ಒಂದೇ ಕುಟುಂಬದ 5 ಸದಸ್ಯರ ಮೃತದೇಹ ಪತ್ತೆ: ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ

ದೀರ್ಘಕಾಲದವರೆಗೆ ಮನೆಯ ಬಾಗಿಲು ತೆರೆಯದ ಕಾರಣ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ ಬಳಿಕ ಈ ವಿಷಯ ಬಹಿರಂಗಗೊಂಡಿದೆ.

Updated: Apr 25, 2020 , 02:55 PM IST
ಒಂದೇ ಕುಟುಂಬದ 5 ಸದಸ್ಯರ ಮೃತದೇಹ ಪತ್ತೆ: ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ

ಎಟಾ: ಕರೋನಾ ವೈರಸ್ ಸೋಂಕಿನಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಮಧ್ಯೆ ಉತ್ತರ ಪ್ರದೇಶದ ಎಟಾದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ನಿವೃತ್ತ ಆರೋಗ್ಯ ಅಧಿಕಾರಿ ಮನೆಯಿಂದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 5 ಜನರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು ಒಂದೇ ಕುಟುಂಬದ 5 ಮಂದಿ ಒಟ್ಟಿಗೆ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಘಟನೆ ಕೊಟ್ವಾಲಿ ನಗರದ ಇಟವಾ ಪೊಲೀಸ್ ಠಾಣೆಯ ಶೃಂಗರ್ ನಗರ ಕಾಲೋನಿಯಿಂದ ಬಂದಿದೆ. ಈ ಘಟನೆಯ ನಂತರ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ಮನೆ ಮಾಡಿದೆ.

ದೀರ್ಘಕಾಲದವರೆಗೆ ಮನೆಯ ಬಾಗಿಲು ತೆರೆಯದ ಕಾರಣ ನಿತ್ಯ ಅವರ ಮನೆಗೆ ಹಾಲು ಹಾಕುತ್ತಿದ್ದ ಹಾಲಿನ ವ್ಯಕ್ತಿ ಅನುಮಾನದಿಂದ ನೆರೆಯವರೊಂದಿಗೆ ಕೂಡಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ ಬಳಿಕ ಸಾಲು ಸಾಲಾಗಿ ಮಲಗಿದ್ದ ಮೃತ ದೇಹಗಳು ಮಲಗಿದ್ದ ವಿಷಯ ಬಹಿರಂಗಗೊಂಡಿದೆ.

ಈ ಬಗ್ಗೆ ಹಾಲಿನವರು ಮತ್ತು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಮೃತರಲ್ಲಿ 78 ವರ್ಷದ ರಾಜೇಶ್ವರ ಪ್ರಸಾದ್ ಪಚೌರಿ, ಅವರ ಅಳಿಯ 35 ವರ್ಷದ ದಿವ್ಯಾ ಪಚೌರಿ, ದಿವ್ಯಾ ಅವರ 24 ವರ್ಷದ ಸಹೋದರಿ ಬುಲ್ಬುಲ್, ದಿವ್ಯಾ ಅವರ ಇಬ್ಬರು ಗಂಡು ಮಕ್ಕಳಾದ 10 ವರ್ಷದ ಆರುಶಾ ಮತ್ತು 1 ವರ್ಷದ ಆರವ್ ಸೇರಿದ್ದಾರೆ.

ಮೃತ ರಾಜೇಶ್ವರ ಪ್ರಸಾದ್ ಪಚೌರಿಯವರ ಪುತ್ರ ದಿವಾಕರ್ ಉತ್ತರಾಖಂಡದ ರೂರ್ಕಿಯಲ್ಲಿರುವ ಔಷಧೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಅವರು ಮನೆಯಲ್ಲಿ ಇರಲಿಲ್ಲ. ವಿಧಿವಿಜ್ಞಾನ ತಂಡ ಮತ್ತು ಪೊಲೀಸ್ ಶ್ವಾನ ದಳ ಸ್ಥಳಕ್ಕೆ ತಲುಪಿ ತನಿಖೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮರಣೋತ್ತರ ವರದಿ ಬಂದ ನಂತರವೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಎಸ್‌ಎಸ್‌ಪಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ. ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಇದೀಗ ಏನನ್ನೂ ಹೇಳಲಾಗುವುದಿಲ್ಲ. ಘಟನೆಯ ಬಗ್ಗೆ ಮೃತ ಮಾಜಿ ಆರೋಗ್ಯ ಅಧಿಕಾರಿಯ ಮಗನಿಗೆ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.