ಭಾರತದ ನೂತನ ಸಾಲಿಸಿಟರ್ ಜನರಲ್ ಆಗಿ ತುಶಾರ್ ಮೆಹ್ತಾ ಆಯ್ಕೆ

ಹಿರಿಯ ಸುಪ್ರೀಂಕೋರ್ಟ್ ವಕೀಲ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಬುಧವಾರದಂದು ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ.

Updated: Oct 10, 2018 , 04:43 PM IST
 ಭಾರತದ ನೂತನ ಸಾಲಿಸಿಟರ್ ಜನರಲ್ ಆಗಿ ತುಶಾರ್ ಮೆಹ್ತಾ ಆಯ್ಕೆ

ನವದೆಹಲಿ: ಹಿರಿಯ ಸುಪ್ರೀಂಕೋರ್ಟ್ ವಕೀಲ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಬುಧವಾರದಂದು ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ  ಹಿರಿಯ ವಕೀಲ ರಂಜೀತ್ ಕುಮಾರ್ ಅವರು ರಾಜಿನಾಮೆ ನೀಡಿದಾಗಿನಿಂದ ಸಾಲಿಸಿಟರ್ ಜನರಲ್ ಹುದ್ದೆ ಖಾಲಿಯಾಗಿತ್ತು. ಈಗ ಸರ್ಕಾರ 10 ತಿಂಗಳುಗಳ  ನೂತನ ಸಾಲಿಸಿಟರ್ ಜನರಲ್ ಹುದ್ದೆಗೆ  ತುಷಾರ್ ಮೆಹ್ತಾ ಅವರನ್ನು ಆಯ್ಕೆ ಮಾಡಿದೆ. 2014 ಹೆಚ್ಚುವರಿ ಸಾಲಿಸಿಟರ್ ಆಗಿ ಹಲವು ಪ್ರಮುಖ ಪ್ರಕರಣಗಳಲ್ಲಿ ಕಾಣಿಸಿಕೊಂಡಿರುವ ಮೆಹ್ತಾ  2020 ರ ಜೂನ್ 30 ರವರೆಗೆ ಅಧಿಕಾರದಲ್ಲಿರಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದ ಸಾಲಿಸಿಟರ್ ಜನರಲ್ ಸರ್ಕಾರದ ಎರಡನೇ ಉನ್ನತ ಕಾನೂನು ಅಧಿಕಾರಿಯಾಗಿದ್ದಾರೆ.