ಅತಿ ಕಡಿಮೆ ವಯಸ್ಸಿನಲ್ಲಿ ಜಡ್ಜ್ ಆಗಿ ಇತಿಹಾಸ ರಚಿಸಿದ ರಾಜಸ್ಥಾನದ ಮಾಯಾಂಕ್

ಜೈಪುರದ ಮಾನಸರೋವರ್ ಪ್ರದೇಶದ ನಿವಾಸಿಯಾಗಿರುವ 21 ವರ್ಷದ ಮಾಯಾಂಕ್ ಮೊದಲ ಪ್ರಯತ್ನದಲ್ಲಿಯೇ ಈ ಯಶಸ್ಸನ್ನು ಸಾಧಿಸಿದ್ದಾರೆ.

Last Updated : Nov 22, 2019, 09:44 AM IST
ಅತಿ ಕಡಿಮೆ ವಯಸ್ಸಿನಲ್ಲಿ ಜಡ್ಜ್ ಆಗಿ ಇತಿಹಾಸ ರಚಿಸಿದ ರಾಜಸ್ಥಾನದ ಮಾಯಾಂಕ್ title=

ಜೈಪುರ: ರಾಜಸ್ಥಾನ ನ್ಯಾಯಾಂಗ ಸೇವೆಗಳ ((RJS) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜೈಪುರದ ಮಾಯಾಂಕ್ ಪ್ರತಾಪ್ ಸಿಂಗ್ (Mayank Pratap Singh) ಇತಿಹಾಸ ನಿರ್ಮಿಸಿದ್ದಾರೆ. ರಾಜಸ್ಥಾನ ನ್ಯಾಯಾಂಗ ಸೇವೆಗಳ ಫಲಿತಾಂಶಗಳನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. 21 ವರ್ಷದ ಮಯಾಂಕ್ ಈ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿದ್ದಾರೆ. 

ಜೈಪುರದ ಮಾನಸರೋವರ್ ಪ್ರದೇಶದ ನಿವಾಸಿಯಾಗಿರುವ 21 ವರ್ಷದ ಮಾಯಾಂಕ್ ಮೊದಲ ಪ್ರಯತ್ನದಲ್ಲಿಯೇ ಈ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಈ ವರ್ಷ ರಾಜಸ್ಥಾನ್ ವಿಶ್ವವಿದ್ಯಾಲಯದಿಂದ ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವರ್ಷ ರಾಜಸ್ಥಾನ ಹೈಕೋರ್ಟ್ ಪರೀಕ್ಷೆಯ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಇಳಿಸಿದೆ ಎಂಬುದು ಗಮನಾರ್ಹ.

ಜೀ ಮೀಡಿಯಾದೊಂದಿಗಿನ ಮಾತನಾಡಿರುವ ಮಾಯಾಂಕ್, ತಾವು ಪರೀಕ್ಷೆಗೆ ತಯಾರಿ ಮಾಡಲು ದಿನಚರಿಯನ್ನು ಸಿದ್ಧಪಡಿಸಿದ್ದೆ. ಅದನ್ನು ತಪ್ಪದೇ ಪಾಲಿಸುತ್ತಿದ್ದೆ. ದಿನಕ್ಕೆ 12-13 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಉತ್ತಮ ನ್ಯಾಯಾಧೀಶರಾಗಲು ಪ್ರಾಮಾಣಿಕತೆ ಬಹಳ ಮುಖ್ಯ, ನಾನು ನಿತ್ಯ ಪ್ರಾಮಾಣಿಕವಾಗಿ ಅಧ್ಯಯನದ ದಿನಚರಿಯನ್ನು ಅನುಸರಿಸಿದ್ದೇನು. ಅದೇ ಇಂದಿನ ಯಶಸ್ಸಿಗೆ ಕಾರಣ ಎಂದು ತಿಳಿಸಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಜೈಪುರದ ಮಗಳು:
ರಾಜಸ್ಥಾನ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಹೆಣ್ಣುಮಕ್ಕಳೂ ಹಿಂದೆ ಉಳಿದಿಲ್ಲ. ಜೈಪುರದ ತನ್ವಿ ಮಾಥುರ್ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಆರ್‌ಜೆಎಸ್ ನೇಮಕಾತಿ 2018 ಕ್ಕೆ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಯಿತು. ಅಕ್ಟೋಬರ್ 16 ರಂದು ಮುಖ್ಯ ಪರೀಕ್ಷೆಯ ಫಲಿತಾಂಶ ಬಂದಿತು. ಇದರ ನಂತರ, ಸಂದರ್ಶನ ಪ್ರಕ್ರಿಯೆಯು ನವೆಂಬರ್ 9 ರಿಂದ ಪ್ರಾರಂಭವಾಯಿತು. ಅಂತಿಮ ಫಲಿತಾಂಶವನ್ನು ನವೆಂಬರ್ 19 ರಂದು ಘೋಷಿಸಲಾಯಿತು.

Trending News