ನವದೆಹಲಿ: ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನೌಕರರ ತುಟ್ಟಿ ಭತ್ಯೆಯನ್ನು ಶೇ. 2 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಮೋದಿ ಸರ್ಕಾರ ಬಂಪರ್ ಉಡುಗೊರೆ ಘೋಷಿಸಿದೆ. 



COMMERCIAL BREAK
SCROLL TO CONTINUE READING

ಮೂಲಗಳಿಂದ ಲಭ್ಯವಾದ ಮಾಹಿತಿಯ ಪ್ರಕಾರ, 2018ರ ಜುಲೈ 1ರಿಂದಲೇ ನೂತನ ವೇತನ ಅನ್ವಯವಾಗುತ್ತದೆ ಎಂದು ತಿಳಿದು ಬಂದಿದೆ. ವೇತನ ಹೆಚ್ಚಳದ ಬಳಿಕ ಡಿಎ ಶೇ. 9 ರಷ್ಟಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 1.1 ಕೋಟಿ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಲಾಭವಾಗಲಿದೆ.


ಇದರಿಂದ ಸರ್ಕಾರದ ಖಜಾನೆಗೆ 6,112.20 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹೊರೆಯಾಗಲಿದೆ ಮತ್ತು 2018-19ರ ಹಣಕಾಸು ವರ್ಷದಲ್ಲಿ(2018ರ ಜುಲೈಯಿಂದ 2019ರ ಫೆಬ್ರವರಿ ವರೆಗಿನ 8 ತಿಂಗಳ ಅವಧಿ) 4,074.80 ಕೋಟಿ ರೂ. ಹೊರೆಯಾಗಲಿದೆ.