ನಾಗಮಣಿ, ಒಂದು ಪೌರಾಣಿಕ ಮತ್ತು ಐತಿಹಾಸಿಕ ಕುತೂಹಲದ ವಿಷಯ, ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದ ಚರ್ಚಿತವಾಗಿದೆ. ಇದನ್ನು ನಾಗರಹಾವಿನ ತಲೆಯಲ್ಲಿ ಅಥವಾ ದೇಹದಲ್ಲಿ ಇರುವ ಅತೀ ಮೌಲ್ಯಯುತವಾದ ರತ್ನ ಎಂದು ವಿವರಿಸಲಾಗಿದೆ. ಈ ಕುರಿತು ಹಲವಾರು ಐತಿಹಾಸಿಕ ಮತ್ತು ಪೌರಾಣಿಕ ಗ್ರಂಥಗಳಲ್ಲಿ ಉಲ್ಲೇಖಗಳಿವೆ

ನಾಗಮಣಿ ಈ ಹೆಸರು ಕೇಳಿದರೆ ಎಲ್ಲರ ಮನಸ್ಸಿನಲ್ಲಿ ಕುತೂಹಲ ಮೂಡುತ್ತದೆ. ನಾಗರಹಾವಿನ ತಲೆಯಲ್ಲಿ ರತ್ನದಂತಹ ‘ನಾಗಮಣಿ’ ಇದೆ ಎಂಬ ನಂಬಿಕೆ ಶತಮಾನಗಳಿಂದಲೂ ಜನರ ಮನದಲ್ಲಿ ಗೂಡಿಕೊಂಡಿದೆ. ಆದರೆ, ಇದು ನಿಜವೇ, ಇಲ್ಲವೇ ಕಾಲ್ಪನಿಕ ಕಥೆಯೇ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಈ ವಿಷಯವನ್ನು ಮತ್ತೆ ಚರ್ಚೆಗೆ ತಂದಿದೆ. ವ್ಯಕ್ತಿಯೊಬ್ಬ ನಾಗರಹಾವಿನ ತಲೆಯಿಂದ ‘ನಾಗಮಣಿ’ ಎಂದು ಕರೆಯಲಾದ ವಸ್ತುವನ್ನು ಹೊರತೆಗೆದಿರುವ ದೃಶ್ಯ ಈ ವಿಡಿಯೋದಲ್ಲಿದೆ.
ವೈರಲ್ ವಿಡಿಯೋದಲ್ಲಿ, ಹೊಲಗಳ ನಡುವಿನ ಕಾಲುದಾರಿಯಲ್ಲಿ ನಾಗರಹಾವು ಒಂದು ಕಾಣಿಸಿಕೊಳ್ಳುತ್ತದೆ. ಆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಹಾವನ್ನು ತಡೆಯುತ್ತಾನೆ. ಹಾವು ಸುರುಳಿಯಾಗಿ ಸುತ್ತಿಕೊಂಡು ಹಿಂದಕ್ಕೆ ಸರಿಯುತ್ತದೆ. ಹಾವು ರಸ್ತೆ ದಾಟಲು ಪ್ರಯತ್ನಿಸಿದಾಗ, ಆ ವ್ಯಕ್ತಿ ಅದರ ಬಾಲವನ್ನು ಹಿಡಿದು ರಸ್ತೆಯ ಬದಿಗೆ ಎಳೆಯುತ್ತಾನೆ. ಈ ಸಂದರ್ಭದಲ್ಲಿ ಹಾವು ಕಚ್ಚಲು ಪ್ರಯತ್ನಿಸಿದರೂ, ವ್ಯಕ್ತಿ ಜಾಣತನದಿಂದ ತಪ್ಪಿಸಿಕೊಳ್ಳುತ್ತಾನೆ. ಕೊನೆಗೆ, ಆ ವ್ಯಕ್ತಿ ಹಾವಿನ ತಲೆಯನ್ನು ಚಾಕುವಿನಿಂದ ಕತ್ತರಿಸಿ, ಅದರೊಳಗಿಂದ ಸಣ್ಣ ರತ್ನದಂತಹ ವಸ್ತುವನ್ನು ಹೊರತೆಗೆಯುತ್ತಾನೆ. ತದನಂತರ ಹಾವನ್ನು ಬಿಡುಗಡೆ ಮಾಡುತ್ತಾನೆ.
