ನವದೆಹಲಿ: ಸಾಮಾನ್ಯವಾಗಿ ಜನರು ಆಮ್ಲೆಟ್, ಬ್ರೆಡ್ ಆಮ್ಲೆಟ್ ತಿನ್ನುವುದನ್ನು ನೋಡಿರುತ್ತೀರಿ. ಆದರೆ ಕೂಲ್ ಡ್ರಿಂಕ್ಸ್ ನಿಂದ ಮಾಡಿದ ಆಮ್ಲೆಟ್(Omelette) ಎಂದಾದರೂ ಟೇಸ್ಟ್ ಮಾಡಿದ್ದೀರಾ? ಅರೇ ಇದೇನಿದು ಕೂಲ್ ಡ್ರಿಂಕ್ಸ್ ನಿಂದ ಆಮ್ಲೆಟಾ ತಯಾರಿಸುತ್ತಾರಾ ಎಂದು ಆಶ್ಚರ್ಯಪಡಬೇಡಿ. ನಿಜವಾಗಿಯೂ ಕೂಲ್ ಡ್ರಿಂಕ್ಸ್ ನಿಂದ ಆಮ್ಲೆಟ್ ತಯಾರಿಸಲಾಗಿದೆ. ಇದಕ್ಕೆ ‘ಫ್ಯಾಂಟಾ ಆಮ್ಲೆಟ್ ಫ್ರೈ’ ಅಂತಾ ಕೂಡ ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಹೌದು, ಸೋಷಿಯಲ್ ಮೀಡಿಯಾದಲ್ಲಿ ‘ಫ್ಯಾಂಟಾ ಆಮ್ಲೆಟ್ ಫ್ರೈ’(Fanta Omelette Recipe)ಸಖತ್ ಸದ್ದು ಮಾಡುತ್ತಿದೆ. ಗುಜರಾತ್ ನ ಸೂರತ್‌ನಲ್ಲಿ ಫ್ಯಾಂಟಾ ಕೂಲ್ ಡ್ರಿಂಗ್ಸ್ ನಿಂದ ಆಮ್ಲೆಟ್ ತಯಾರಿಸಲಾಗಿದೆ. ಈ ಆಮ್ಲೆಟ್ ರೇಟ್ ಎಷ್ಟು ಅಂತೀರಾ..? ಬರೋಬ್ಬರಿ 250 ರೂ. ಇತ್ತೀಚೆಗಷ್ಟೇ ಫುಡ್(Food) ಬ್ಲಾಗರ್ ವೊಬ್ಬರು ಸೂರತ್‌ನಲ್ಲಿರುವ ಫ್ಯಾಂಟಾ ಕೂಲ್ ಡ್ರಿಂಗ್ಸ್ ನಿಂದ ಆಮ್ಲೆಟ್ ತಯಾರಿಸುವ ಅಂಗಡಿಗೆ ಭೇಟಿ ನೀಡಿದ್ದರು. ಈ ವಿಶೇಷ ಆಮ್ಲೆಟ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ವಿಡಿಯೋ ರೆಕಾರ್ಡ್ ಮಾಡಿ ಅದನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.


Viral Video: ಸನ್‌ಗ್ಲಾಸ್‌ ತೊಟ್ಟು ನಾನು ಹೇಗೆ ಕಾಣುತ್ತೇನೆ ಎಂದ ಒರಾಂಗುಟಾನ್..!


ಇಂಡಿಯಾ ಈಟ್ ಮೇನಿಯಾ ಯೂಟ್ಯೂಬ್(YouTube) ಚಾನೆಲ್ ನಲ್ಲಿ ಶೇರ್ ಮಾಡಿದ ಬಳಿಕ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬಳಿಕ ಅದು ಟ್ವೀಟರ್, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್ ಗಳಲ್ಲಿಯೂ ಶೇರ್ ಆಗುತ್ತಿದೆ. ಅನೇಕ ಟಿಜನ್‌ಗಳು ಮೊಟ್ಟೆ ಮತ್ತು ಫ್ಯಾಂಟಾದ ಈ ರೆಸಿಪಿ(Recipe) ನೋಡಿ ಅಸಹ್ಯಪಟ್ಟುಕೊಂಡಿದ್ದಾರೆ.


ಇದನ್ನೂ ಓದಿ: ತ್ರಿಪುರಾ ಸಿಎಂ ಬಿಬ್ಲಬ್ ದೇವ್ ಹತ್ಯೆಗೆ ಯತ್ನ: ಮೂವರ ಬಂಧನ


ವಿಡಿಯೋದಲ್ಲಿ ಮೊದಲಿಗೆ ಮೊಟ್ಟೆಗಳನ್ನು ಒಡೆದು ಹಾಕಲಾಗುತ್ತದೆ. ಅದಕ್ಕೆ ಅಗತ್ಯವಿರುವ ಎಲ್ಲ ಪದಾರ್ಥಗಳನ್ನು ಹಾಕಿದ ನಂತರ ಫ್ಯಾಂಟಾವನ್ನು ಅದರಲ್ಲಿ ಸುರಿಯಲಾಗುತ್ತದೆ. ಬಳಿಕ ಅದನ್ನು ಕಲಕಿ ಸರಿಯಾಗಿ ಫ್ರೈ ಮಾಡಲಾಗುತ್ತದೆ. ಬಳಿಕ ಬಿಸಿ ಬಿಸಿ ‘ಫ್ಯಾಂಟಾ ಆಮ್ಲೆಟ್ ಫ್ರೈ’(Fanta Omelette Fry)ಅನ್ನು ಬಳಿದು ಗ್ರಾಹಕರಿಗೆ ನೀಡಲಾಗುತ್ತದೆ. ಈ ಆಮ್ಲೆಟ್ ತಯಾರಿಸುವ ವಿಧಾನ ನೋಡಿಕೊಳ್ಳುವಷ್ಟು ಸರಿಯಾಗಿಲ್ಲ. ಹೀಗಾಗಿ ಅದು ನೋಡುಗರಿಗೆ ಅಸಹ್ಯ ಮೂಡಿಸುವಂತಿದೆ. ಹೀಗೂ ಆಮ್ಲೆಟ್ ತಯಾರಿಸುತ್ತಾರಾ..? ಅಂತಾ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