ಪ್ರತಿಯೊಬ್ಬರಿಗೂ ಕೆಲವೊಂದು ವಸ್ತುಗಳ ಮೇಲೆ ಎಲ್ಲಿಲ್ಲದ ಮೋಹ. ಕೆಲವರು ತಮ್ಮ ವಸ್ತುಗಳ ಮೇಲಿನ ವ್ಯಾಮೋಹದಿಂದಾಗಿ ಜನರ ನಡುವೆ ಪೇಚಿಗೆ ಸಿಲುಕುವ ಹಲವು ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಒಂದು ಘಟನೆ ಚೀನಾದ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿದೆ. ಇಲ್ಲೊಬ್ಬ ಮಹಿಳೆ ತನ್ನ ಕೈಚೀಲದ(ವ್ಯಾನಿಟಿ ಬ್ಯಾಗ್) ಅತಿಯಾದ ಪ್ರೀತಿಯಿಂದ ಎಕ್ಸ್-ರೇ ಯಂತ್ರದ ಒಳಗೆ ನುಗ್ಗಿದ್ದಾಳೆ. ಆ ಮಹಿಳೆ ತನ್ನ ಕೈಚೀಲದೊಂದಿಗೆ ಎಕ್ಸ್-ರೇ ಯಂತ್ರದಿಂದ ಹೊರಬಂದಳು.


COMMERCIAL BREAK
SCROLL TO CONTINUE READING

ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ಆ ಘಟನೆಯ ದೃಶ್ಯ, ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಂತರರಾಷ್ಟ್ರೀಯ ಮಾಧ್ಯಮ ವರದಿ ಪ್ರಕಾರ, ಮಹಿಳೆಗೆ ತನ್ನ ಕೈಚೀಲದ ಮೇಲಿನ ಅತಿಯಾದ ಪ್ರೀತಿಯಿಂದ ತಪಾಸಣೆ ಸಮಯದಲ್ಲಿ ತನ್ನ ಕೈಚೀಲ ಕೈತಪ್ಪಬಹುದು ಎಂಬ ಭಯದಲ್ಲಿ ಯಂತ್ರದೊಳಗೆ ನುಗ್ಗಿರುವುದಾಗಿ ತಿಳಿದುಬಂದಿದೆ. 


ಈ ವೀಡಿಯೊ ನೋಡಿ



ಭದ್ರತಾ ಕಾರಣಗಳಿಗಾಗಿ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಲಗೇಜಿಗಾಗಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಎಕ್ಸರೆ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಎಕ್ಸ್-ರೇ ಯಂತ್ರದಲ್ಲಿ ಪ್ರಯಾಣಿಕರನ್ನು ತಮ್ಮ ಸರಕನ್ನು ಇರಿಸಿಕೊಳ್ಳಲು ಕಡ್ಡಾಯವಾಗಿದೆ. ವಸ್ತುವು ಸಂಪೂರ್ಣವಾಗಿ ಯಂತ್ರದೊಳಗೆ ಸ್ಕ್ಯಾನ್ ಆಗಿದ್ದು, ಯಾವುದೇ ನಿರ್ಬಂಧಿತ ಐಟಂ ರೈಲ್ವೇ ನಿಲ್ದಾಣಕ್ಕೆ ಪ್ರವೇಶಿಸಬಾರದು. ಎಕ್ಸರೆ ಯಂತ್ರ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ ಎಂದು ಪರಿಗಣಿಸಲ್ಪಡುವ ವಿಧದ ವಿಕಿರಣ.