹೆಚ್ಚಿನ ಸಾರಿಗೆ ವೆಚ್ಚದಿಂದಾಗಿ ಶಾಲೆಗಳು ಮತ್ತು ಕಾಲೇಜುಗಳಿಂದ ಹೊರಗುಳಿಯಬೇಕಾಗಿದ್ದ ಬಾಲಕಿಯರು ಮತ್ತು ಮಹಿಳೆಯರು ತಮ್ಮ ಶಿಕ್ಷಣವನ್ನು ತ್ಯಾಗ ಮಾಡುವ ಅಗತ್ಯವಿಲ್ಲ. ಅವರು ಈಗ ತಮ್ಮ ಮನೆಗಳಿಂದ ದೂರದಲ್ಲಿರುವ ಉತ್ತಮ ಶಾಲೆಗಳು ಮತ್ತು ಕಾಲೇಜುಗಳಿಗೆ ಬಸ್ಸುಗಳಲ್ಲಿ ಹೋಗಬಹುದು. ಇನ್ನೂ ಮಹಿಳೆಯರು ಕಚೇರಿಗಳು ಸಾರಿಗೆ ವೆಚ್ಚದ ಬಗ್ಗೆ ಚಿಂತಿಸಬೇಕಾಗಿಲ್ಲ 'ಎಂದು ಕೇಜ್ರಿವಾಲ್ ಹೇಳಿದರು.

ಮುಂಬರುವ ದಿನಗಳಲ್ಲಿ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಎಲ್ಲದನ್ನೂ ಒಮ್ಮೆಗೆ ಮಾಡಲೂ ಸಾಧ್ಯವಿಲ್ಲ ನಾವು ಅದನ್ನು ಖಂಡಿತವಾಗಿ ಮಾಡುತ್ತೇವೆ. ಈಗ ಮಹಿಳೆಯರಿಗೆ ಆರಂಭಿಸಿರುವ ಯೋಜನೆ ಆಧಾರದ ಮೇಲೆ ಭವಿಷ್ಯದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಸವಾರಿಗಳನ್ನು ಉಚಿತವಾಗಿ ನೀಡುವ ಪ್ರಯತ್ನ ಮಾಡಲಿದ್ದೇವೆ ಎಂದರು.

ದೆಹಲಿ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಡಿಟಿಸಿ) ಮತ್ತು ಕ್ಲಸ್ಟರ್ ಬಸ್‌ಗಳನ್ನು ಸಾಗುವ  ಮಹಿಳೆಯರಿಗೆ ಈ ಯೋಜನೆಯಡಿ ಕಂಡಕ್ಟರ್‌ಗಳು 10 ರೂ.ಗಳ ಮುಖಬೆಲೆಯ ಗುಲಾಬಿ ಟಿಕೆಟ್‌ಗಳನ್ನು ಮಂಗಳವಾರ ನೀಡಿದ್ದರು. ಅಂತಹ ಟಿಕೆಟ್‌ಗಳ ಸಂಖ್ಯೆಯನ್ನು ಆಧರಿಸಿ ಸರ್ಕಾರವು ಸಾರಿಗೆದಾರರಿಗೆ ಮರುಪಾವತಿ ಮಾಡುತ್ತದೆ.