ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಬಂಧನ!

ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿದೆ ಎನ್ನಲಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಾದ ಪ್ರಕ್ರಿಯೆಗಳೂ ಕೂಡ ಇದೀಗ ವೇಗ ಪಡೆದುಕೊಂಡಿವೆ.

Last Updated : Feb 23, 2020, 05:17 PM IST
ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಬಂಧನ! title=

ನವದೆಹಲಿ: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಅವನನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.  ಅಷ್ಟೇ ಅಲ್ಲ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಕೂಡ ವೇಗ ಪಡೆದುಕೊಂಡಿವೆ ಎನ್ನಲಾಗಿದೆ. ಭಾರತದಲ್ಲಿನ ಎಲ್ಲ ವ್ಯವಹಾರಗಳನ್ನು ಆತ ವಿದೇಶದಲ್ಲಿ ಇದ್ದುಕೊಂಡೆ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಮತ್ತೋರ್ವ ಕುಖ್ಯಾತ ಭೂಗತ ಪಾತಕಿ ಛೋಟಾ ಶಕೀಲ್ ನಿಂದ ಬೇರ್ಪಟ್ಟ ಬಳಿಕ ಸೆನೆಗಲ್ ಪೊಲೀಸರು ಆತನನ್ನು ಬಂಧಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಆ ಬಳಿಕ ಆತ ದಕ್ಷಿಣ ಆಫ್ರಿಕಾಗೆ ಪರಾರಿಯಾಗಿದ್ದ ಎನ್ನಲಾಗಿದೆ. ಅಲ್ಲಿ ಡ್ರಗ್ಸ್ ಹಾಗೂ ಸುಲಿಗೆ ದಂಧೆಯಲ್ಲಿ ತೊಡಗಿದ್ದ. ದಕ್ಷಿಣ ಆಫ್ರಿಕಾದ ದೂರದ ಒಂದು ಗ್ರಾಮದಲ್ಲಿ ರವಿ ಪೂಜಾರಿ ಇರುವುದನ್ನು ಗುರುತಿಸಲಾಗಿದೆ ಎಂದು ಭಾರತೀಯ ಗುಪ್ತಚರ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಪೂಜಾರಿ ಅಲ್ಲಿ ಬುರ್ಕಿನಾ ಫಾಸೋನ ಪಾಸ್ಪೋರ್ಟ್ ಬಳಸಿ ಅಂಥೋನಿ ಫರ್ನಾಂಡಿಸ್ ಎಂಬ ಫೇಕ್ ಸುಳ್ಳು ಹೆಸರಿನಿಂದ ವಾಸಿಸುತ್ತಿದ್ದ.

ವಿದೇಶದಲ್ಲಿರುವ ಭಾರತೀಯ ಗುಪ್ತಚರರ ಸೂಚನೆಯ ಮೇರೆಗೆ ಸೆನೆಗಲ್ ಪೊಲೀಸರು ಕಳೆದ ವಾರ ದಕ್ಷಿಣ ಆಫ್ರಿಕಾ ತಲುಪಿದ್ದು, ಹತ್ಯೆ ಹಾಗೂ ವಸೂಲಿಗಳಂತಹ ಸುಮಾರು 200 ಗಂಭೀರ ಅಪರಾಧಗಳಲ್ಲಿ ಭಾಗಿಯಾದ 52 ವರ್ಷದ ರವಿ ಪೂಜಾರಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಕುರಿತು ಇನ್ನೂ ಅಧಿಕೃತ ಘೋಷಣೆಯಾಗಿಲ್ಲ ಎಂದು ಮುಂಬೈ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ವಿದೇಶಾಂಗ ಇಲಾಖೆ ಅಧಿಕಾರಿಗಳು ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮಿಶನ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಈ ಕುರಿತು ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ನವದೆಹಲಿಯಲ್ಲಿರುವ ಸೆನೆಗಲ್ ದೂತಾವಾಸದ ಅಧಿಕಾರಿಗಳೂ ಕೂಡ ರವಿ ಪೂಜಾರಿ ಬಂಧನದ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ವರ್ಷ 2000ರಲ್ಲಿ ಬಾಲಿವುಡ್ ಮತ್ತು ಮುಂಬೈನ ಹಲವು ಖ್ಯಾತನಾಮರ ಬಳಿ ಸುಲಿಗೆ ಮಾಡಿ ಪೂಜಾರಿ ಭಾರಿ ಸುದ್ದಿ ಹುಟ್ಟುಹಾಕಿದ್ದ. ಆತ ಮುಂಬೈನ ಖ್ಯಾತ ವಕೀಲರೊಬ್ಬರ ಹತ್ಯೆಗೂ ಕೂಡ ಸಂಚು ರೂಪಿಸಿದ್ದ.

ಪೂಜಾರಿ ಪತ್ನಿ ಪದ್ಮಾ ಹಾಗೂ ಮಕ್ಕಳೂ ಕೂಡ ಭಾರತದಿಂದ ಪರಾರಿಯಾಗಿದ್ದಾರೆ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಬುರ್ಕಿನಾ ಫಾಸೋ ಪಾಸ್ಪೋರ್ಟ್ ಪಡೆದುಕೊಂಡಿದ್ದಾರೆ. ಪೂಜಾರಿ ಪುತ್ರ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ವಿವಾಹ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಬಳಿ ಆಸ್ಟ್ರೇಲಿಯಾ ಪಾಸ್ಪೋರ್ಟ್ ಕೂಡ ಇದೆ ಎನ್ನಲಾಗಿದೆ. ಇದಕ್ಕೂ ಮೊದಲು ಕಳೆದ ವರ್ಷ ಅಂಥೋನಿ ಹೆಸರಿನಿಂದ ವಾಸವಾಗಿದ್ದ ಪೂಜಾರಿ ಸೆನೆಗಲ್ ಕೋರ್ಟ್ ನಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಜಾಮೀನು ಪಡೆದುಕೊಂಡಿದ್ದ. ಸುದ್ದಿ ಸಂಸ್ಥೆ IANS ಬಳಿ ಪೂಜಾರಿ ನೂತನ ಪಾಸ್ಪೋರ್ಟ್ ಇದ್ದು, ಪಾಸ್ಪೋರ್ಟ್ ನಲ್ಲಿ ಆಟ ಬುರ್ಕಿನಾ ಫಾಸೋ ನಿವಾಸಿಯಾಗಿದ್ದು, ಆತನ ಹೆಸರು ಅಂಥೋನಿ ಫರ್ನಾಂಡಿಸ್ ಆಗಿದ್ದು, ಆತನ ಜನ್ಮ ತಿಥಿ ಜನವರಿ 25, 1961 ಆಗಿದೆ ಎಂದು ನಮೂದಿಸಲಾಗಿದೆ.

ಚಲನಚಿತ್ರ ನೋಡುವ ಹವ್ಯಾಸಿ ಆಗಿದ್ದ ರವಿ ಪೂಜಾರಿ ಅಮಿತಾಭ್ ಅಭಿನಯದ 'ಅಮರ್ ಅಕ್ಬರ್ ಅಂಥೋನಿ' ಚಿತ್ರದಿಂದ ಪ್ರೇರಣೆ ಪಡೆದು, ಅಂಥೋನಿ ಎಂಬ ಹೆಸರನ್ನು ಇಟ್ಟುಕೊಂಡಿದ್ದಾನೆ ಎನ್ನಲಾಗಿದೆ.

Trending News