ನವದೆಹಲಿ: 'ತುಕಡೆ ತುಕಡೆ ಗ್ಯಾಂಗ್‌' ಎಂದು ಕರೆಸಿಕೊಳ್ಳುವ ಕೆಲವು ಪ್ರತಿಭಟನಾಕಾರರು ದೆಹಲಿಯ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನೂ ಶಾಹೀನ್‌ಭಾಗ್‌ ರೀತಿಯ ಪ್ರತಿಭಟನೆಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

'ರೈತರ ಪ್ರತಿಭಟನೆ(Farmers protest)ಯಲ್ಲಿ ಪಾಲ್ಗೊಂಡ ಕೆಲವರು ಖಾಲಿಸ್ತಾನ ಪರವಾಗಿ ಘೋಷಣೆಗಳನ್ನು ಕೂಗುತ್ತಾ, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಯೋಚಿತ ಪಿತೂರಿ ನಡೆಸುತ್ತಿದ್ದಾರೆ' ಎಂದು ತಿವಾರಿ ಆರೋಪಿಸಿದ್ದಾರೆ.


2020 ರ ಕೊನೆಯ ಸೂರ್ಯಗ್ರಹಣ: ದಿನಾಂಕ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ


'ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸಿದ ಗುಂಪುಗಳು ಮತ್ತು ಕೆಲವು ವ್ಯಕ್ತಿಗಳು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ನೆಪದಲ್ಲಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದು ಶಾಹೀನ್‌ಬಾಗ್‌ ಮಾಡಲು ಹೊರಟಿದ್ದಾರೆ ' ಎಂದು ತಿವಾರಿ ದೂರಿದ್ದಾರೆ.


'ಕ್ಲಾಸ್ ರೂಂ'ನಲ್ಲೇ ಗೆಳತಿಯ ಮದ್ವೆಯಾದ ಅಪ್ರಾಪ್ತ ವಿದ್ಯಾರ್ಥಿ!


ದಕ್ಷಿಣ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಕೊರೊನಾ ಸಾಂಕ್ರಾಮಿಕದ ನಡುವೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈ ವರ್ಷದ ಆರಂಭದಲ್ಲಿ ಸರಣಿ ಪ್ರತಿಭಟನೆ ನಡೆದಿದ್ದವು.


PM Kisan Samman Nidhi Yojana: ನಿಮ್ಮ ಹಣ ಎಲ್ಲಿ ಸಿಲುಕಿದೆ ಎಂದು ತಿಳಿಯಿರಿ