ಕಿರಣ್ ಬೇಡಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಅವರು ಐಪಿಎಸ್ ಹುದ್ದೆಗೆ ಏರಿದ ಮೊದಲ ಮಹಿಳೆ ಎಂದೇ ಖ್ಯಾತರಾಗಿದ್ದಾರೆ. ಇವರು ಐಪಿಎಸ್ ಹುದ್ದೆಗೆ ಏರುತ್ತಿದ್ದಂತೆ ತದಂತರ ಅನೇಕ ಮಹಿಳಾ ಅಧಿಕಾರಿಗಳು ಈ ಹುದ್ದೆಯಲ್ಲಿ ಮಹತ್ವದ ಸಾಧನೆ ಮಾಡಿದರು. ಇದಕ್ಕೆ ಕಿರಣ್ ಬೇಡಿ ಅವರ ಸ್ಫೂರ್ತಿಯೇ ಇದಕ್ಕೆ ಕಾರಣ.ಇದಲ್ಲದೆ, ಅವರು ತಮ್ಮ ವೃತ್ತಿಜೀವನದಲ್ಲಿ ಕೆಲವು ವರ್ಷಗಳ ಕಾಲ ಪುದುಚೇರಿಯ 24 ನೇ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು. 35 ವರ್ಷಗಳ ಕಾಲ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ, ಕಿರಣ್ ಬೇಡಿ 2007 ರಲ್ಲಿ ಸ್ವಯಂಪ್ರೇರಿತ ನಿವೃತ್ತಿ ಪಡೆದು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋದ ಮಹಾನಿರ್ದೇಶಕರ ಹುದ್ದೆಯನ್ನು ತೊರೆದರು. ತಮ್ಮ ಸೇವೆಯಿಂದ ನಿವೃತ್ತರಾದ ನಂತರವೂ ಅವರು ಸಮಾಜ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಒಂದೆಡೆ ವೃತ್ತಿ ಜೀವನದಲ್ಲಿದ್ದಾಗ ಶ್ರದ್ದೆಯಿಂದ ಪ್ರಾಮಾಣಿಕರಾಗಿ ದೇಶ ಸೇವೆ ಸಲ್ಲಿಸಿದರು.ಆದರೆ ಇದಕ್ಕಾಗಿ ಅವರು ಸಾಕಷ್ಟು ತ್ಯಾಗವನ್ನು ಮಾಡಬೇಕಾಗಿ ಬಂತು. ಅಚ್ಚರಿ ಎಂದರೆ ಅದರಲ್ಲೂ ಅವರ ಪತಿ ಬ್ರಿಜ್ ಬೇಡಿ ಅವರೊಂದಿಗೆ ಹೆಚ್ಚಾಗಿ ಸಮಯ ಕಳೆಯದ ಕಾರಣ ಅವರ ಮಧ್ಯ ಸಾಕಷ್ಟು ಭಿನ್ನಾಭಿಪ್ರಾಯಗಳು ಬಂದವು. ಇದರಿಂದಾಗಿ ಅವರು ಅಂತಿಮವಾಗಿ ಬೇರೆಯಾದರು. ಆದರೆ ಕಿರಣ್ ಮತ್ತು ಬ್ರಿಜ್ ಎಂದಿಗೂ ಪರಸ್ಪರ ವಿಚ್ಛೇದನ ಪಡೆದಿರಲಿಲ್ಲ ಮತ್ತು ಇಬ್ಬರೂ ಅನ್ಯ ಪ್ರೇಮ ಸಂಬಂಧವನ್ನು ಸಹ ಹೊಂದಿರಲಿಲ್ಲ. ಈಗ ಇಂತಹ ದಂಪತಿಗಳ ಪ್ರೇಮ ಕಹಾನಿ ಹೇಗಿತ್ತು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಕಿರಣ್ ಬೇಡ- ಬ್ರಿಜ್ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ?
