VIDEO: ಹೈದ್ರಾಬಾದ್ ಎನ್ಕೌಂಟರ್, ವಿದ್ಯಾರ್ಥಿನಿಯರ ಪ್ರತಿಕ್ರಿಯೆ ಹೀಗಿತ್ತು

ಹೈದ್ರಾಬಾದ್ ನಲ್ಲಿ ಬೆಳಗ್ಗೆ ಶಾಲಾ ಬಾಲಕಿಯರು ತಾವು ಸಂಚರಿಸುತ್ತಿದ್ದ ಬಸ್ ನಿಂದಲೇ ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.

Updated: Dec 6, 2019 , 04:44 PM IST
VIDEO: ಹೈದ್ರಾಬಾದ್ ಎನ್ಕೌಂಟರ್, ವಿದ್ಯಾರ್ಥಿನಿಯರ ಪ್ರತಿಕ್ರಿಯೆ ಹೀಗಿತ್ತು
Photo courtesy: ANI

ಹೈದ್ರಾಬಾದ್:ಹೈದ್ರಾಬಾದ್ ನ ಮಹಿಳಾ ವೈದ್ಯೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಅವಳನ್ನು ಹತ್ಯೆಗೈದು ದೇಹವನ್ನು ಸುಟ್ಟುಹಾಕಿದ ಆರೋಪಿಗಳನ್ನು ಹೈದ್ರಾಬಾದ್ ಪೊಲೀಸರು ಶುಕ್ರವಾರ ಬೆಳಗ್ಗೆ ಎನ್ಕೌಂಟರ್ ನಡೆಸಿ ಹತ್ಯೆಗೈದಿದ್ದಾರೆ. ನಡೆದ ಘಟನೆಯನ್ನು ಮರುಸೃಷ್ಟಿಸುವ ಸಲುವಾಗಿ ಪೊಲೀಸರು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಬಳಿಕ ನಡೆದ ಎನ್ಕೌಂಟರ್ ನಲ್ಲಿ ನಾಲ್ವರು ಆರೋಪಿಗಳು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ದೇಶಾದ್ಯಂತ ಪ್ರತಿಕ್ರಿಯೆಗಳು ಹೊರಹೊಮ್ಮುತ್ತಿದ್ದು, ಪೊಲೀಸ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

ಆರೋಪಿಗಳ ಎನ್ಕೌಂಟರ್ ಸುದ್ದಿ ಹೊರಬರುತ್ತಿದ್ದಂತೆ ಹೈದ್ರಾಬಾದ್ ನಲ್ಲಿ ಬೆಳಗ್ಗೆ ಶಾಲಾ ಬಾಲಕಿಯರು ತಾವು ಸಂಚರಿಸುತ್ತಿದ್ದ ಬಸ್ ನಿಂದಲೇ ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಾವಳಿಯನ್ನು ಅಲ್ಲಿ ನೆರೆದಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಪೊಲೀಸರನ್ನು ಕಂಡು ಬಾಲಕಿಯರು ಸಂತಸ ವ್ಯಕ್ತಪಡಿಸಿದ್ದಾರೆ.

 

ವಾಸ್ತವಿಕವಾಗಿ ವಿದ್ಯಾರ್ಥಿನಿಯರ ಈ ಶಾಲಾ ಬಸ್ ಕಿರಾತಕರು ಅಪರಾಧ ಎಸಗಿದ ಸ್ಥಳದ ಹತ್ತಿರವಿರುವ ಫ್ಲೈಓವರ್ ಮೇಲಿಂದ ಸಾಗುತ್ತಿತ್ತು ಎಂಬುದು ಇಲ್ಲಿ ಗಮನಾರ್ಹ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ANI ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.