ನವೋದಯ ವಿದ್ಯಾಲಯ ಪ್ರವೇಶಕ್ಕಾಗಿ ಅಗತ್ಯವಾಗಿ ಬೇಕು ಈ ದಾಖಲೆಗಳು
JNVS Class 6th Admission Process:ನವೋದಯ ವಿದ್ಯಾಲಯದಲ್ಲಿ 6 ನೇ ತರಗತಿಗೆ ಪ್ರವೇಶ ಪಡೆಯಬೇಕಾದರೆ ಭರ್ತಿ ಮಾಡಬೇಕಾದ ಫಾರ್ಮ್ navodaya.gov.in ನಲ್ಲಿ ಲಭ್ಯವಿರಲಿದೆ.
JNVS Class 6th Admission Process : ನವೋದಯ ವಿದ್ಯಾಲಯ ಸಮಿತಿಯು ನವೆಂಬರ್ 2022 ರಲ್ಲಿ 6 ನೇ ತರಗತಿಯ ಪ್ರವೇಶಕ್ಕಾಗಿ ತಾತ್ಕಾಲಿಕವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತದೆ. 2023ನೇ ಸಾಲಿಗೆ ನವೋದಯ ವಿದ್ಯಾಲಯ ಪ್ರವೇಶವನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುವುದು. 6 ನೇ ತರಗತಿಗೆ ಪ್ರವೇಶ ಪಡೆಯಬೇಕಾದರೆ ಭರ್ತಿ ಮಾಡಬೇಕಾದ ಫಾರ್ಮ್ navodaya.gov.in ನಲ್ಲಿ ಲಭ್ಯವಿರಲಿದೆ.
ನವೋದಯ ವಿದ್ಯಾಲಯದ 6 ನೇ ತರಗತಿಯ ಪ್ರವೇಶ ಪರೀಕ್ಷೆ 2023 ಏಪ್ರಿಲ್ 2023 ರಲ್ಲಿ ನಡೆಯಲಿದೆ ಎನ್ನಲಾಗಿದೆ. ದೇಶಾದ್ಯಂತ ಎಲ್ಲಾ ಜವಾಹರ್ ನವೋದಯ ವಿದ್ಯಾಲಯಗಳಿಗೆ ಒಂದೇ ಹಂತದಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು. NVS 6 ನೇ ತರಗತಿಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಜೂನ್ 2023 ರೊಳಗೆ ಘೋಷಿಸುವ ಸಾಧ್ಯತೆ ಇದೆ. ಅಧಿಕೃತ ಪೋರ್ಟಲ್‌ನಿಂದ ಈ ಪರೀಕ್ಷೆಯ ಫಲಿತಾಂಶವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ : PM Modi Meets Tribal Brothers: ಅನಾಥ ಕಂದಮ್ಮಗಳ ಭೇಟಿ ಮಾಡಿದ ಪ್ರಧಾನಿ: ಶಿಕ್ಷಣದ ಜವಾಬ್ದಾರಿ ಹೊತ್ತ ಮೋದಿ
2023 ರಲ್ಲಿ 6 ನೇ ತರಗತಿಯ ಪ್ರವೇಶ ಪರೀಕ್ಷೆ ನಡೆಯುವ ದಿನಾಂಕಗಳು :
1.JNVST 2023ನೇ ಸಾಲಿನ 6ನೇ ತರಗತಿ ಪ್ರವೇಶ ಪರಿಕ್ಕ್ಷೆಯ ಅಧಿಸೂಚನೆಯು ನವೆಂಬರ್ 2022 ರಲ್ಲಿ ಬರಬಹುದು.
2.ನವೋದಯ ವಿದ್ಯಾಲಯದಲ್ಲಿ 6 ನೇ ತರಗತಿಯ ಪ್ರವೇಶ ಪ್ರಕ್ರಿಯೆಯು ನವೆಂಬರ್ 2022 ರಲ್ಲಿ ಪ್ರಾರಂಭವಾಗಬಹುದು.
3.NVS 2023ನೇ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಯ ಕೊನೆಯ ದಿನಾಂಕ ಡಿಸೆಂಬರ್ 2022 ಆಗಿರಬಹುದು.
4.ಡಿಸೆಂಬರ್ 2022 ರ ಕೊನೆಯ ವಾರದಲ್ಲಿ ಕರೆಕ್ಷನ್ ವಿಂಡೋ ತೆರೆಯಲಿದೆ.
5. ನವೋದಯ ಶಾಲೆಗೆ 2023 ರ 6 ನೇ ತರಗತಿಯ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 2023 ರಲ್ಲಿ ನಡೆಸಬಹುದು.
ಇದನ್ನೂ ಓದಿ : ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ Live stream ಸಾಧ್ಯವಿಲ್ಲ ಎಂದ ಸುಪ್ರೀಂ
ನವೋದಯ ಶಾಲೆಯ 2023 ರ 6 ನೇ ತರಗತಿಯ ಪ್ರವೇಶಕ್ಕೆ ಅಗತ್ಯವಿರುವ ದಾಖಲೆಗಳು :
ಫಲಿತಾಂಶದ ಘೋಷಣೆಯ ನಂತರ, ಆಯ್ಕೆಯಾದ ವಿದ್ಯಾರ್ಥಿಗಳು ನವೋದಯ ವಿದ್ಯಾಲಯ ಸಮಿತಿಯು ಸೂಚಿಸಿದ ಎಲ್ಲಾ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಬೇಕು.
1.ಹುಟ್ಟಿದ ದಿನಾಂಕದ ಪುರಾವೆ (ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ಇತ್ಯಾದಿ)
2.NVS ನ ಮಾನದಂಡಗಳ ಪ್ರಕಾರ ಪ್ರಮಾಣಪತ್ರ
3.ಗ್ರಾಮೀಣ ಪ್ರದೇಶದಲ್ಲಿ ಅಧ್ಯಯನದ ಪ್ರಮಾಣಪತ್ರ
4.5ನೇ ತರಗತಿ ಅಂಕಪಟ್ಟಿ
5.ನಿವಾಸ ಪ್ರಮಾಣಪತ್ರ ಅಥವಾ ಪುರಾವೆ
6.NIOS ಅಭ್ಯರ್ಥಿಗಳ ಸಂದರ್ಭದಲ್ಲಿ, 'B' ಪ್ರಮಾಣಪತ್ರದ ಅಗತ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.