Viral Video: ಹಾವಿನ ಹೆಸರು ಕೇಳಿದರೆ ಸಾಕು ಬಹುತೇಕ ಜನರು ಬೆಚ್ಚಿಬೀಳುತ್ತಾರೆ. ಹೀಗಿರುವಾಗ ಆಕಸ್ಮಿಕವಾಗಿ ಹಾವು, ಅದರಲ್ಲೂ ಬ್ಲಾಕ್ ಕೋಬ್ರಾ ಎದುರಾದರೆ ಏನಾಗುತ್ತದೆ? ನಿಸ್ಸಂಶಯವಾಗಿ, ಅದರಿಂದ ಪಾರಾಗಲು ನೀವು ಅತ್ತಿಂದಿತ್ತ ಓಡಾಡಲು ಶುರುಮಾಡುವಿರಿ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಅಪಾಯಕಾರಿ ಬ್ಲ್ಯಾಕ್ ನೆಕ್ ಸ್ಪಿಟಿಂಗ್ ಕೋಬ್ರಾಗೆ ಗ್ಲಾಸ್‌ನಲ್ಲಿ ನೀರು ಕುಡಿಸುತ್ತಿರುವುದನ್ನು ನೀವು ಕಾಣಬಹುದು. ಈ ವಿಡಿಯೋ ನೋಡಿದ ನಂತರ ಭಾರಿ ಆಶ್ಚರ್ಯಕ್ಕೆ ಒಳಗಾಗಿದ್ದಾರೆ 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಹೀಗೂ ಸಹ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಬಹುದು, ವಿಡಿಯೋ ಕಂಡು ನಿಮಗೂ ಅಚ್ಚರಿ ಆಗಬಹುದು!


ಗಾಜಿನ ಗ್ಲಾಸ್ ನಲ್ಲಿ ನೀರು ಕುದಿಯುತ್ತಿರುವ ಬ್ಲಾಕ್ ಕೊಬ್ರಾ
ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಕೈಯಲ್ಲಿ ನೀರು ತುಂಬಿದ ಲೋಟವನ್ನು ಹಿಡಿದಿರುವುದನ್ನು ನೀವು ಕಾಣಬಹುದು. ಇದೇ ಸಮಯದಲ್ಲಿ, ಕಪ್ಪು ನಾಗರಹಾವು ಅವನಿಗೆ ಬಹಳ ಹತ್ತಿರದಲ್ಲಿ ಇರುವಂತೆ ಕಾಣಿಸುತ್ತಿದೆ. ಈ ವೀಡಿಯೋ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಹಾವು ಎಷ್ಟು ಭಯಾನಕವಾಗಿದೆ ಎಂದು ವೀಡಿಯೊದಲ್ಲಿ ನೀವು ನೋಡಬಹುದು. ಆದರೂ ನೀರು ಕುಡಿಯುವಾಗ ಆ ವ್ಯಕ್ತಿಯ ಮೇಲೆ ಯಾವುದೇ ರೀತಿಯಲ್ಲಿ ಹಲ್ಲೆ ನಡೆಸಿಲ್ಲ. ಅಂದಹಾಗೆ, ಇದು ಕಪ್ಪು ಕುತ್ತಿಗೆ ಹೊಂದಿರುವ ಉಗುಳುವ ನಾಗರಹಾವು ಎಂಬುದು ನಿಮಗೆ ಗೊತ್ತಿರಲಿ. ಅಂದರೆ ಅದು ಕೇವಲ ಬುಸುಗೂಡಿದರು ಸಾಕು ಅದರ ವಿಷ ಎಂತಹ ವ್ಯಕ್ತಿಯನ್ನಾದರು ಕೂಡ ಕ್ಷಣಾರ್ಧದಲ್ಲಿ ಶಾಶ್ವತವಾಗಿ ಮಲಗಿಸಿ ಬಿಡುತ್ತದೆ.  ಹಾಗಾದರೆ ಈ  ವಿಡಿಯೋವನ್ನು ಮೊದಲು ನೋಡೋಣ ಬನ್ನಿ.



ಇದನ್ನೂ ಓದಿ-Viral Video: ಗಡ್ಡದಿಂದ 63 ಕೆಜಿ ಮಹಿಳೆ ಎತ್ತಿ ಗಿನ್ನಿಸ್ ರೆಕಾರ್ಡ್ ಮಾಡಿದ ಭೂಪ..!
 
ಬಳಕೆದಾರರು ನೀಡಿರುವ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ
ಈ ವೀಡಿಯೋ ನೋಡಿ ಕೆಲವರಿಗೆ ಅಚ್ಚರಿಯಾದರೆ, ಕೆಲವರು ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಾವಿನ ಈ ವಿಶಿಷ್ಟ ವೀಡಿಯೊವನ್ನು Royal_pythons_ ಹೆಸರಿನ Instagram ಪುಟದಲ್ಲಿ ಹಂಚಿಕೊಳ್ಳಲಾಗಿದೆ. 'ಇದು ಅದ್ಭುತ ದೃಶ್ಯವಾಗಿದೆ. ಬಾಯಾರಿದ ನಾಗರಹಾವು ನೀರು ಕುಡಿಯುತ್ತಿದೆ' ಎಂದು ಈ ವಿಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವಾರದ ಹಿಂದೆ ಅಪ್‌ಲೋಡ್ ಮಾಡಲಾಗಿರುವ ಈ ವಿಡಿಯೋವನ್ನು  ಇದುವರೆಗೆ 1 ಲಕ್ಷದ 22 ಸಾವಿರಕ್ಕೂ ಹೆಚ್ಚು ಜನರು ವಿಕ್ಷೀಸಿದ್ದಾರೆ (Viral Video) ಮತ್ತು  ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ.


ಇದನ್ನೂ ಓದಿ-ಮುದ್ದು ಕಂದಮ್ಮನಿಗೆ ನಡಿಗೆ ಕಲಿಸಿದ ನಾಯಿಮರಿ, ನೋಡಿದರೆ ನೋಡುತ್ತಲೇ ಇರಬೇಕೆನಿಸುವ ವಿಡಿಯೋ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.