ಕಡಿಮೆ ಶೌಚಾಲಯಗಳನ್ನು ನಿರ್ಮಿಸಿ ತಪ್ಪು ಅಂಕಿಅಂಶ ನೀಡಿದ್ದೇಕೆ? ಅಧಿಕಾರಿಗಳಿಗೆ ಸಿಎಂ ನೋಟಿಸ್

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಅಂಕಿಅಂಶಗಳನ್ನು ಕೇಳಿದ್ದರುಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಅಂಕಿಅಂಶಗಳನ್ನು ಮಂಡಿಸಿದರು, ಆದರೆ ಕೆಲ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತಪ್ಪಾದ ಅಂಕಿ ಅಂಶಗಳನ್ನು ಮಂಡಿಸಿರುವುದಕ್ಕೆ ಯೋಗಿ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.  

Last Updated : Aug 20, 2019, 03:40 PM IST
ಕಡಿಮೆ ಶೌಚಾಲಯಗಳನ್ನು ನಿರ್ಮಿಸಿ ತಪ್ಪು ಅಂಕಿಅಂಶ ನೀಡಿದ್ದೇಕೆ? ಅಧಿಕಾರಿಗಳಿಗೆ ಸಿಎಂ ನೋಟಿಸ್ title=
File Image

ಲಕ್ನೋ: ಉತ್ತರ ಪ್ರದೇಶದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಆಗಾಗ್ಗೆ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಸರ್ಕಾರದ ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ಯೋಗಿ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಕಡಿಮೆ ಶೌಚಾಲಯ ನಿರ್ಮಿಸಿ ಸರ್ಕಾರಕ್ಕೆ ತಪ್ಪು ಅಂಕಿಅಂಶ ನೀಡಿರುವ ಅಧಿಕಾರಿಗಳಿಗೆ ಯೋಗಿ ಬಿಸಿ ಮುಟ್ಟಿಸಿದ್ದಾರೆ. ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ತಪ್ಪು ಅಂಕಿಅಂಶಗಳನ್ನು ಮಂಡಿಸಿರುವ ಕಾರಣ 6 ಜಿಲ್ಲೆಯ ಅಧಿಕಾರಿಗಳ ವಿರುದ್ಧ ಸಿಎಂ ಯೋಗಿ ನೋಟಿಸ್ ನೀಡಿದ್ದಾರೆ.

ವಾಸ್ತವವಾಗಿ, ಸಿಎಂ ಯೋಗಿ ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಅಂಕಿಅಂಶಗಳನ್ನು ಕೇಳಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಅಂಕಿಅಂಶಗಳನ್ನು ಮಂಡಿಸಿದರು, ಆದರೆ ಕೆಲ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತಪ್ಪಾದ ಅಂಕಿ ಅಂಶಗಳನ್ನು ಮಂಡಿಸಿರುವುದಕ್ಕೆ ಯೋಗಿ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. 

ಮಾಹಿತಿಯ ಪ್ರಕಾರ, ಜಿಲ್ಲೆಗಳಲ್ಲಿ ಎಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂಬುದರ ಬಗ್ಗೆ ಸಿಎಂ ಯೋಗಿ ಮಾಹಿತಿ ಕೇಳಿದ್ದರು. ಆದರೆ ಆರು ಜಿಲ್ಲೆಗಳಲ್ಲಿ ಈ ಬಗ್ಗೆ ತಪ್ಪು ಅಂಕಿ-ಅಂಶಗಳನ್ನು ನೀಡಲಾಗಿದ್ದು, ಸಂಬಂದಪಟ್ಟ ಜಿಲ್ಲೆಗಳ ಡಿಎಂಗಳಿಗೆ ನೋಟಿಸ್ ನೀಡಲಾಗಿದೆ.

ಲೋಕಸಭಾ ಚುನಾವಣೆಯ ನಂತರ ಸಿಎಂ ಯೋಗಿ ಅಧಿಕಾರಿಗಳೊಂದಿಗೆ ನಿರಂತರ ಪ್ರತಿಕ್ರಿಯೆ ನಡೆಸುತ್ತಿರುತ್ತಾರೆ. ಸಾರ್ವಜನಿಕರ ಸಮಸ್ಯೆಗಳನ್ನು ನಿಯಮಿತವಾಗಿ ಆಲಿಸಬೇಕು ಮತ್ತು ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಸೂಚನೆಗಳನ್ನು ನೀಡಿದ್ದಾರೆ. ಇದರೊಂದಿಗೆ, ಸಮಸ್ಯೆಯನ್ನು ಪರಿಹರಿಸುವವರೆಗೆ ಮತ್ತು ದೂರುದಾರನು ಸಂಪೂರ್ಣವಾಗಿ ತೃಪ್ತಿಗೊಳ್ಳುವವರೆಗೆ, ದೂರನ್ನು ವಿಲೇವಾರಿ ಎಂದು ಪರಿಗಣಿಸಬಾರದು ಎಂದು ಅವರು ಸೂಚನೆಗಳನ್ನು ನೀಡಿದ್ದಾರೆ.

ಅದೇ ಅನುಕ್ರಮದಲ್ಲಿ, ತನಿಖೆಯ ಸಮಯದಲ್ಲಿ, ಶೌಚಾಲಯಗಳ ನಿರ್ಮಾಣ ಸಂಖ್ಯೆ ಹಾಗೂ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳು ತಾಳೆಯಾಗದ ಕಾರಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆರು ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ನೋಟಿಸ್ ನೀಡಿ ಶೀಘ್ರದಲ್ಲೇ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.
 

Trending News