ಒಮ್ಮೆ ಅವರು ಮಾಧ್ಯಮದ ಜೊತೆ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡುತ್ತಾ ತಮ್ಮ ಪತ್ನಿ ಕಿರಣ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದನ್ನು ಸ್ಮರಿಸಿಕೊಂಡರು. ಬ್ರಿಜ್ ಬೇಡಿ ಅವರು 1971 ರಲ್ಲಿ ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಓದುತ್ತಿದ್ದಾಗ ಫೋಟೋಗ್ರಫಿ ಮತ್ತು ಲಾನ್ ಟೆನಿಸ್‌ನಲ್ಲಿ ಆಸಕ್ತಿ ಬೆಳೆಯಿತು. ಒಂದು ದಿನ ಅವರು ಟೆನಿಸ್ ಕ್ಲಬ್‌ನಲ್ಲಿ ಮೊದಲ ಬಾರಿಗೆ ಕಿರಣ್ ಪೆಶಾವೇರಿಯಾ ಅವರನ್ನು ಭೇಟಿಯಾದರು.
ಬ್ರಿಜ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಯಾವಾಗಲೂ ನನ್ನ ಜೊತೆಗಿದ್ದ ವ್ಯಕ್ತಿ.? pic.twitter.com/LFVBXtxPbP
- ಕಿರಣ್ ಬೇಡಿ (@thekiranbedi) ಜನವರಿ 30, 2023
"ಅದು 1971. ನಾನು ಅಮೃತಸರದ ಖಾಲ್ಸಾ ಕಾಲೇಜಿನಲ್ಲಿದ್ದಾಗ ನನಗೆ ಫೋಟೋಗ್ರಾಫಿ ಮತ್ತು ಲಾನ್ ಟೆನಿಸ್ ಕಲಿಸಿದ ಸ್ನೇಹಿತೆಯನ್ನು ಭೇಟಿಯಾದೆ.ಆಗ ನನಗೆ ಈ ಆಟ ನಿಜಕ್ಕೂ ಆಸಕ್ತಿದಾಯಕವೆನಿಸಿತು. ಹಾಗಾಗಿ ಪರೀಕ್ಷೆಯ ದಿನವೂ ನಾನು ಟೆನಿಸ್ ಆಡುತ್ತಿದ್ದೆ ಮತ್ತು ಇದರಿಂದಾಗಿ ಪರೀಕ್ಷೆಯಲ್ಲಿ ಫೇಲ್ ಆದೆ.1971 ರಲ್ಲಿ ಕಿರಣ್ ಬೇಡಿ ಚಂಡೀಗಢದಿಂದ ಹಿಂತಿರುಗಿದ್ದಳು ಆಗ ಒಳ್ಳೆಯ ಟೆನಿಸ್ ಆಟಗಾರ್ತಿಯಾಗಿದ್ದಳು, ಅವಳ ತಂದೆ ಅವಳನ್ನು ಅತ್ಯುತ್ತಮ ಟೆನಿಸ್ ಆಟಗಾರ್ತಿಯನ್ನಾಗಿ ಮಾಡಲು ತುಂಬಾ ಉತ್ಸುಕರಾಗಿದ್ದರು. ಅವರ ಪ್ರೋತ್ಸಾಹದಿಂದಾಗಿಯೇ ಮುಂದೆ ಅವಳು ಏಷ್ಯನ್ ಚಾಂಪಿಯನ್ ಆದಳು. ಕ್ಲಬ್‌ನಲ್ಲಿ ಆಗಾಗ ಒಟ್ಟಿಗೆ ಟೆನಿಸ್ ಆಡುತ್ತಿದ್ದರಿಂದ, ಮುಂದೆ ನಾವಿಬ್ಬರು ಉತ್ತಮ ಸ್ನೇಹಿತರಾದೆವು' ಎನ್ನುತ್ತಾರೆ.

