`ಭಿನ್ನ ಧ್ವನಿಯಲ್ಲಿ ಮಾತನಾಡುವವರು ಬಿಜೆಪಿಯನ್ನು ಸೋಲಿಸಲು ಒಂದಾಗುತ್ತಾರೆ`
ಬಿಜೆಪಿಯನ್ನು ಸೋಲಿಸುವ ಸನ್ನದ್ದಾಗಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿರುವ ವಿರೋಧ ಪಕ್ಷಗಳು ಒಂದಾಗುತ್ತವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಶನಿವಾರದಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಬಿಜೆಪಿಯನ್ನು ಸೋಲಿಸುವ ಸನ್ನದ್ದಾಗಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿರುವ ವಿರೋಧ ಪಕ್ಷಗಳು ಒಂದಾಗುತ್ತವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಶನಿವಾರದಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಎನ್‌ಡಿಎ ಸರ್ಕಾರವು ಉತ್ತಮ ಆಡಳಿತ ಸಪ್ತಾಹವನ್ನು ಆಚರಿಸುವ ನಿರ್ಧಾರದ ಬಗ್ಗೆ ತರೂರ್ ಲೇವಡಿ ಮಾಡಿದ ಅವರು ಉತ್ತಮ ಆಡಳಿತದ ಬದಲಿಗೆ ಘೋಷಣೆಗಳು ಮತ್ತು ಸಂಕೇತಗಳ ರಾಜಕೀಯವು ಕಳೆದ ಏಳು ವರ್ಷಗಳಿಂದ ಉತ್ತಮ ಆಡಳಿತದ ವಸ್ತು ಕಾಣೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Shashi Tharoor : ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ : ಟ್ವಿಟ್ಟರ್ ನಲ್ಲಿ ಫೋಟೋ ವೈರಲ್
ತಮ್ಮ 'ಪ್ರೈಡ್, ಪ್ರಿಜುಡೀಸ್ & ಪಂಡಿಟ್ರಿ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ತರೂರ್, "ಪ್ರಸ್ತುತ ದೇಶದಲ್ಲಿ ಮುಕ್ತ ಧ್ವನಿಗಳನ್ನು ನಿಗ್ರಹಿಸಲಾಗುತ್ತಿದೆ"ಎಂದು ಹೇಳಿದರು. ಪ್ರಭಾ ಖೈತಾನ್ ಫೌಂಡೇಶನ್ ವತಿಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
"ರಾಜಕೀಯದಲ್ಲಿ ಒಂದು ವಾರ ಕೂಡ ಬಹಳ ಸಮಯ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ, ಬಿಜೆಪಿಯನ್ನು ಸೋಲಿಸಲು ವಿಭಿನ್ನ ಧ್ವನಿಯಲ್ಲಿ ಮಾತನಾಡುವವರು ಒಟ್ಟಾಗಿ ಬರುತ್ತಾರೆ ಎಂಬ ಭರವಸೆ ನಮ್ಮದು.ಬಿಜೆಪಿಯನ್ನು ಸೋಲಿಸುವುದು ಮಾತ್ರವಲ್ಲದೆ ಅದರ ನೀತಿಗಳು ಮತ್ತು ರಾಜಕೀಯವನ್ನೂ ಸೋಲಿಸುವುದು, ”ಎಂದು ಹೇಳಿದರು.
ಇದನ್ನೂ ಓದಿ: ಸುನಂದಾ ಪುಷ್ಕರ್ ಸಾವು ಪ್ರಕರಣ: ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ..!
ಟಿಎಂಸಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ವಿಫಲವಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬೆನ್ನಲೇ ಈಗ ತರೂರ್ ಅವರ ಹೇಳಿಕೆ ಬಂದಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಕಳೆದ ಏಳು ವರ್ಷಗಳಿಂದ ದೇಶದಲ್ಲಿ ಉತ್ತಮ ಆಡಳಿತ ಕಾಣೆಯಾಗಿದೆ ಎಂದು ಪ್ರತಿಪಾದಿಸಿದ ತರೂರ್, “ಈ ಸರ್ಕಾರದೊಂದಿಗಿನ ನನ್ನ ದೊಡ್ಡ ಸಮಸ್ಯೆ ಎಂದರೆ ವರ್ಷದ 52 ವಾರಗಳ ಕಾಲ ಉತ್ತಮ ಆಡಳಿತ ಇಲ್ಲದಿರುವುದು. ಆದ್ದರಿಂದ ಕೇವಲ ಒಂದು ವಾರದವರೆಗೆ ಉತ್ತಮ ಆಡಳಿತವನ್ನು ಹೊಂದಿರುವುದು ಸಾಕಾಗುವುದಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: Google-Facebook ಅಧಿಕಾರಿಗಳಿಗೆ Shashi Tharoor ನೇತೃತ್ವದ ಸಂಸದೀಯ ಸಮಿತಿಯ ಬುಲಾವ್
"ಈ ಸರ್ಕಾರದ ಸಮಸ್ಯೆ ಏನೆಂದರೆ, ಇವೆಲ್ಲವೂ (ಉತ್ತಮ ಆಡಳಿತ ವಾರ) ಸನ್ನೆಗಳು, ಸಂಕೇತಗಳ ರಾಜಕೀಯ, ಘೋಷಣೆಗಳ ರಾಜಕೀಯ. ನೀವು ನೋಡಬೇಕಾದದ್ದು ಉತ್ತಮ ಆಡಳಿತದ ಸಾರ, ಅದು ನಾಪತ್ತೆಯಾಗಿದೆ. ನಮ್ಮಲ್ಲಿ ಇರುವುದು ಘೋಷಣೆಗಳು ಮತ್ತು ಸಂಕೇತಗಳ ರಾಜಕೀಯ ಮಾತ್ರ" ಎಂದು ಶಶಿ ತರೂರ್ ಕಿಡಿ ಕಾರಿದರು.
ಉತ್ತಮ ಆಡಳಿತ ಸಪ್ತಾಹದ ಅಂಗವಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸಲು ಕೇಂದ್ರವು ಸೋಮವಾರ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.