ಭಾರತಕ್ಕೆ 100 ಕೋಟಿ ರೂ. ಮೌಲ್ಯದ ರಕ್ಷಣಾ ಉಡುಪು ನೀಡಿದ ಟಿಕ್‌ಟಾಕ್

ಜನಪ್ರಿಯ ವಿಡಿಯೋ-ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ ಭಾರತದಲ್ಲಿ ಮಾರಕ ಕರೋನವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ 100 ಕೋಟಿ ರೂ.ಗಳ 4,00,000 ರಕ್ಷಣಾ ಸೂಟ್‌ಗಳ ಕೊಡುಗೆ ನೀಡಿದೆ.

Updated: Apr 1, 2020 , 08:55 PM IST
ಭಾರತಕ್ಕೆ 100 ಕೋಟಿ ರೂ. ಮೌಲ್ಯದ ರಕ್ಷಣಾ ಉಡುಪು ನೀಡಿದ ಟಿಕ್‌ಟಾಕ್

ನವದೆಹಲಿ: ಜನಪ್ರಿಯ ವಿಡಿಯೋ-ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್ ಭಾರತದಲ್ಲಿ ಮಾರಕ ಕರೋನವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ 100 ಕೋಟಿ ರೂ.ಗಳ 4,00,000 ರಕ್ಷಣಾ ಸೂಟ್‌ಗಳ ಕೊಡುಗೆ ನೀಡಿದೆ.

ಮೊದಲ ಬ್ಯಾಚ್ ನ 20,675 ಸೂಟ್‌ಗಳು ಇಂದು ಬೆಳಿಗ್ಗೆ ತಲುಪಿದ್ದು , ಎರಡನೇ ಹಂತದದಲ್ಲಿ 1,80,375 ಸೂಟ್‌ಗಳು ಶನಿವಾರದ ಮೊದಲು ಭಾರತಕ್ಕೆ ಬರಲಿವೆ. ಮುಂದಿನ ವಾರಗಳಲ್ಲಿ ಉಳಿದ 2,00,000 ಸೂಟ್‌ಗಳನ್ನು ವಿತರಿಸಲಾಗುವುದು ಎಂದು ಟಿಕ್ ಟಾಕ್ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.

ಕೇಂದ್ರ ಸಚಿವ ಸ್ಮೃತಿ ಇರಾನಿಗೆ ಬರೆದ ಪತ್ರದಲ್ಲಿ ಟಿಕ್‌ಟಾಕ್ ಮುಖ್ಯಸ್ಥ ನಿಖಿಲ್ ಗಾಂಧಿ ಜವಳಿ ಸಚಿವಾಲಯಕ್ಕೆ ಸೋರ್ಸಿಂಗ್, ಲಾಜಿಸ್ಟಿಕ್ಸ್ ಮತ್ತು ಸೂಟ್‌ಗಳ ವಿತರಣೆಗೆ ಧನ್ಯವಾದಗಳನ್ನು ಅರ್ಪಿಸಿದರು.ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಉಡುಗೆಗಳ ಕೊರತೆಯನ್ನು ಭಾರತ ಎದುರಿಸುತ್ತಿದೆ; ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ)  - ವಿಶೇಷ ಕವಚಗಳು, ಕೈಗವಸುಗಳು, ಕನ್ನಡಕಗಳು, ಮುಖವಾಡಗಳ ಕೊರತೆಯಿಂದಾಗಿ ಮುಷ್ಕರಕ್ಕೆ ಹೋಗುವುದಾಗಿ ವೈದ್ಯರು ಬೆದರಿಕೆ ಹಾಕಿದ್ದಾರೆ.

ಭಾರತದಲ್ಲಿ 250 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್, COVID-19 ಹರಡುವಿಕೆಯ ವಿರುದ್ಧ ಜಾಗೃತಿ ಮತ್ತು ಸುರಕ್ಷತಾ ಕ್ರಮಗಳನ್ನು ಹರಡಲು ದೇಶದಲ್ಲಿ ವಿವಿಧ ಅಭಿಯಾನಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಕರೋನವೈರಸ್ ಸಾಂಕ್ರಾಮಿಕವನ್ನು ದುರಂತ ಎಂದು ಕರೆದ ಟಿಕ್ ಟಾಕ್, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಒಟ್ಟಾಗಿ ಹೊರಬರುವುದು ಖಚಿತವಾಗಿದೆ ಎಂದು ಹೇಳಿದರು.

ಸಾಂಕ್ರಾಮಿಕ ಕರೋನವೈರಸ್ ಅನ್ನು ನಿಭಾಯಿಸುವ ಉದ್ದೇಶದಿಂದ ಮಾರ್ಚ್ 24 ರ ಮಧ್ಯರಾತ್ರಿಯಿಂದ ದೇಶವು ಲಾಕ್ ಡೌನ್ ಆಗಿದೆ. ಮಾರಣಾಂತಿಕ ಕಾಯಿಲೆಯು ಭಾರತದಲ್ಲಿ 38 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 1600 ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ರೋಗದ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ಇದರಲ್ಲಿ ಸಾಮಾಜಿಕ ದೂರ, ವಿಮಾನಗಳು ಮತ್ತು ರೈಲುಗಳ ಸಂಚಾರ ಸ್ಥಗಿತ ಮತ್ತು ಲಾಕ್ ಡೌನ್ ಸೇರಿವೆ.