ಕಿರಣ್ ಬೇಡಿ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಬ್ರಿಜ್ ಬೇಡಿ ಅವರು ಆಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆದರೆ ಅದು ಭಿನ್ನಾಭಿಪ್ರಾಯದಿಂದಾಗಿ ಶೀಘ್ರದಲ್ಲೇ ಮುರಿದು ಬಿತ್ತು. ಬ್ರಿಜ್ ಅವರಿಗೆ ಸರಳ ಮದುವೆಯಾಗಬೇಕಾಗಿತ್ತು, ಆದರೆ ಹುಡುಗಿಯ ಕಡೆಯವರಿಗೆ ಇದು ಬೇಕಾಗಿರಲಿಲ್ಲ. ಆದರ್ಶವಾದಿಯಾಗಿದ್ದ ಬ್ರಿಜ್ ಅವರು ಅಂತಿಮವಾಗಿ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡರು. ಆಗಲೇ ಅವರು ಕಿರಣ್ ಬೇಡಿ ಅವರ ಚುರುಕಾದ ಬುದ್ಧಿಮತ್ತೆಗಾಗಿ ಅವಳನ್ನು ಇಷ್ಟಪಡಲು ಪ್ರಾರಂಭಿಸಿದ್ದರು.ಈ ನಿಶ್ಚಿತಾರ್ಥವು ವಿಫಲವಾದರೆ, ಆಕೆ ಬ್ರಿಜ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದರು. ಏಕೆಂದರೆ ಕಿರಣ್ ಅವರು ಕೂಡ ಇದೇ ರೀತಿಯ ಆದರ್ಶಗಳನ್ನು ಹೊಂದಿರುವ ಗಂಡನನ್ನು ಬಯಸಿದ್ದರು.ಅಂತಿಮವಾಗಿ 1972 ರಲ್ಲಿ ಕಿರಣ್ ಪೆಶಾವೇರಿಯಾ ಮತ್ತು ಬ್ರಿಜ್ ಬೇಡಿ 10 ವರ್ಷಗಳ ವಯಸ್ಸಿನ ಅಂತರವಿದ್ದರೂ ಸಹ ಸರಳವಾಗಿ ಮದುವೆಯಾದರು.
ಪತ್ನಿ ಕಿರಣ್ ಬೇಡಿ ಅವರ ಶೂಗಳಿಗೆ ಪಾಲಿಶ್ ಮಾಡುತ್ತಿದ್ದ ಬ್ರಿಜ್ ಬೇಡಿ..!
ಬ್ರಿಜ್ ಬೇಡಿ ತಮ್ಮ ಪತ್ನಿ ಕಿರಣ್ ಬೇಡಿ ಅವರ ಆಕಾಂಕ್ಷೆಗಳು ಮತ್ತು ಕನಸುಗಳಿಗೆ ಯಾವಾಗಲೂ ಬೆಂಬಲ ನೀಡುತ್ತಿದ್ದರು. ಅದನ್ನೇ ನೆನಪಿಸಿಕೊಳ್ಳುತ್ತಾ, ಬ್ರಿಜ್ ಬೇಡಿ ಅವರು ತಮ್ಮ ಪತ್ನಿಯ ಶಾಶ್ವತ ಬೆಂಬಲಿಗರಾಗಿದ್ದರು. ಪ್ರೀತಿ ಇರುವಲ್ಲಿ ಅಹಂ ಇರುವುದಿಲ್ಲ, ಹಾಗಾಗಿ ನಾನು ಅಡುಗೆ ಮಾಡುತ್ತಿದ್ದೆ ಮತ್ತು ಅವಳ ಶೂಗಳಿಗೆ ಪಾಲಿಶ್ ಕೂಡ ಮಾಡುತ್ತಿದ್ದೆ. ಕೆಲವೊಮ್ಮೆ ಅವಳು ದಣಿದಿದ್ದಾಗ ನಾನು ಅವಳ ಕಾಲುಗಳನ್ನು ಒತ್ತುತ್ತಿದ್ದೆ. ಅದರಲ್ಲಿ ನನಗೆ ಯಾವುದೇ ತಪ್ಪು ಅನಿಸಲಿಲ್ಲ. ಕೇವಲ ಮನೆಗೆ ಸೀಮಿತವಾದ ವ್ಯಕ್ತಿಯನ್ನು ನಾನು ಎಂದಿಗೂ ಮದುವೆಯಾಗುತ್ತಿರಲಿಲ್ಲ. ನಮ್ಮ ವಿಚಾರದಲ್ಲಿ ಅವಳನ್ನು ಹೊರಗೆ ಕಳುಹಿಸಬೇಕೆಂದು ಈಗಾಗಲೇ ನಿರ್ಧರಿಸಲಾಗಿದ್ದರಿಂದ ನಾನು ಮಾನಸಿಕವಾಗಿ ಭೇಟಿ ನೀಡುವ ಪತಿಯಾಗಲು ಸಿದ್ಧನಾಗಿದ್ದೆ' ಎನ್ನುತ್ತಾರೆ ಬ್ರಿಜ್ ಬೇಡಿ.
