ಉತ್ತರ ಪ್ರದೇಶ: 20ಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳಾಗಿರಿಸಿ ಪೋಲೀಸರ ಮೇಲೆ ಕಚ್ಚಾ ಬಾಂಬ್ ತೂರಿದ ಭೂಪ

ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿ ತನ್ನ ಹೆಂಡತಿ, ಒಂದು ವರ್ಷದ ಮಗಳು ಮತ್ತು 20 ಕ್ಕೂ ಹೆಚ್ಚು ಮಕ್ಕಳನ್ನು ಪಶ್ಚಿಮ ಉತ್ತರ ಪ್ರದೇಶದ ಫಾರೂಖಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತನ್ನ ಮನೆಯಲ್ಲಿ ಒತ್ತೆಯಾಳು ಹಿಡಿದಿದ್ದಾನೆ. ಅವರನ್ನು ರಕ್ಷಿಸಲು ಪೊಲೀಸರು ಪ್ರಸ್ತುತ ಆ ವ್ಯಕ್ತಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆ ವ್ಯಕ್ತಿಯನ್ನು ಸುಭಾಷ್ ಬಾಥಮ್ ಎಂದು ಗುರುತಿಸಲಾಗಿದೆ.

Last Updated : Jan 30, 2020, 10:27 PM IST
ಉತ್ತರ ಪ್ರದೇಶ: 20ಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳಾಗಿರಿಸಿ ಪೋಲೀಸರ ಮೇಲೆ ಕಚ್ಚಾ ಬಾಂಬ್ ತೂರಿದ ಭೂಪ title=
ANI PHOTO

ನವದೆಹಲಿ: ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿ ತನ್ನ ಹೆಂಡತಿ, ಒಂದು ವರ್ಷದ ಮಗಳು ಮತ್ತು 20 ಕ್ಕೂ ಹೆಚ್ಚು ಮಕ್ಕಳನ್ನು ಪಶ್ಚಿಮ ಉತ್ತರ ಪ್ರದೇಶದ ಫಾರೂಖಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತನ್ನ ಮನೆಯಲ್ಲಿ ಒತ್ತೆಯಾಳು ಹಿಡಿದಿದ್ದಾನೆ. ಅವರನ್ನು ರಕ್ಷಿಸಲು ಪೊಲೀಸರು ಪ್ರಸ್ತುತ ಆ ವ್ಯಕ್ತಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆ ವ್ಯಕ್ತಿಯನ್ನು ಸುಭಾಷ್ ಬಾಥಮ್ ಎಂದು ಗುರುತಿಸಲಾಗಿದೆ.

ಮಗಳ ಹುಟ್ಟುಹಬ್ಬವನ್ನು ಆಚರಿಸುವ ನೆಪದಲ್ಲಿ ಕೊಲೆ ಆರೋಪಿ ಹಳ್ಳಿಯಿಂದ ಕೆಲವು ಮಕ್ಕಳನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಹೆಂಡತಿ ಮತ್ತು ಮಗಳು ಹಾಗೂ ಇತರ ಮಕ್ಕಳನ್ನು ಗನ್ ಪಾಯಿಂಟ್ನಲ್ಲಿ ಹಿಡಿದಿದ್ದರು ಎನ್ನಲಾಗಿದೆ. ಮಕ್ಕಳು ಹಿಂತಿರುಗದಿದ್ದಾಗ, ಅವನ ನೆರೆಹೊರೆಯವರು ಅವನ ಬಾಗಿಲನ್ನು ತಟ್ಟಿದರು. ಸುಭಾಷ್ ಬಾಥಮ್ ಅವರ ಮೇಲೆ ಪೊಲೀಸರು ಗುಂಡು ಹಾರಿಸಲು ಪ್ರಾರಂಭಿಸಿದಾಗ ಅದಕ್ಕೆ ಅವನು ಪುನಃ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಪೊಲೀಸರು ಪಿಸಿಆರ್ ವ್ಯಾನ್  ಮೂಲಕ ಅವರ ಮನೆಗೆ ನುಗ್ಗಿದಾಗ, ಸುಭಾಷ್ ಬಾಥಮ್ ಟೆರೇಸ್‌ನಿಂದ  ಗುಂಡು ಹಾರಿಸಲಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ  ಕಚ್ಚಾ ಬಾಂಬ್ ಅನ್ನು ಪೋಲೀಸರ ಮೇಲೆ ಎಸೆದರು ಎನ್ನಲಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋಗಳು ಮತ್ತು ಕಾನ್ಪುರ್ ವಲಯ ಇನ್ಸ್‌ಪೆಕ್ಟರ್ ಜನರಲ್ ನೇತೃತ್ವದ ಪೊಲೀಸ್ ತಂಡವನ್ನು ನಂತರ ಸ್ಥಳದಲ್ಲಿಯೇ ನಿಯೋಜಿಸಲಾಯಿತು.

ಒತ್ತೆಯಾಳುಗಳಿಗೆ ತೊಂದರೆಯಾಗದಂತೆ ಪೊಲೀಸರು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಒಪಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು."ತರಬೇತಿ ಪಡೆದ ಸಿಬ್ಬಂದಿಗಳ ವಿಶೇಷ ತಂಡವು ಸ್ಥಳದಲ್ಲಿದೆ, ಮತ್ತು ನಾವು ಕಮಾಂಡೋಗಳನ್ನು ಇರಿಸಿದ್ದೇವೆ. ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಅವರನ್ನು ಬೇಗನೆ ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

Trending News