ಶಿವಸೇನಾದ 50:50 ಸೂತ್ರದ ಬೇಡಿಕೆಯನ್ನು ತಿರಸ್ಕರಿಸಿದ ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಇರುತ್ತಾರೆ ಎಂದು ಭರವಸೆ ನೀಡಿದ ದೇವೇಂದ್ರ ಫಡ್ನವೀಸ್ ಸಿಎಂ ಪದವಿಗೆ 50:50 ಸೂತ್ರ ಅನ್ವಯದ ವಿಚಾರವನ್ನು ತಳ್ಳಿ ಹಾಕಿದ್ದಾರೆ.

Last Updated : Oct 29, 2019, 01:51 PM IST
ಶಿವಸೇನಾದ 50:50 ಸೂತ್ರದ ಬೇಡಿಕೆಯನ್ನು ತಿರಸ್ಕರಿಸಿದ ದೇವೇಂದ್ರ ಫಡ್ನವೀಸ್  title=
file photo

ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಇರುತ್ತಾರೆ ಎಂದು ಭರವಸೆ ನೀಡಿದ ದೇವೇಂದ್ರ ಫಡ್ನವೀಸ್ ಸಿಎಂ ಪದವಿಗೆ 50:50 ಸೂತ್ರ ಅನ್ವಯದ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಶಿವಸೇನಾ ಮಹಾರಾಷ್ಟ್ರದಲ್ಲಿ ಸಿಎಂ ಪದವಿಗೆ 50:50 ಸೂತ್ರ ಅನ್ವಯವಾಗುವ ವಿಚಾರವಾಗಿ ಪದೆ ಪದೆ ಪ್ರಸ್ತಾಪಿಸುತ್ತಿರುವ ಹಿನ್ನಲೆಯಲ್ಲಿ ಈಗ ಫಡ್ನವಿಸ್ ಹೇಳಿಕೆ ನೀಡಿ. "ನಾನು ಸಿಎಂ ಆಗುತ್ತೇನೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಮಗೆ ಬಿ ಅಥವಾ ಸಿ ಯೋಜನೆ ಇಲ್ಲ, ಎ ಯೋಜನೆ ಮಾತ್ರ ಇದೆ' ಎಂದು ಫಡ್ನವಿಸ್ ಹೇಳಿದರು.ಬಿಜೆಪಿ-ಸೇನಾ ಮೈತ್ರಿಕೂಟದಲ್ಲಿ ಸಮತೋಲನ ಕುರಿತು ಶಿವಸೇನೆ ನಡೆಸುತ್ತಿರುವ ಟೀಕೆಗಳನ್ನು ದೇವೇಂದ್ರ ಫಡ್ನವೀಸ್ ತಳ್ಳಿಹಾಕಿದರು.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಮಾಡಿದ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಫಡ್ನವಿಸ್, ಸಾಮ್ನಾದ ಪಾತ್ರ ಮಾತುಕತೆ ಹಳಿ ತಪ್ಪಿಸುವುದು. ಶಿವಸೇನೆಗೆ 5 ವರ್ಷಗಳ ಕಾಲ ಸಿಎಂ ಹುದ್ದೆ ಬೇಕಾಗಬಹುದು, ಏನನ್ನಾದರೂ ಬಯಸುವುದು ಮತ್ತು ಏನನ್ನಾದರೂ ಪಡೆಯುವುದು ಎರಡು ವಿಭಿನ್ನ ಸಂಗತಿ. ಸಿಎಂ ಹುದ್ದೆಗೆ 50:50 ಸೂತ್ರದ ಬಗ್ಗೆ ಯಾವುದೇ ಭರವಸೆ ನೀಡಿರಲಿಲ್ಲ. ಅವರು ಬೇಡಿಕೆಗಳೊಂದಿಗೆ ಬರಬೇಕು, ನಾವು ಮಾತುಕತೆಗೆ ಕುಳಿತಾಗ ಅದರ ಅರ್ಹತೆಯ ಬಗ್ಗೆ ಚರ್ಚಿಸುತ್ತೇವೆ ಎಂದು ಫಡ್ನವೀಸ್ ಹೇಳಿದರು.

ಮಹಾರಾಷ್ಟ್ರ ಸಿಎಂ ಅಧಿಕಾರಾವಧಿಯ ಸಮಾನ ವಿಭಾಗವನ್ನು ಎಂದಿಗೂ ಶಿವಸೇನೆಗೆ ನೀಡಲಾಗುವುದಿಲ್ಲ ಎಂದು ಫಡ್ನವೀಸ್ ವಾದಿಸಿದರು.

Trending News