“Find someone who is proud to have you, scared to lose you, fights for you, appreciates you, respects you, cares for you, and loves you."
This is what Brij was for me. pic.twitter.com/uvhbU53PUi— Kiran Bedi (@thekiranbedi) January 31, 2023
ತರಬೇತಿಯ ನಂತರ ಅವಳು ದೆಹಲಿಗೆ ವರ್ಗಾವಣೆಯಾದಳು. ಹೀಗಾಗಿ ವಾರಾಂತ್ಯದಲ್ಲಿ ನಾನು ಅವಳನ್ನು ಭೇಟಿ ಮಾಡುತ್ತಿದ್ದೆ. ಅವಳ ಪೋಷಕರು ಈಗಾಗಲೇ ಅವಳೊಂದಿಗೆ ದೆಹಲಿಗೆ ಸ್ಥಳಾಂತರಗೊಂಡಿದ್ದರು ಮತ್ತು ನಂತರ ಅವಳ ಸಹೋದರಿಯರು ಸಹ ಸೇರಿಕೊಂಡರು.ಎರಡು ಕೋಣೆಗಳ ಜನದಟ್ಟಣೆಯಿಂದ ಕೂಡಿತ್ತು, ಹೀಗಾಗಿ ಇದೆಲ್ಲವೂ ನನಗೆ ಉಸಿರುಗಟ್ಟುವಂತೆ ಆಯಿತು. ಕ್ರಮೇಣ ಅವಳ ಪೋಷಕರು ನಮ್ಮ ವೈಯಕ್ತಿಕ ಸಂಬಂಧದಲ್ಲಿ ಹಸ್ತಕ್ಷೇಪ ಮಾಡುವುದನ್ನು ಆರಂಭಿಸಿದ್ದರಿಂದ ನನಗೆ ಸರಿಕಾಣಲಿಲ್ಲ ಹೀಗಾಗಿ ನಾವು ಇಬ್ಬರೂ ದೂರವಾಗಲು ಪ್ರಾರಂಭಿಸಿದೆವು' ಎಂದು ಬ್ರಿಜ್ ಬೇಡಿ ಹೇಳುತ್ತಾರೆ.