ಈ ವಿಡಿಯೋ, ಹಳೆಯದಾದರೂ ಇತ್ತೀಚೆಗೆ ಮತ್ತೆ ವೈರಲ್ ಆಗಿದ್ದು,. ಈ ದೃಶ್ಯವನ್ನು ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ಇದು ನಿಜವಾಗಿಯೂ ನಾಗಮಣಿಯೇ?” ಎಂದು ಕಾಮೆಂಟ್ಗಳ ಮೂಲಕ ಚರ್ಚೆಯನ್ನು ಆರಂಭಿಸಿದ್ದಾರೆ. ಕೆಲವರು ಇದನ್ನು ಸತ್ಯ ಎಂದು ನಂಬಿದರೆ, ಇನ್ನು ಕೆಲವರು ಇದು ಕೇವಲ ಕಾಲ್ಪನಿಕ ದೃಶ್ಯವಿರಬಹುದು ಎಂದು ವಾದಿಸಿದ್ದಾರೆ.
ನಾಗಮಣಿಯ ಕುರಿತು ಐತಿಹಾಸಿಕ ಉಲ್ಲೇಖ
ಪ್ರಾಚೀನ ಭಾರತೀಯ ಗ್ರಂಥವಾದ ವರಾಹ ಮಿಹಿರನ ‘ಬೃಹತ್ ಸಂಹಿತೆ’ಯ ಪ್ರಕಾರ, ನಾಗಮಣಿ ಕಾಲ್ಪನಿಕವಲ್ಲ, ಬದಲಿಗೆ ನಾಗರಹಾವಿನ ತಲೆಯ ಮೇಲಿರುವ ರತ್ನ ಎಂದು ವಿವರಿಸಲಾಗಿದೆ. ನಾಗರಹಾವುಗಳು ಬಹಳ ಅಪರೂಪಕ್ಕೆ ಕಂಡುಬರುತ್ತವೆ ಎಂದು ಹೇಳಿರುವ ವರಾಹ ಮಿಹಿರ, ನಾಗಮಣಿಯನ್ನು ಹೊಂದಿರುವ ಹಾವು ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂದಿದ್ದಾರೆ. ಈ ಹಾವಿನಿಂದ ಹೊರಹೊಮ್ಮುವ ಬೆಳಕು ಬೆಂಕಿಯಂತೆ ಪ್ರಖರವಾಗಿರುತ್ತದೆ, ಆ ಪ್ರದೇಶವನ್ನು ಸಂಪೂರ್ಣವಾಗಿ ಬೆಳಗಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಆದರೆ, ಆಧುನಿಕ ವಿಜ್ಞಾನದ ಪ್ರಕಾರ, ನಾಗಮಣಿಯ ಇರವಿನ ಬಗ್ಗೆ ಯಾವುದೇ ದೃಢವಾದ ಪುರಾವೆಗಳಿಲ್ಲ. ಹಾವಿನ ತಲೆಯಲ್ಲಿ ರತ್ನದಂತಹ ವಸ್ತು ರೂಪುಗೊಳ್ಳುವ ಸಾಧ್ಯತೆಯನ್ನು ವಿಜ್ಞಾನಿಗಳು ತಳ್ಳಿಹಾಕಿದ್ದಾರೆ. ಕೆಲವೊಮ್ಮೆ ಹಾವಿನ ದೇಹದಲ್ಲಿ ಕಂಡುಬರುವ ಕೆಲವು ಗಂಟುಗಳು ಅಥವಾ ವಿಷಕೋಶಗಳನ್ನು ನಾಗಮಣಿ ಎಂದು ತಪ್ಪಾಗಿ ಗುರುತಿಸಲಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ವಿಡಿಯೋದಲ್ಲಿ ಹಾವಿನ ತಲೆಯನ್ನು ಕತ್ತರಿಸುವ ದೃಶ್ಯವು ಪ್ರಾಣಿಗಳ ಮೇಲಿನ ಕ್ರೂರತೆಯನ್ನು ಎತ್ತಿ ತೋರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪರಿಸರ ಸಂರಕ್ಷಣೆ ಮತ್ತು ಪ್ರಾಣಿಗಳ ಹಕ್ಕುಗಳ ಕುರಿತ ಚರ್ಚೆಯೂ ಮುಂದುವರೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