ಜನರಿಗೆ ಕಾಶ್ಮೀರ ಹೈಕೋರ್ಟ್ ಗೆ ಹೋಗಲು ಕಷ್ಟ ಎಂದರೆ ನಿಜಕ್ಕೂ ಗಂಭೀರ ಸಂಗತಿ - ಸಿಜೆಐ ರಂಜನ್ ಗೊಗಯ್

ಆಗಸ್ಟ್ 5 ರಿಂದ ಜಾರಿಯಲ್ಲಿರುವ ಭದ್ರತಾ ನಿರ್ಬಂಧಗಳ ಮಧ್ಯೆ ಅಲ್ಲಿ ಹೈಕೋರ್ಟ್‌ಗೆ ಪ್ರವೇಶಿಸುವುದು ಕಷ್ಟ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಏನಾಕ್ಷಿ ಗಂಗೂಲಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಪೀಠ ಸೋಮವಾರದಂದು ಜಮ್ಮು ಮತ್ತು ಹೈಕೋರ್ಟ್ ನಿಂದ ವರದಿ ಕೇಳಿದೆ.

Last Updated : Sep 16, 2019, 01:42 PM IST
ಜನರಿಗೆ ಕಾಶ್ಮೀರ ಹೈಕೋರ್ಟ್ ಗೆ ಹೋಗಲು ಕಷ್ಟ ಎಂದರೆ ನಿಜಕ್ಕೂ ಗಂಭೀರ ಸಂಗತಿ - ಸಿಜೆಐ ರಂಜನ್ ಗೊಗಯ್ title=
file photo

ನವದೆಹಲಿ: ಆಗಸ್ಟ್ 5 ರಿಂದ ಜಾರಿಯಲ್ಲಿರುವ ಭದ್ರತಾ ನಿರ್ಬಂಧಗಳ ಮಧ್ಯೆ ಅಲ್ಲಿ ಹೈಕೋರ್ಟ್‌ಗೆ ಪ್ರವೇಶಿಸುವುದು ಕಷ್ಟ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಏನಾಕ್ಷಿ ಗಂಗೂಲಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಪೀಠ ಸೋಮವಾರದಂದು ಜಮ್ಮು ಮತ್ತು ಹೈಕೋರ್ಟ್ ನಿಂದ ವರದಿ ಕೇಳಿದೆ.

ಮಕ್ಕಳ ಹಕ್ಕು ಕಾರ್ಯಕರ್ತೆ ಏನಾಕ್ಷಿ ಗಂಗೂಲಿ ಜಮ್ಮು ಕಾಶ್ಮೀರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧವಿರುವುದರಿಂದ 6 ರಿಂದ 18 ವರ್ಷದೊಳಗಿನ ಮಕ್ಕಳ ಸ್ಥಿತಿ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೀವು ಈ ವಿಚಾರವಾಗಿ ಹೈಕೋರ್ಟ್ ಗೆ ಹೋಗಬಹುದು ಎಂದು ಹೇಳಿದರು.

ಆಗ ಏಣಾಕ್ಷಿ ಗಂಗೂಲಿ ಪರವಾಗಿ ವಾದಿಸಿದ ವಕೀಲ ಹುಜೆಫಿ ಅಹ್ಮದ್ ಹೈಕೋರ್ಟ್ ಗೆ ಹೋಗುವುದು ಕಷ್ಟ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಹೋಗುವುದೇಕೆ ಕಷ್ಟ? ಯಾರಾದರೂ ಅಡ್ಡಿ ಬರುತ್ತಾರೆಯೇ? ನಾವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಿಂದ ತಿಳಿದುಕೊಳ್ಳಲು ಬಯಸುತ್ತೇನೆ. ಅಗತ್ಯವಿದ್ದರೆ, ನಾನೇ ಜಮ್ಮುಮತ್ತು ಕಾಶ್ಮೀರ ಹೈಕೋರ್ಟ್ ಗೆ ಹೋಗುತ್ತೇನೆ ಎಂದು ಹೇಳಿದರು. 

ಈಗ ಸುಪ್ರೀಂಕೋರ್ಟ್ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ ಗೆ ಈ ವಿಚಾರವಾಗಿ ವರದಿ ಕೇಳಿದೆ. ಈ ವರದಿ ಬಂದ ನಂತರ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಗೆ ಹೋಗುವುದಾಗಿ ಸಿಜೆಐ ರಂಜನ್ ಹೇಳಿದ್ದಾರೆ. 

Trending News