ಹರಿಯಾಣ: ನಿನ್ನೆ ಗುರು ಪೂರ್ಣಿಮೆ, ಇಡೀ ದೇಶವೇ ಗುರುಗಳನ್ನು ಆರಾಧಿಸುವ ದಿನ ಅದು, ತಮ್ಮ ಪ್ರೀತಿಯ ಗುರುಗಳಿಗೆ ಶುಭಕೋರಿ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಭಕ್ತಿಯಿಂದ ಆಶಿರ್ವಾದ ಪಡೆಯುವ ಮಹತ್ವದ ದಿನ ಇದಾಗಿದೆ. ಆದರೆ ಈ ದಿನ ಮನಕಲುಕುವ ದುರ್ಘಟನೆಯೊಂದು ನಡೆದಿದೆ, ವಿದ್ಯಾರ್ಥಿಗಳಿಬ್ಬರು ತಮ್ಮ ಪ್ರಾಂಶುಪಾಲರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ.
ನಮ್ಮ ಜೀವನದಲ್ಲಿ ಸಾಧನೆಯ ಮಾರ್ಗದತ್ತ ಕೊಂಡೊಯ್ಯುವ ಮಾಗದರ್ಶಕರಾಗಿರುವ ಗುರುಗಳನ್ನು ಜೀವನ ಪೂರ್ತಿ ಪೂಜಿಸಿದರು ಅವರ ಋಣ ತೀರಿಸಲು ಆಗುವುದಿಲ್ಲ ಆದರೆ ಅದೇ ಗುರುಗಳನ್ನು ಪೂಜಿಸುವ ದಿನದಂದು ವಿದ್ಯಾರ್ಥಿಗಳು ಈ ರೀತಿ ಕೃತ್ಯ ಎಸಗಿರುವುದು ವಿಷಾದಕರ ಸಂಗತಿಯಾಗಿದೆ.
ಇದನ್ನೂ ಓದಿ- ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ: 2 ತಿಂಗಳ ನಂತರ ಮೌನ ಮುರಿದು ಕಾರಣ ಬಿಚ್ಚಿಟ್ಟ ಕಿಂಗ್ ಕೊಹ್ಲಿ
ಈ ದುರಂತ ನಡೆದಿರುವುದು ಹರಿಯಾಣದ ಕಿಸಾರ್ ಜಿಲ್ಲೆಯಲ್ಲಿ. ಹನ್ನೇರಡನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರನ್ನ ಕೊಂದಿದ್ದಾರೆ. ಇಲ್ಲಿನ ಕರ್ತಾರ್ ಮೆಮೋರಿಯಲ್ ಶಾಲೆಯ ಪ್ರಾಂಶುಪಾಲ ಜಗಬೀರ್ ಸಿಂಗ್ ಹತ್ಯೆಯಾದ ದುರ್ದೈವಿ. ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದ್ದಕ್ಕೆ ಕೊಪಗೊಂಡ ಹುಡುಗರು ಈ ಕೃತ್ಯ ಎಸಗಿದ್ದಾರೆ.
ಹೇರ್ ಕಟ್ ಮಾಡಿಸಿ ಅಂದಿದ್ದಕ್ಕೆ ಕೊಲೆ
ಗುರು ಕಲ್ಲಿನಂತಿರುವ ವಿದ್ಯಾರ್ಥಿಗಳಿಗೆ ಶಿಲೆರೂಪ ನೀಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿಸಲು ತಮ್ಮ ಜೀವನವನ್ನು ಮುಡಿಪಾಗಿ ಇಟ್ಟಿರುತ್ತಾರೆ. ಅವರ ಹೇಳುವ ಬುದ್ದಿಮಾತುಗಳು ನಮ್ಮ ಉಜ್ವಲ ಜೀವನವನ್ನು ರೂಪಿಸಿಕೊಳ್ಳಲು ದಾರಿದೀಪವಾಗುತ್ತದೆ. ಆದರೆ ಇಲ್ಲಿ ವಿದ್ಯಾರ್ಥಿಗಳಿಗೆ ಹೇರ್ ಕಟ್ ಮಾಡಿಸಿಕೊಂಡು ನೀಟಾಗಿ ಕಾಲೇಜ್‌ಗೆ ಬನ್ನಿ ಎಂದಿದ್ದಕ್ಕೆ ಸಿಟ್ಟಾಗಿ ಪ್ರಾಂಶುಪಾಲರನ್ನು ಕೊಂದ ಘಟನೆ ನಡೆದಿದೆ.