ಮಗಳು ಸೈನಾಗೆ ಜನ್ಮ ನೀಡಿದ ಬೇಡಿ ದಂಪತಿ:
ಮದುವೆಯಾದ ಕೆಲವು ವರ್ಷಗಳ ನಂತರ, ಬ್ರಿಜ್ ಬೇಡಿ ಮತ್ತು ಕಿರಣ್ ಬೇಡಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅದಕ್ಕೆ ಪ್ರೀತಿಯಿಂದ ಸೈನಾ ಬೇಡಿ ಎಂದು ಹೆಸರಿಸಿದರು. ತಾವಿಬ್ಬರೂ ಬೇರೆಯಾದರೂ ಮಗಳನ್ನು ಹೇಗೆ ಭೇಟಿಯಾಗುತ್ತಿದ್ದಿರಿ ಎಂದು ಕೇಳಿದ್ದಕ್ಕೆ "ಅದು ನಮ್ಮ ದಾಂಪತ್ಯದ ದೊಡ್ಡ ದುರಂತವಾಗಿತ್ತು, ಏಕೆಂದರೆ ಅವಳಿಗೆ ತಾಯಿಯ ಪ್ರೀತಿಯಾಗಲಿ, ತಂದೆಯ ವಾತ್ಸಲ್ಯವಾಗಲಿ ಸಿಗಲಿಲ್ಲ. ಕಿರಣ್ ಬೇಡಿ ಸ್ವಾಭಾವಿಕವಾಗಿಯೇ ತುಂಬಾ ಕಾರ್ಯನಿರತಳಾಗಿದ್ದಳು. ನಾನು ವಾರಾಂತ್ಯದಲ್ಲಿ ಹೋಗುತ್ತಿದ್ದೆ, ಆರಂಭದಲ್ಲಿ ಅದು ಚೆನ್ನಾಗಿತ್ತು, ಆದರೆ ತದನಂತರ ನಾನು ದೆಹಲಿಗೆ ಹೋಗುವುದನ್ನೇ ನಿಲ್ಲಿಸಿದೆ. ಹಾಗಾಗಿ ಮಗಳು ನಿಜವಾಗಿಯೂ ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾದಳು' ಎಂದು ಅವರು ಕಣ್ಣೀರಿಟ್ಟರು.
ದೂರವಿದ್ದರೂ ಬ್ರಿಜ್ ಬೇಡಿ ಮತ್ತು ಕಿರಣ್ ಬೇಡಿ ವಿಚ್ಛೇದನ ಪಡೆಯಲಿಲ್ಲ..!
ಸಂದರ್ಶನದ ಕೊನೆಯಲ್ಲಿ, ಬ್ರಿಜ್ ಬೇಡಿ ಅವರನ್ನು ತಮ್ಮ ಪತ್ನಿ ಕಿರಣ್ ಬೇಡಿ ಅವರಿಗೆ ವಿಚ್ಛೇದನ ಏಕೆ ನೀಡಲಿಲ್ಲ ಎಂದು ಕೇಳಿದ್ದಕ್ಕೆ. ಇದಕ್ಕೆ ಉತ್ತರಿಸುತ್ತಾ, ತಮ್ಮ ಪತ್ನಿಯಿಂದ ವಿಚ್ಛೇದನ ಪಡೆಯದಿರಲು ತಮ್ಮ ನಿರ್ಧಾರಕ್ಕೆ ಏಕೈಕ ಕಾರಣ ಮಗಳು ಸೈನಾ ಬೇಡಿ. ಪೋಷಕರು ಸಹ ಕೆಲವೊಮ್ಮೆ ಒತ್ತಾಯಿಸುತ್ತಿದ್ದರು ಆದರೆ ಬ್ರಿಜ್ ಬೇಡಿ ಮತ್ತೆ ಮದುವೆಯಾಗಲು ಬಯಸಲಿಲ್ಲ.

