ಹಿರಿಯ ಪತ್ರಕರ್ತ ವಿನೋದ್ ದುವಾ ಇನ್ನಿಲ್ಲ

ಹಿರಿಯ ಪತ್ರಕರ್ತ ವಿನೋದ್ ದುವಾ ಅವರು ಶನಿವಾರದಂದು ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.ಭಾನುವಾರದಂದು ಮಧ್ಯಾಹ್ನ ಲೋಧಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಲ್ಲಿಕಾ ತಿಳಿಸಿದ್ದಾರೆ.

Written by - ZH Kannada Desk | Last Updated : Dec 4, 2021, 06:59 PM IST
  • ಹಿರಿಯ ಪತ್ರಕರ್ತ ವಿನೋದ್ ದುವಾ ಅವರು ಶನಿವಾರದಂದು ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.
  • ಭಾನುವಾರದಂದು ಮಧ್ಯಾಹ್ನ ಲೋಧಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಲ್ಲಿಕಾ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ವಿನೋದ್ ದುವಾ ಇನ್ನಿಲ್ಲ

ನವದೆಹಲಿ: ಹಿರಿಯ ಪತ್ರಕರ್ತ ವಿನೋದ್ ದುವಾ ಅವರು ಶನಿವಾರದಂದು ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.

ಭಾನುವಾರದಂದು ಮಧ್ಯಾಹ್ನ ಲೋಧಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಲ್ಲಿಕಾ ತಿಳಿಸಿದ್ದಾರೆ.

ಇದನ್ನೂ ಓದಿ : Vicky Kaushal-Katrina Kaif ಮದುವೆಗೆ ಹಾಜರಾಗುವುದಿಲ್ಲ ಎಂದು ಹೇಳಿದ ಗಜರಾಜ್ ರಾವ್..!

"ನಮ್ಮ ಪೂಜ್ಯ ನಿರ್ಭೀತ ಮತ್ತು ಅಸಾಧಾರಣ ತಂದೆಯವರಾದ ವಿನೋದ್ ದುವಾ ಅವರು ನಿಧನರಾಗಿದ್ದಾರೆ. ದೆಹಲಿಯ ನಿರಾಶ್ರಿತರ ವಸಾಹತುಗಳಿಂದ 42 ವರ್ಷಗಳ ಕಾಲ ಪತ್ರಕರ್ತರ ಶ್ರೇಷ್ಠತೆಯ ಶಿಖರಕ್ಕೆ ಏರಿದರು, ಯಾವಾಗಲೂ ಅಧಿಕಾರದ ವಿರುದ್ಧವಾಗಿ ಸತ್ಯವನ್ನು ಮಾತನಾಡುತ್ತಿದ್ದರು" ಎಂದು ಅವರ ಪುತ್ರಿ ಮಲ್ಲಿಕಾ ದುವಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ.. Baby bump ಪೋಟೋ ಹಂಚಿಕೊಂಡ ತಾರೆ

ಈ ವರ್ಷದ ಆರಂಭದಲ್ಲಿ COVID-19 ನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ಗಂಭೀರವಾಗಿದ್ದರು.ದುವಾ ಅವರು ಹಿಂದಿ ವಲಯದ ಪತ್ರಿಕೋದ್ಯಮದಲ್ಲಿ ಪ್ರಸಿದ್ಧ ಪತ್ರಕರ್ತರಾಗಿದ್ದರು ಮತ್ತು ದೂರದರ್ಶನ, ಎನ್‌ಡಿಟಿವಿ ಮತ್ತು ದಿ ವೈರ್‌ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.

ಇದನ್ನೂ ಓದಿ :ವಿಮಾನದಲ್ಲಿಯೇ ಅಮೇರಿಕಾ ಪ್ರಯಾಣಿಕನ ಸಾವು, ದೆಹಲಿಗೆ ಹಿಂತಿರುಗಿದ ಏರ್ ಇಂಡಿಯಾ

ಈ ವರ್ಷದ ಆರಂಭದಲ್ಲಿ, ವಿನೋದ್ ದುವಾ ಅವರ ಪತ್ನಿ ಚಿನ್ನಾ ದುವಾ COVID-19 ಗೆ ಬಲಿಯಾದರು.ವಿನೋದ್ ದುವಾ ಅವರು ಕ್ಲಿನಿಕಲ್ ಸೈಕಾಲಜಿಸ್ಟ್ ಬಕುಲ್ ದುವಾ ಮತ್ತು ಮಲ್ಲಿಕಾ ದುವಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News