ಕಾಲೇಜಿಗೆ ಬರುವಾಗ ಸಿಸ್ತನ್ನು ಪಾಲಿಸಿ ಎಂದಿದ್ದಕ್ಕೆ ಹಿಸಾರ್ ಜಿಲ್ಲೆಯ ಬಾಸ್ ಬಾದ್‌ಶಾಹ್‌ಪುರ ಗ್ರಾಮದ ಕರ್ತಾರ್ ಮೆಮೋರಿಯಲ್ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಜಗಬೀರ್‌ಸಿಂಗ್ (50) ಜೀವವನ್ನೇ ಕಳೆದುಕೊಂಡಿದ್ದಾರೆ. ಈ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಕೂದಲು ಕಟ್‌ಮಾಡಿಸಿಕೊಂಡು ಒಳ್ಳೆಯ ನಡುವಳುಕೆಯಿಂದ ವರ್ತಿಸಿ ಎಂದು ಬುದ್ದಿ ಹೇಳಿದ್ದಾರೆ. ಅಷ್ಟಕ್ಕೆ ಕೊಪಗೊಂಡ ವಿದ್ಯಾರ್ಥಿಗಳು ಗುರುವಾರದಂದು ಬೆಳಿಗ್ಗೆ10.30 ರ ಸುಮಾರಿಗೆ ಇಬ್ಬರು ವಿದ್ಯಾರ್ಥಿಗಳು ಫೋಲ್ಡಿಂಗ್ ಚಾಕುವನ್ನು ತೆಗೆದು ಸಿಂಗ್ ಅವರಿಗೆ ಹಲವು ಬಾರಿ ಇರಿದಿದ್ದಾರೆ.
ಇದನ್ನೂ ಓದಿ-ನಿಮ್ಮ ಬಿಳಿಕೂದಲನ್ನು ಕಪ್ಪಾಗಿಸಲು ಇದೊಂದೆ ರಾಮಬಾಣ.. ಒಣದ್ರಾಕ್ಷಿಯೊಂದಿಗೆ ಈ ಎರಡು ಕಾಳುಗಳನ್ನು ಬೆರಸಿದರೆ ಸಾಕು..
ಚಾಕುವಿನಿಂದ ಇರಿದ ಕಾರಣ ತೀವ್ರ ರಕ್ತಸ್ರಾವದಿಂದ ಪ್ರಾಂಶುಪಾಲರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಲೆಯ ಆವರಣದಲ್ಲಿನ ಸಿಸಿಟಿವಿ ಯಲ್ಲಿ ಬಾಲಕರು ಪ್ರಾಂಶುಪಾಲರಿಗೆ ಚಾಕುವಿನಿಂದ ಇರಿದು ಓಡಿಹೋಗುವುದು ಸೆರೆಯಾಗಿದೆ.
ಗುರು ಪೂರ್ಣಿಮೆಯ ದಿನದಂದು ಈ ಘಟನೆ ನಡೆದಿದ್ದು, ಕೊಲೆ ಮಾಡಿದ ವಿದ್ಯಾರ್ಥಿಗಳು ಅಪ್ರಾಪ್ತರಾಗಿದ್ದರಿಂದ ಇವರನ್ನ ಇನ್ನೂ ವಶಕ್ಕೆ ತೆಗೆದುಕೊಳ್ಳಲಾಗಿಲ್ಲ ಎಂದು ಸ್ಥಳಿಯ ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









