ದೆಹಲಿಯ ಮಾಂಡವಲಿಯಲ್ಲಿ ರೈಲ್ವೆ ಹಳಿ ಮೇಲೆ ಮೂರು ಮೃತ ದೇಹ ಪತ್ತೆ

ದೆಹಲಿಯಲ್ಲಿ ಸುಮಾರು 30 ವರ್ಷದ ಮಹಿಳೆ ಇಬ್ಬರು ಮಕ್ಕಳೊಂದಿಗೆ ರೈಲಿನ ಹಳಿಗಳ ಮೇಲೆ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

Updated: Jul 2, 2020 , 02:17 PM IST
ದೆಹಲಿಯ ಮಾಂಡವಲಿಯಲ್ಲಿ ರೈಲ್ವೆ ಹಳಿ ಮೇಲೆ ಮೂರು ಮೃತ ದೇಹ ಪತ್ತೆ

ನವದೆಹಲಿ: ದುರಂತ ಪ್ರಕರಣವೊಂದರಲ್ಲಿ ದೆಹಲಿಯ ಮಾಂಡವಲಿ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳಲ್ಲಿ ಮಹಿಳೆ ಮತ್ತು ಇಬ್ಬರು ಪುಟ್ಟ ಮಕ್ಕಳ ಮೃತದೇಹ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ. ಶವಗಳು ಪತ್ತೆಯಾದ ಹಳಿಗಳ ಬಳಿ ಒಂದು ವರ್ಷದ ಮಗು ಅಳುವುದು ಕಂಡುಬಂದಿದೆ.

ರೈಲ್ವೆ ಹಳಿ ಮೇಲೆ ಮಲಗಿದ್ದ ಮಹಿಳೆಯೊಂದಿಗೆ ಇಬ್ಬರು ಮಕ್ಕಳ ಮೃತ ದೇಹಗಳ ಬಗ್ಗೆ ಆನಂದ್ ವಿಹಾರ್ ರೈಲ್ವೆ ನಿಲ್ದಾಣದ ಸಿಬ್ಬಂದಿಗೆ ತಿಳಿಸಲಾಗಿದೆ ಎಂದು ಹಿರಿಯ ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ ಆರ್‌ಪಿಎಫ್ ಸಬ್‌ಇನ್ಸ್‌ಪೆಕ್ಟರ್ ಯೋಗೇಶ್ ತಕ್ಷಣವೇ ಸ್ಥಳ ತಲುಪಿದರು.

ಪ್ರಾಥಮಿಕ ತನಿಖೆಯಿಂದ ಸುಮಾರು 30 ವರ್ಷ ವಯಸ್ಸಿನ ಮಹಿಳೆ ಮತ್ತು ಅವರ 5-6 ವರ್ಷಗಳ ಇಬ್ಬರು ಮಕ್ಕಳು ರೈಲ್ವೆ ಹಳಿಗಳಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯ ಮೂರನೇ ಮಗು ಹಳಿಗಳ ಬಳಿ ಅಳುತ್ತಿರುವುದು ಕಂಡು ಬಂದಿದೆ. ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಆಕೆಯನ್ನು ಮಂದವಳಿ ಪ್ರದೇಶದ ಕಿರಣ್ ಎಂದು ಗುರುತಿಸಲಾಗಿದೆ.