Paytm ಮಾಲಿಕನಿಗೆ ಬೆದರಿಕೆ; ಮಹಿಳಾ ಸೆಕ್ರೆಟರಿ ಸೇರಿ ಮೂವರು ಜೈಲು ಪಾಲು

ಆ ಮಹಿಳೆ ವಿಜಯ್ ಶೇಖರ್ ಅವರ ಸೆಕ್ರೆಟರಿಯಾಗಿದ್ದು, ಮಾಹಿತಿಯ ದುರ್ಬಳಕೆ ಮತ್ತು ಅಂಕಿಗಳನ್ನು ಸೋರಿಕೆ ಮಾಡುವ ಬೆದರಿಕೆಯನ್ನು ಹಾಕಿ ಕಂಪನಿಯ ಇಮೇಜ್ ಹಾಳು ಮಾಡುವುದಾಗಿ ಬೆದರಿಕೆ ಒಡ್ಡಿ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

Updated: Oct 23, 2018 , 10:20 AM IST
Paytm ಮಾಲಿಕನಿಗೆ ಬೆದರಿಕೆ; ಮಹಿಳಾ ಸೆಕ್ರೆಟರಿ ಸೇರಿ ಮೂವರು ಜೈಲು ಪಾಲು
File Image

ನೋಯ್ಡಾ: ಇ-ವಾಲೆಟ್ ಕಂಪೆನಿಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ವೈಯಕ್ತಿಕ ಮಾಹಿತಿ ಮತ್ತು ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸುವ ಬೆದರಿಕೆ ಮತ್ತು ಆತನಿಂದ 20 ಕೋಟಿ ರೂಪಾಯಿಗಳನ್ನು ಪಡೆಯಲು ಪ್ರಯತ್ನಿಸಿದ್ದಕ್ಕಾಗಿ Paytmನ ಮೂವರು ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ನೋಯ್ಡಾ ಪೊಲೀಸರು  ದೃಢಪಡಿಸಿದ್ದಾರೆ.

ವಿಜಯ್ ಶೇಖರ್ ತೇಜೋವಧೆ ಮಾಡುವ ಪ್ರಯತ್ನ!
ಇದು ವಿಜಯ್ ಶೇಖರ್ ಅವರ ತೇಜೋವಧೆ ಮಾಡುವ ಪ್ರಯತ್ನವಾಗಿದ್ದು ಇದರಲ್ಲಿ ಓರ್ವ ಮಹಿಳೆ ಕೂಡಾ ಶಾಮೀಲಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಆ ಮಹಿಳೆ ವಿಜಯ್ ಶೇಖರ್ ಅವರ ಸೆಕ್ರೆಟರಿಯಾಗಿದ್ದು, ಮಾಹಿತಿಯ ದುರ್ಬಳಕೆ ಮತ್ತು ಅಂಕಿಗಳನ್ನು ಸೋರಿಕೆ ಮಾಡುವ ಬೆದರಿಕೆಯನ್ನು ಹಾಕಿ ಕಂಪನಿಯ ಇಮೇಜ್ ಹಾಳು ಮಾಡುವುದಾಗಿ ಬೆದರಿಕೆ ಒಡ್ಡಿ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಪೊಲೀಸರ ಬಂಧನದಲ್ಲಿ ಆರೋಪಿಗಳು:
ಕಂಪೆನಿಯ ಪ್ರಧಾನ ಕಛೇರಿ ನೋಯ್ಡಾದಲ್ಲಿದೆ ಮತ್ತು ಕಂಪೆನಿಯ ಮೂವರು ಉದ್ಯೋಗಿಗಳನ್ನು ಸೆಕ್ಟರ್ 20 ಪೊಲೀಸ್ ಠಾಣೆಯ ಸಿಬ್ಬಂದಿಯಿಂದ ಬಂಧಿಸಲಾಗಿದೆ. ಪ್ರಕರಣದಲ್ಲಿ ನಾಲ್ಕನೇ ಆರೋಪಿ ತಲೆಮರೆಸಿಕೊಂಡಿದ್ದಾರೆ. ಗೌತಮ್ ಬುದ್ಧನಗರ ಹಿರಿಯ ಪೊಲೀಸ್ ಠಾಣೆಯ ವರಿಷ್ಠ ಪೊಲೀಸ್ ಅಧೀಕ್ಷಕ ಅಜಯ್ ಪಾಲ್ ಶರ್ಮಾ ಅವರು  ಸಿಬ್ಬಂದಿ ಕೆಲವು ಅಂಕಿಗಳನ್ನು ಕಳವು ಮಾಡಿದ್ದಾರೆ ಎಂದು Paytm ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಈಗ ಅವರು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಆ ಮಾಹಿತಿಯನ್ನು ಸೋರಿಕೆ ಮಾಡದಿರಲು ಅವರು 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ  ಎಂದು ಹೇಳಿದರು.

ತನಿಖೆ ಮಾಡಲು ವಿಶೇಷ ತಂಡ:
ಪೊಲೀಸ್ ತನಿಖೆಗಾಗಿ ಸೆಕ್ಟರ್ 20 ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಪಂತ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅಜಯ್ ಪಾಲ್  ಶರ್ಮಾ ತಿಳಿಸಿದ್ದಾರೆ. ಇಂದು ಪೊಲೀಸರು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳಿಂದ ಕಳವು ಮಾಡಲಾದ ಪ್ರಮುಖ ದತ್ತಾಂಶವನ್ನು ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದರು. ಮೂವರು ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಹೇಳಿದರು.