ಹೇ, ಮನೆಗೆ ಬಾ... ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ...! ಗಳಗಳನೇ ಅಳುತ್ತ.. "ಶಿಕ್ಷಕ"ನನ್ನು ಬೇಡಿಕೊಂಡ ಪತ್ನಿ.. ಏಕೆ ಗೊತ್ತೆ..?

ಸೋಷಿಯಲ್‌ ಮೀಡಿಯಾದಲ್ಲಿ ಎಂತೆಂಥಾ ವಿಡಿಯೋ ವೈರಲ್‌ ಆಗುತ್ತಿವೆ ಅಂದ್ರೆ, ಅವುಗಳನ್ನು ನೋಡಿ ನಗಬೇಕೋ ಅಥವಾ ಅಳಬೇಕೋ ಅಂತ ಗೊತ್ತಾಗಲ್ಲ. ಸದ್ಯ ವೈರಲ್‌ ಆಗಿರುವು ವಿಡಿಯೋ ಸಹ ಅದೇ ಸಾಲಿಗೆ ಸೇರಿದೆ.. ನಾಪತ್ತೆಯಾದ ಗಂಡನಿಗಾಗಿ ಹೆಂಡತಿ ವಿಡಿಯೋ ಮೂಲಕ ಗಳಗಳನೇ ಅಳುತ್ತಾ.. ಮನೆಗೆ ಮರಳಿ ಬರುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ..

Written by - Krishna N K | Last Updated : Apr 13, 2025, 04:04 PM IST
    • ಸೋಷಿಯಲ್‌ ಮೀಡಿಯಾದಲ್ಲಿ ಎಂತೆಂಥಾ ವಿಡಿಯೋ ವೈರಲ್‌ ಆಗುತ್ತಿವೆ
    • ಅವುಗಳನ್ನು ನೋಡಿ ನಗಬೇಕೋ ಅಥವಾ ಅಳಬೇಕೋ ಅಂತ ಗೊತ್ತಾಗಲ್ಲ.
    • ಸದ್ಯ ವೈರಲ್‌ ಆಗಿರುವು ವಿಡಿಯೋ ಸಹ ಅದೇ ಸಾಲಿಗೆ ಸೇರಿದೆ..
ಹೇ, ಮನೆಗೆ ಬಾ... ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ...! ಗಳಗಳನೇ ಅಳುತ್ತ.. "ಶಿಕ್ಷಕ"ನನ್ನು ಬೇಡಿಕೊಂಡ ಪತ್ನಿ.. ಏಕೆ ಗೊತ್ತೆ..?

ಉತ್ತರ ಪ್ರದೇಶ : ಬರೇಲಿಯ ಸರ್ಕಾರಿ ಶಾಲೆಯ ಶಿಕ್ಷಕ ಪುಷ್ಪೇಂದ್ರ ಗಂಗ್ವಾರ್ ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದಾರೆ. ಪುಷ್ಪೇಂದ್ರನಿಗೆ ಆನ್‌ಲೈನ್ ಆಟಗಳನ್ನು ಆಡುವ ಅಭ್ಯಾಸವಿತ್ತು. ಇದರಿಂದ ಸಾಕಷ್ಟ ಸಾಲವನ್ನು ಮಾಡಿಕೊಂಡಿದ್ದ.. ಸಾಲದ ಮೊತ್ತ ದೊಡ್ಡದಾಗುತ್ತಿದ್ದಂತೆ ಖಿನ್ನತೆಗೆ ಒಳಗಾಗಿದ್ದ.. ಮಾನಸಿಕ ಒತ್ತಡದಲ್ಲಿದ್ದ. ಸಾಲಗಾರರು ಮನೆ ಬಾಗಿಲಿಗೆ ಬರಲು ಪ್ರಾರಂಭಿಸಿದಾಗ ಪುಷ್ಪೇಂದ್ರ ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾನೆ.

Add Zee News as a Preferred Source

ಬರೇಲಿ ಜಿಲ್ಲೆಯ ಇಜ್ಜತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಲೋಕ್ ಬಿಹಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪುಷ್ಪೇಂದ್ರ ಗಂಗ್ವಾರ್ ಬುಧವಾರ ತಮ್ಮ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ರಾತ್ರಿ ತಡವಾಗಿದ್ದರೂ ಅವನು ಹಿಂತಿರುಗಲಿಲ್ಲ. ಇದು ಮನೆಯವರನ್ನು ಚಿಂತೆಗೀಡು ಮಾಡಿತು. ಎಲ್ಲಾ ಕಡೆ ಹುಡುಕಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಸದ್ಯ ಇಜ್ಜತ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.. 

ಇದನ್ನೂ ಓದಿ:ಮನೆಗೆ ಹೋಗೋವರೆಗೂ ತಾಳ್ಮೆ ಇಲ್ಲ.. ಅಷ್ಟು ಅರ್ಜೆಂಟ್... ಕಾರಿನಲ್ಲೇ ಕಿಸ್ಸಿಂಗ್‌-ಹಗ್ಗಿಂಗ್‌ ಎಲ್ಲಾ...! ವಿಡಿಯೋ ವೈರಲ್‌.. 

ಪುಷ್ಪೇಂದ್ರ ಆನ್‌ಲೈನ್ ಗೇಮಿಂಗ್‌ ವ್ಯಸನಿಯಾಗಿದ್ದ. ಮೊದಲಿಗೆ, ಅವನು ಕೇವಲ ಟೈಮ್ ಪಾಸ್ ಆಗಿ ಆಡುತ್ತಿದ್ದನು. ಅದಾದ ನಂತರ, ಈ ಅಭ್ಯಾಸ ಎಷ್ಟರ ಮಟ್ಟಿಗೆ ಬೆಳೆಯಿತು ಎಂದರೆ ಅವರ ಸಂಬಳವೂ ಈ ಆಟಕ್ಕೆ ಹೋಗಲಾರಂಭಿಸಿತು. ಅವರ ಸಂಬಳ ಕಡಿಮೆ ಇದ್ದ ಕಾರಣ, ಸಂಬಂಧಿಕರು ಮತ್ತು ಸ್ನೇಹಿತರಿಂದ ಸಾಲ ಪಡೆದರು. ಹೀಗಾಗಿ ಸಾಲ ಹೆಚ್ಚಾಯಿತು. ಸಾಲಗಾರರ ಕಾಟ ಹೆಚ್ಚಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಇನ್ನು ಪುಷ್ಪೇಂದ್ರ ಅವರ ಪತ್ನಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಲ್ಲಿದ್ದರೂ ಗಂಡ ಮನೆಗೆ ಬರುವಂತೆ ಪದೇ ಪದೇ ಕೇಳಿಕೊಂಡಿದ್ದಾಳೆ.. ಹೇ, ಮನೆಗೆ ಬಾ... ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ... ಅಂತ ಕೇಳಿಕೊಂಡಿದ್ದಾಳೆ. ಸಧ್ಯ ವಿಡಿಯೋ ವೈರಲ್‌ ಆಗಿದೆ.. ಇಜ್ಜತ್‌ನಗರ ಪೊಲೀಸರು ಪುಷ್ಪೇಂದ್ರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News