ಪತಿ ಬ್ರಿಜ್ ಬೇಡಿ ನಿಧನ:
ಜನವರಿ 31, 2016 ರಂದು, ಬ್ರಿಜ್ ಬೇಡಿ ಗುರುಗ್ರಾಮ್‌ನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಕೆಲವು ವರ್ಷಗಳಿಂದ ಮೂತ್ರಕೋಶದ ಕ್ಯಾನ್ಸರ್ ಇತ್ತು ಮತ್ತು ಅಂತಿಮವಾಗಿ, ಕ್ಯಾನ್ಸರ್ ಅವರ ಮೂತ್ರಪಿಂಡಗಳಿಗೆ ಹರಡಿ ಅವುಗಳನ್ನು ಹಾನಿಗೊಳಿಸಿತ್ತು. ಬ್ರಿಜ್ ಬೇಡಿ ಅವರ ನಿಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ಕಿರಣ್ ಬೇಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಅವರ ಸ್ಮರಣಾರ್ಥ ಟ್ವೀಟ್ ಮಾಡಿದ್ದರು. "ಅಮೃತಸರ ನಗರವು ತನ್ನ ನಗರವನ್ನು ಅತ್ಯಂತ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡಿದೆ. ನಿರ್ಗತಿಕರ ಹಿತದೃಷ್ಟಿಯಿಂದ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ವ್ಯಕ್ತಿ. ಅವರ ಸೇವೆಯನ್ನು ನಾವು ಪೂರ್ಣವಾಗಿ ನಿರ್ವಹಿಸುತ್ತೇವೆ." ಎಂದು ಅವರು ಕಂಬನಿ ಮಿಡಿದಿದ್ದರು. ಬ್ರಿಜ್ ಬೇಡಿ ಅವರು ಮೂಲತಃ ಸಾಮಾಜಿಕ ಕಾರ್ಯಕರ್ತರಾಗಿದ್ದರು ಅಮೃತಸರ್ ದಲ್ಲಿ ಸುಮಾರು 600 ಮಕ್ಕಳಿಗೆ ಶಿಕ್ಷಣವನ್ನು ನೀಡುವ ಶಾಲೆಯೊಂದನ್ನು ತೆರೆಯುವ ಮೂಲಕ ಜೀವನದುದ್ದಕ್ಕೂ ಸಾಮಾಜಿಕ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟುಕೊಂಡಿದ್ದರು.
Frds of Brij Bedi formed to support to keep his school for impoverished running: Keeping his spiritalive in Amritsar pic.twitter.com/B7evKtxQxw
— Kiran Bedi (@thekiranbedi) February 2, 2016
ಮಾದರಿ ದಂಪತಿಗಳು:
ಹಲವು ಭಿನ್ನಾಭಿಪ್ರಾಯಗಳು ಸಂಘರ್ಷಗಳ ನಡುವೆ ಕಿರಣ್ ಬೇಡಿ ಮತ್ತು ಬ್ರಿಜ್ ಬೇಡಿ ತಮ್ಮ ವೈವಾಹಿಕ ಜೀವನವನ್ನು ನಡೆಸಿದ ರೀತಿ ನಿಜಕ್ಕೂ ಅದ್ಭುತವಾಗಿದೆ.ತಮ್ಮ ಆರಂಭಿಕ ವೈವಾಹಿಕ ಜೀವನದಲ್ಲಿ ಸಾಮತ್ಯೆಗಳಿದ್ದರೂ, ಆದರೆ ಕಾಲಾಂತರದಲ್ಲಿ ಅವರಿಬ್ಬರೂ ದೂರವಾಗಿದ್ದರೂ, ಅವರು ಪೋಷಕರಾಗಿ ತಮ್ಮ ಜವಾಬ್ದಾರಿಯನ್ನು ಪೂರೈಸಿದರು. ಅಷ್ಟೇ ಅಲ್ಲದೆ ಅವರು ಎಷ್ಟೇ ವೈಮನಸ್ಸಿದ್ದರೂ ಸಹ ಅವರು ವಿಚ್ಛೇದನ ಪಡೆಯಲಿಲ್ಲ, ಅಥವಾ ಇಬ್ಬರೂ ಯಾವುದೇ ಅನ್ಯ ಸಂಬಂಧವನ್ನು ಹೊಂದದೆ ನಿಜಕ್ಕೂ ಮಾದರಿಯಾದರು.
ಕನ್ನಡದಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ ಭಾಷೆ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ...
Android ಲಿಂಕ್ - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter ಲಿಂಕ್ - https://bit.ly/3n6d2R8 Facebook Link - https://bit.ly/3Hhqmcj Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram ಲಿಂಕ್ - https://bit.ly/3n6d2R8 https://www.threads.net/@zeekannadanews WhatsApp ಚಾನೆಲ್- bit.ly/46lENGm ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.









