ಇಂದು ಅಯೋಧ್ಯೆಯಲ್ಲಿ CM Yogi, ಭೂಮಿ ಪೂಜೆ ಸಿದ್ಧತೆಗಳ ಪರಿಶೀಲನೆ

ಕರೋನಾ ಕಾಲದಲ್ಲಿ ಅಯೋಧ್ಯೆಯಲ್ಲಿ ನೆರವೇರಿಸಲು ನಿರ್ಧರಿಸಲಾಗುವೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆರದು ಅಡಿಗಳ ಅಂತರ ನಿಯಮ ಅನುಸರಿಸಿ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಮಠ ದೇವಾಲಯಗಳಲ್ಲಿ ಆಚರಣೆಗಳಿದ್ದರೆ, ಮನೆಯಿಂದ ಮನೆಗೆ ದೀಪಗಳನ್ನು ಬೆಳಗಿಸಲಾಗುವುದು.

Updated: Jul 25, 2020 , 12:07 PM IST
ಇಂದು ಅಯೋಧ್ಯೆಯಲ್ಲಿ CM Yogi, ಭೂಮಿ ಪೂಜೆ ಸಿದ್ಧತೆಗಳ ಪರಿಶೀಲನೆ

ನವದೆಹಲಿ: ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಭೂಮಿ ಪೂಜೆ ನೆರವೇರಿಸಲು ಸಕಲ ಸಿದ್ಧತೆಗಳು ಮುಂದುವರೆದಿವೆ. ಸುಮಾರು 500 ವರ್ಷಗಳ ಬಳಿಕ ಶ್ರೀರಾಮನ ಭಕ್ತರ ಆಸೆ ಈಡೇರಲಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೂ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಸಿಎಂ ಯೋಗಿ ಭೂಮಿ ಪೂಜೆಯ  ಸಿದ್ಧತೆಗಳ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಸಾಧು-ಸಂತರ ಭೇಟಿ ಕೂಡ ನಡೆಸಲಿದ್ದಾರೆ.

ಕೊರೊನಾ ಕಾಲದಲ್ಲಿ ಎರಡು ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಭೂಮಿ ಪೂಜೆ ನೆರವೇರಿಸಲು ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಮಠ ಮತ್ತು ಮಂದಿರಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದರೆ, ಅಯೋಧ್ಯಾ ನಗರಿಯ ಮನೆ-ಮನೆಗಳಲ್ಲಿ ದೀಪ ಬೆಳಗಲು ನಿರ್ಧರಿಸಲಾಗಿದೆ. ಇನ್ನೊಂದೆಡೆ ಸರಯೂ ಆರತಿಯೂ ಕೂಡ ನೆರವೇರಲಿದೆ. ಸರಯೂ ನದಿಯಲ್ಲಿ ಮಹಾ ಆರತಿಗಾಗಿ ದಿವ್ಯ ಮತ್ತು ಭವ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಆದರೆ ಇಲ್ಲಿಯೂ ಕೂಡ ಕೊರೊನಾ ಮಹಾಮಾರಿಯನ್ನು ತಡೆಯಲು ವಿಶೇಷ ಕಾಳಜಿ ವಹಿಸಲಾಗಿದೆ. ಯಾವುದೇ ರೀತಿಯ ಸಾಮೂಹಿಕ ಆಯೋಜನೆ ನಡೆಸಲಾಗುತ್ತಿಲ್ಲ. ಭೂಮಿ ಪೂಜೆಯ ವೇಳೆ ಅಯೋಧ್ಯೆಯಲ್ಲಿ ದೀಪಾವಳಿಯ ವಾತಾವರಣ ಮನೆಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಶ್ರೀರಾಮನ ಭವ್ಯ ಮತ್ತು ದಿವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿರುವ ವಿಶ್ವ ಹಿಂದೂ ಪರಿಷತ್ ಕೂಡ 11 ತೀರ್ಥಕ್ಷೇತ್ರಗಳ ಪವಿತ್ರ ಮಣ್ಣನ್ನು ದೆಹಲಿಯಿಂದ ಅಯೋಧ್ಯೆಗೆ ಕಳುಹಿಸಿದೆ. ಇದರಲ್ಲಿ ದೆಹಲಿಯ ಪ್ರಸಿದ್ಧ ಕಲ್ಕಾಜಿ ಪೀಠ, ಭೈರವ ಮಂದಿರ, ಪುರಾಣ ಕಿಲಾ, ಗುರುದ್ವಾರಾ ಶೀಷಗಂಜ್, ಚಾಂದನಿ ಚೌಕ, ಕಾಳಿ ಮಾತಾ ಮಂದಿರ, ಬಂಗಲಾ ಸಾಹೇಬ್, ಲಕ್ಷ್ಮಿ ನಾರಾಯನ ದೇವಸ್ಥಾನ, ಭಗವಾನ್ ವಾಲ್ಮೀಕಿ ಮಂದಿರ, ಬದರಿ ಭಗತ್ ಝಂಡೆವಾಲಾ ಮಂದಿರ ಹಾಗೂ ಕರೋಲ್ ಬಾಗ್ ಶಾಮೀಲಾಗಿವೆ.

ಉತ್ತರ ಪ್ರದೇಶದ ಸರಾಫ್ ಅಸ್ಸೋಸಿಯೇಶನ್ ಐದು ಕಿಲೋ ತೂಕದ ಸುಮಾರು 5 ಇಟ್ಟಿಗೆಗಳನ್ನೂ ಕೂಡ ಶ್ರೀರಾಮ ಮಂದಿರ ಟ್ರಸ್ಟ್ ಗೆ ರವಾನಿಸಿದೆ. ಟ್ರಸ್ಟ್ ನ ಕಾರ್ಯಕಾರಿ ಅಧ್ಯಕ್ಷ ಆಲೋಕ್ ಕುಮಾರ್ ಹೇಳುವ ಪ್ರಕಾರ ರಾಮ ಮಂದಿರಕ್ಕಾಗಿ ಪಾಕ್ ಆಕ್ರಮಿತ ಕಾಶ್ಮೀರ್ ನಲ್ಲಿರುವ ಪವಿತ್ರ ಶಾರದಾ ಪೀಠದ ಪವಿತ್ರ ಮಣ್ಣನ್ನೂ ಕೂಡ ಕಳುಹಿಸಲಾಗಿದೆ. ಈ ಭೂಮಿ ಪೂಜೆ ಕಾರ್ಯಕ್ರಮದಲ್ಲೇ ಕೇವಲ 200 ಜನರು ಮಾತ್ರ ಭಾಗವಹಿಸಲಿದ್ದಾರೆ.

ಇಡೀ ದೇಶ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರುವಿಕೆಯನ್ನು ಕಾದುನೋಡುತ್ತಿದೆ. ಅವರ ನೇತೃತ್ವದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಲಿದೆ. ಈ ಶುಭದಿನವನ್ನು ಅಯೋಧ್ಯೆಯ ನಿವಾಸಿಗಳು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ.