ಗೋವಿನ ಹೆಸರಿನಲ್ಲಿ ವೋಟ್ ಕೇಳುವವರು ಮೇವನ್ನು ಸಹ ಒದಗಿಸಬೇಕು-ಅರವಿಂದ್ ಕೇಜ್ರಿವಾಲ್

ಶುಕ್ರವಾರದಂದು ಮುಖ್ಯಮಂತ್ರಿ ಅರವಿಂದ್ ದೆಹಲಿಯ ಗೋಶಾಲೆಯೊಂದಕ್ಕೆ ಭೇಟಿ ನೀಡಿ ಗೋವಿನ ಹೆಸರಿನಲ್ಲಿ ವೋಟ್ ಕೇಳುವವರು ಮೇವನ್ನು ಸಹಿತ ಒದಗಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

Last Updated : Jan 11, 2019, 08:52 PM IST
ಗೋವಿನ ಹೆಸರಿನಲ್ಲಿ ವೋಟ್ ಕೇಳುವವರು ಮೇವನ್ನು ಸಹ ಒದಗಿಸಬೇಕು-ಅರವಿಂದ್ ಕೇಜ್ರಿವಾಲ್ title=

ನವದೆಹಲಿ: ಶುಕ್ರವಾರದಂದು ಮುಖ್ಯಮಂತ್ರಿ ಅರವಿಂದ್ ದೆಹಲಿಯ ಗೋಶಾಲೆಯೊಂದಕ್ಕೆ ಭೇಟಿ ನೀಡಿ ಗೋವಿನ ಹೆಸರಿನಲ್ಲಿ ವೋಟ್ ಕೇಳುವವರು ಮೇವನ್ನು ಸಹಿತ ಒದಗಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿಯಲ್ಲಿರುವ  ಶ್ರೀಕೃಷ್ಣ ಗೋಶಾಲೆಗೆ ಅಭಿವೃದ್ದಿ ಸಚಿವ ಗೋಪಾಲ್ ರೈ ರೊಂದಿಗೆ  ಭೇಟಿ ನೀಡಿದ ಕೇಜ್ರಿವಾಲ್ ಬಿಜೆಪಿಯ ನೇತೃತ್ವದ ನಗರ ಪಾಲಿಕೆ ಕಳೆದ ಎರಡು ವರ್ಷಗಳಿಂದ ಗೋಶಾಲೆಗೆ ಹಣವನ್ನು ಬಿಡುಗಡೆ ಮಾಡಿಲ್ಲ ಎಂದರು. 

ಗೋಶಾಲೆಗೆ  ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಗೋವಿನ ಹೆಸರಿನಲ್ಲಿ  ಹೆಸರಿನಲ್ಲಿ ಆಮ್ ಆದ್ಮಿ ಪಕ್ಷವು ಮತಗಳನ್ನು ಕೇಳುವುದಿಲ್ಲ ಎಂದರು. ಬಿಜೆಪಿ ಆಳ್ವಿಕೆ ನಡೆಸುತ್ತಿರುವ ಮಹಾನಗರ ಪಾಲಿಕೆ ಕಳೆದ ಎರಡು ವರ್ಷಗಳಿಂದ ತನ್ನ ಹಣಕಾಸಿನ ಪಾಲನ್ನು ಬಿಡುಗಡೆ ಮಾಡಿಲ್ಲ, ಇದರಿಂದ ಗೊಶಾಲೆಗಳು ಸಮಸ್ಯೆಯನ್ನು ಎದುರಿಸಬೇಕಾಗಿದೆ ಎಂದರು.

"ಹಸುಗಳ ಹೆಸರಿನಲ್ಲಿ ಮತಗಳನ್ನು ಕೇಳುವವರು ಹಸುಗಳಿಗೆ ಮೇವು ನೀಡಬೇಕು.ಅವರು ಹಸುಗಳ ಹೆಸರಿನಲ್ಲಿ ಮತಗಳನ್ನು ಕೇಳುತ್ತಾರೆ, ಆದರೆ ಅವುಗಳಿಗೆ ಮೇವನ್ನು ಒದಗಿಸಲು ನಿರಾಕರಿಸುತ್ತಾರೆ. ಹಸುಗಳ ಮೇಲೆ ರಾಜಕೀಯ ಇರಬಾರದು "ಎಂದು ಬಿಜೆಪಿಯನ್ನು ಹೆಸರಿಸದೆ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದರು.

Trending News