ಪಾಕ್‍ನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ, ಭಾರತದ ಮುಸ್ಲಿಮರ ಮೇಲೆ ಸೇಡು!

ಹೊಸ ಕಾನೂನಿನಲ್ಲಿ ಮುಸ್ಲಿಂ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದು ಸಂಪೂರ್ಣವಾಗಿ ವಿಭಜನೆಯಾಗಿದೆ. ನಮ್ಮ ಪಕ್ಷವು ಅದನ್ನು ಸಂಪೂರ್ಣವಾಗಿ ವಿಭಜಿಸುವ, ಅಸಂವಿಧಾನಿಕವೆಂದು ಪರಿಗಣಿಸುತ್ತದೆ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದರು. 

Updated: Dec 17, 2019 , 11:18 AM IST
ಪಾಕ್‍ನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ, ಭಾರತದ ಮುಸ್ಲಿಮರ ಮೇಲೆ ಸೇಡು!
Representational Image(photo; DNA)

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಕುರಿತು ಬಿಎಸ್​ಪಿ(BSP) ಮುಖ್ಯಸ್ಥೆ ಮಾಯಾವತಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಸಂವಿಧಾನಿಕ ಕಾನೂನು ಎಂದು ಹರಿಹಾಯ್ದ ಮಾಯಾವತಿ ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಕೇಂದ್ರ ಸರ್ಕಾರವು ಭಾರತದ ಮುಸ್ಲಿಮರಿಂದ ಪ್ರತೀಕಾರ ತೀರಿಸುತ್ತಿದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) ಅನ್ನು ಹಿಂತೆಗೆದುಕೊಳ್ಳುವಂತೆ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ, ಇಲ್ಲದಿದ್ದರೆ ಭವಿಷ್ಯದಲ್ಲಿ ಅದು ಭೀಕರ ಪರಿಣಾಮಗಳನ್ನು ಬೀರುತ್ತದೆ ಎಚ್ಚರಿಸಿದರಲ್ಲದೆ, ಈ ಹಿಂದೆ ಕಾಂಗ್ರೆಸ್ ಮಾಡಿದಂತೆ ಅವರು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಬಾರದು ಎಂದು ಮಾಯಾವತಿ ಹೇಳಿದರು.

ಯಾವುದೇ ಸಮುದಾಯ ಮತ್ತು ಧರ್ಮದ ಸ್ವಾರ್ಥಕ್ಕಾಗಿ ಸರ್ಕಾರ ನಿರ್ಲಕ್ಷ್ಯ ಮತ್ತು ತಾರತಮ್ಯ ಧೋರಣೆ ತಾಳಿದೆ ಎಂಬುದನ್ನು ಈ ಹೊಸದಾಗಿ ಜಾರಿಗೆ ತರಲಾದ ಕಾನೂನು ತಿಳಿಸುತ್ತಿದೆ. ಹೊಸ ಕಾನೂನಿನಲ್ಲಿ ಮುಸ್ಲಿಂ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದು ಸಂಪೂರ್ಣವಾಗಿ ವಿಭಜನೆಯಾಗಿದೆ. ನಮ್ಮ ಪಕ್ಷವು ಅದನ್ನು ಸಂಪೂರ್ಣವಾಗಿ ವಿಭಜಿಸುವ, ಅಸಂವಿಧಾನಿಕವೆಂದು ಪರಿಗಣಿಸುತ್ತದೆ ಎಂದವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಕೇಂದ್ರ ಸರ್ಕಾರವು ಭಾರತದ ಮುಸ್ಲಿಮರಿಂದ ಪ್ರತೀಕಾರ ತೀರಿಸುತ್ತಿದೆ. ಇದು ಮಾನವೀಯತೆಗೆ ವಿರುದ್ಧ ಎಂದು ಮಾಯಾವತಿ ಕಿಡಿಕಾರಿದ್ದಾರೆ. ಭಾರತದ ಘನತೆಯನ್ನು ಕುಸಿಯಲು ಸುಪ್ರೀಂ ಕೋರ್ಟ್ ಬಿಡುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಅವರು ಶಿಕ್ಷಣ ಸಂಸ್ಥೆಗಳೂ ಇದರಲ್ಲಿ ಸಿಲುಕಿಕೊಂಡಿವೆ. ವಿಭಜಿಸುವ ಕಾನೂನನ್ನು ಹಿಂತೆಗೆದುಕೊಳ್ಳುವಂತೆ ನಾನು ಕೇಂದ್ರವನ್ನು ಕೋರುತ್ತೇನೆ. ಇಂದು ನಾವು ರಾಷ್ಟ್ರಪತಿಯನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ ಎಂದರು.

ಭಾರತದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ವಾಸಿಸುತ್ತಿದ್ದಾರೆ. ಈ ಕಾನೂನಿನ ಸೋಗಿನಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡುವುದು ಸಂಪೂರ್ಣವಾಗಿ ತಪ್ಪು. ಈಗ ಪೊಲೀಸರು ಇದನ್ನು ವಿರೋಧಿಸುವವರಿಗೆ ಕಿರುಕುಳ ನೀಡುತ್ತಿದ್ದಾರೆ. ಜಾಮಿಯಾದಲ್ಲಿ, ಪೊಲೀಸರು ಕ್ಯಾಂಪಸ್‌ಗೆ ಪ್ರವೇಶಿಸುವ ಮೂಲಕ ಮಾಡಿದ ಅಪರಾಧವನ್ನು ಎಲ್ಲೆಡೆ ವಿರೋಧಿಸಲಾಗುತ್ತಿದೆ  ಎಂದು ಮಾಯಾವತಿ(Mayawati) ಹೇಳಿದರು.

ಇದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಈ ಕಾನೂನನ್ನು ಪ್ರಶ್ನಿಸಲಾಗಿದೆ ಎಂದು ತಿಳಿಸಿದ ಮಾಯಾವತಿ, ಈ ಕಾನೂನಿಗೆ ಸಂಬಂಧಿಸಿದಂತೆ ದೇಶಾದ್ಯಂತ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಇಂದು ರಾಷ್ಟ್ರಪತಿಯವರನ್ನು ಭೇಟಿ ಮಾಡಲು ಸಮಯವನ್ನು ಕೋರಿದ್ದೇವೆ. ಈ ಕಾನೂನನ್ನು ಹಿಂತೆಗೆದುಕೊಂಡರೆ ಅದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.